ಸಾರಾಂಶ
ಮೇಳದಲ್ಲಿ ನಲವತ್ತು ಮಳಿಗೆ ಇದ್ದವು. ಕಸೂತಿ ಮತ್ತು ಹತ್ತಿ ಹಾರಗಳ ತಜ್ಞೆ, ಎಂಬೈತ್ತೈದು ವರ್ಷ ವಯಸ್ಸಿನ ರಮಾಮಣಿ ಅವರ ಮಳಿಗೆ ಎಲ್ಲರ ಗಮನ ಸೆಳೆಯಿತು
ಕನ್ನಡಪ್ರಭ ವಾರ್ತೆ ಮೈಸೂರುಸಂಕೇತಿಗಳ ಪಾಕ ಪದ್ಧತಿಗಳನ್ನು ಮತ್ತು ಕರಕುಶಲ ಪರಿಣತಿಯನ್ನು ತಿಳಿದುಕೊಳ್ಳಲು ''''''''ಸಂಕೇತಿ ಸಂಭ್ರಮ'''''''' ಉತ್ತಮ ವೇದಿಕೆಯಾಗಿದೆ ಎಂದು ಹಿರಿಯ ಲೇಖಕ ರಘುಪತಿ ತಾಮ್ಹನ್ ಕರ್ ಹೇಳಿದರು. ನಗರದ ಜೆ.ಎಲ್.ಬಿ ರಸ್ತೆಯ ಶಾರದಾ ಕನ್ವೆನ್ಷನ್ ಹಾಲ್ ನಲ್ಲಿ ಭಾನುವಾರ ಏರ್ಪಡಿಸಿದ್ದ ''''''''ಸಂಕೇತಿ ಮೇಳ'''''''' ಉದ್ಘಾಟಿಸಿ ಅವರು ಮಾತನಾಡಿದರು.
ಮೇಳದಲ್ಲಿ ನಲವತ್ತು ಮಳಿಗೆ ಇದ್ದವು. ಕಸೂತಿ ಮತ್ತು ಹತ್ತಿ ಹಾರಗಳ ತಜ್ಞೆ, ಎಂಬೈತ್ತೈದು ವರ್ಷ ವಯಸ್ಸಿನ ರಮಾಮಣಿ ಅವರ ಮಳಿಗೆ ಎಲ್ಲರ ಗಮನ ಸೆಳೆಯಿತು. ರಾಧಿಕಾ ಅವರು ತಾವೇ ತಯಾರಿಸಿದ ವ್ಯಾನಿಟಿ ಬ್ಯಾಗುಗಳನ್ನು ಪ್ರದರ್ಶಿಸಿದರು. ರಂಜಿನಿ ಹೆಬ್ಬಾರ ಅವರ ವಿನೂತನ ಪೇಂಟಿಂಗ್ ಎಲ್ಲರ ಗಮನ ಸೆಳೆಯಿತು. ಸಹನಾ ಅವರು ತಮ್ಮ ತಾಯಿ ಸುಜಾತಾ ತಯಾರಿಸಿದ ಪುರಿಖಾರವನ್ನು ಸ್ಯಾಂಪಲ್ ಕೊಟ್ಟು ಪರೀಕ್ಷಿಸಲು ಹೇಳಿ ವ್ಯಾಪಾರ ಮಾಡಿದರು. ಶ್ಯಾಮಲಾ ರಾಧೇಶ್ ಅವರ ಕೃತಕ ಆಭರಣಗಳು ಪ್ರದರ್ಶನಕ್ಕಿದ್ದವು. ಹೌಸಿ ಹೌಸಿಯನ್ನು ಕೃಪಾ ತಂಡದವರು ನಿರ್ವಹಿಸಿದರು. ವೀಣಾ ಕೆ.ಆರ್. ಮತ್ತು ಪದ್ಮಾ ತಂಡ ವಿವಿಧ ಆಟಗಳನ್ನು ಆಡಿಸಿತು. ರೂಪಾ ಸ್ವಾಗತಿಸಿದರು. ಶೈಲಾ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.