ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಬೇಡ. ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ಮುಜುಗರ, ಹಿಂಜರಿಕೆ ಬಿಟ್ಟುತಮ್ಮ ಮಕ್ಕಳನ್ನು ಸೇರಿಸಿ ಶಾಲೆಯ ಬಗ್ಗೆ ಅಭಿಮಾನ ಮೆರೆಯಬೇಕು ಎಂದು ಶಾಸಕ ಬಿ.ಸುರೇಶ್‌ಗೌಡರು ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಬೇಡ. ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ಮುಜುಗರ, ಹಿಂಜರಿಕೆ ಬಿಟ್ಟುತಮ್ಮ ಮಕ್ಕಳನ್ನು ಸೇರಿಸಿ ಶಾಲೆಯ ಬಗ್ಗೆ ಅಭಿಮಾನ ಮೆರೆಯಬೇಕು ಎಂದು ಶಾಸಕ ಬಿ.ಸುರೇಶ್‌ಗೌಡರು ಹೇಳಿದರು.ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿಯ ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡದ ನವೀಕರಣಕ್ಕೆ 1.4 ಕೋಟಿ ರು. . ವೆಚ್ಚದ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ದೇಶದ ಅನೇಕ ಮಹನೀಯರು ಸರ್ಕಾರಿ ಶಾಲೆಗಳಲ್ಲೇ ಓದಿ ಉನ್ನತ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮಶಿಕ್ಷಕರು, ಗುಣಮಟ್ಟದ ಸೌಕರ್ಯಗಳಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನೂ ಸರ್ಕಾರಿ ಶಾಲೆಯಲ್ಲೇ ಓದಿದ್ದು, ಶಾಲೆ ಕೇವಲ ಕಟ್ಟಡವಲ್ಲ, ಇದೊಂದು ಜ್ಞಾನದೇಗುಲ. ಸರ್ಕಾರಿ ಶಾಲೆಗಳು ಸಮಾಜದ ಆಸ್ತಿ, ಅವುಗಳನ್ನು ಕಾಳಜಿಯಿಂದ ಕಾಪಾಡಿಕೊಂಡು ಬೆಳೆಸಬೇಕು ಎಂದು ಮನವಿ ಮಾಡಿದರು.ಆಗಿನ ಶಾಸಕ ಮೂಡಲಗಿರಿಯಪ್ಪನವರು ಹಾಗೂ ಮೈಸೂರು ಮಹಾರಾಜರು ಅಡಿಗಲ್ಲು ಹಾಕಿದ್ದ ನಾಗವಲ್ಲಿ ಸರ್ಕಾರಿ ಶಾಲೆ ವಿಶೇಷ ಮಹತ್ವ ಪಡೆದುಕೊಂಡಿದೆ, ರಾಜ್ಯ ಸರ್ಕಾರದ ಗೋವಿಂದೇಗೌಡ ಉತ್ತಮ ಶಾಲೆ ಪ್ರಶಸ್ತಿಯನ್ನು ಈ ಶಾಲೆ ಪಡೆದುಕೊಂಡಿದೆ. ಮುಂದೆ ರಾಷ್ಟ್ರಮಟ್ಟದಲ್ಲಿಯೂ ಶಾಲೆ ಹೆಸರಾಗುವಂತೆ ಪ್ರಯತ್ನ ಮಾಡಿರಿ.ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇಕಡ ನೂರರಷ್ಟು ಫಲಿತಾಂಶ ಪಡೆಯಲು ಶಿಕ್ಷಕರು ಶ್ರಮಿಸಬೇಕುಎಂದು ಹೇಳಿದರು.ಅನುದಾನಕ್ಕಾಗಿ ಹೋರಾಟ ನಾಗವಲ್ಲಿ ಕೆಪಿಎಸ್ ಶಾಲೆ ಕಟ್ಟಡ ನಿರ್ಮಾಣಕ್ಕೆ ಈ ಹಿಂದೆ ಮಂಜೂರಾಗಿದ್ದ ಅನುದಾನ ಕಾರಣಾಂತರದಿಂದ ಸರ್ಕಾರಕ್ಕೆ ವಾಪಸ್ಸಾಗಿತ್ತು. ಅನುದಾನವನ್ನು ವಾಪಸ್‌ ತರಲು ತಾವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸದನದಲ್ಲಿದೊಡ್ಡ ಹೋರಾಟವನ್ನೇ ಮಾಡಬೇಕಾಯಿತು. ಈಗ ಎಲ್ಲವೂ ಸುಖಾಂತ್ಯವಾಗಿ ಅನುದಾನ ಬಂದಿದೆ ಅದರಲ್ಲಿ ಮಾರ್ಚ್ ವೇಳೆಗೆ ಸುಸಜ್ಜಿತ ಶಾಲೆ ನಿರ್ಮಾಣ ಮಾಡಲಾಗುತ್ತದೆ ಎಂದು ಸುರೇಶ್‌ಗೌಡರು ಹೇಳಿದರು.ನಾಗವಲ್ಲಿಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಗಳಗೌರಮ್ಮ, ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದರೇಣುಕಮ್ಮ, ಸುಮಿತ್ರಾದೇವಿ, ಎಸ್‌ಡಿಎಂಸಿ ಉಪಾಧ್ಯಕ್ಷ ನಾಗರಾಜು, ಪ್ರಾಂಶುಪಾಲರಾದ ನಾಗರಾಜು, ಸಿದ್ಧರಾಜು, ಪ್ರಾಥಮಿಕ ಶಾಲೆಯ ಲಲಿತಮ್ಮ, ತಾಲೂಕು ಜೆಡಿಎಸ್‌ ಅಧ್ಯಕ್ಷರಾಮಣ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ್, ಗುತ್ತಿಗೆದಾರ ಕೋಡಿಪಾಳ್ಯ ನಾಗಣ್ಣ ಸೇರಿದಂತೆಗ್ರಾಮದ ಮುಖಂಡರು ಸಮಾರಂಭದಲ್ಲಿ ಭಾಗವಹಿಸಿದ್ದರು. ಇದೆ ವೇಳೆ ನಾಗವಲ್ಲಿಯಲ್ಲಿ ಜಲಜೀವನ್ ಮಿಷನ್‌ ಯೋಜನೆಯಡಿ ಓವರ್‌ ಹೆಡ್‌ಟ್ಯಾಂಕ್ ನಿರ್ಮಾಣ, ಮನೆಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ 174 ಲಕ್ಷ ರು.ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಹೊನ್ನಡಿಕೆಯಲ್ಲಿ 155 ಲಕ್ಷರೂ. ಹಾಗೂ ಸಾಸಲಯ್ಯನಪಾಳ್ಯದಲ್ಲಿ 8.64 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ಮನೆಮನೆಗೆ ನಲ್ಲಿ ಸಂಪರ್ಕಕಾಮಗಾರಿಗೆಗುದ್ದಲಿಪೂಜೆ ಮಾಡಿದರು.