ಸಾರಾಂಶ
ಜನ್ಮ ನೀಡಿದ ತಂದೆ, ತಾಯಿಯನ್ನು ಸದಾ ಗೌರವಿಸಿ. ವಿದ್ಯೆ ಕಲಿಸಿದ ಗುರುವಿಗೆ ಸ್ಮರಿಸಿ ಕಲಿತ ಶಾಲೆ ಹಿಂದುರಿಗಿ ನೋಡಿ ಎಂದು ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ್ ಅವರು ಮಾಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಆಳಂದ
ಜನ್ಮ ನೀಡಿದ ತಂದೆ, ತಾಯಿಯನ್ನು ಸದಾ ಗೌರವಿಸಿ. ವಿದ್ಯೆ ಕಲಿಸಿದ ಗುರುವಿಗೆ ಸ್ಮರಿಸಿ ಕಲಿತ ಶಾಲೆ ಹಿಂದುರಿಗಿ ನೋಡಿ ಎಂದು ಮುಖ್ಯಮಂತ್ರಿ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ್ ಅವರು ಮಾಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ತಾಲೂಕಿನ ಸರಸಂಬಾ ಗ್ರಾಮದ ಕ್ರಾಂತಿವೀರ ದಿ. ರಾಮಚಂದ್ರಪ್ಪ ಪಾಟೀಲ್ ಹಿರಿಯ ಪ್ರಾಥಮಿಕ ಶಾಲೆ, ಎಸ್.ನಿಜಲಿಂಗಪ್ಪ ಗ್ರಾಮೀಣ ವಸತಿ ಪ್ರೌಢಶಾಲೆಯ 1994-95ನೇ ಪ್ರಥಮ ವರ್ಷದ ಮಾಜಿ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿರು.
ಸಮತಾ ಲೋಕ ಶಿಕ್ಷಣ ಸಮಿತಿ ಆಡಳಿತಾಧಿಕಾರಿ ಮಹಾದೇವಪ್ಪ ಪಾಟೀಲ್, ಶಿಕ್ಷಕ ಡಿ.ಎಂ.ಪಾಟೀಲ್, ಬಸವರಾಜ ಕೋರಳ್ಳಿ, ಮಾಣಿಕ ಘೋಡಕೆ, ರಮೇಶ ಖಾನಾಪೂರೆ, ಮಾಜಿ ವಿದ್ಯಾರ್ಥಿ ಅನೀತಾ ಡಿ. ಭಕರೆ, ಕರುಣಾ ಪಾಟೀಲ್ ಮಾತನಾಡಿದರು.ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡ ಪಂಡಿತ ಜಿಡಗೆ, ಜಗನ್ನಾಥ ದೇಶಮುಖ, ಗುರುಲಿಂಗಪ್ಪ ಪಾಟೀಲ್, ಹಜರತ ಪಟೇಲ್, ಪಂಡಿತ ಖಾನಾಪೂರೆ, ಸಿದ್ರಾಮಪ್ಪ ಮಡ್ಡೆ, ವಿಜಯಕುಮಾರ ಮಾಶಾಳೆ, ಅಣ್ಣಾರಾವ ಬುರಾಣಪೂರೆ, ಸಂದೀಪ ಕಾಸಾರ, ಸಚಿನ ಭಕರೆ, ಜಲಜಾಕ್ಷಿ ಕೋರೆ, ಸುವರ್ಣ ಕಿಣಗಿ, ಸುಮಿತ್ರಾ ಖಾನಾಪೂರೆ, ವಿಜಯಕುಮಾರ ಗುಂಜುಟಿ, ರವಿಚಂದ್ರ ಪೈಲವಾನ ಇದ್ದರು.
ಸಿದ್ದೇಶ್ವರಿ ಭಿಕಮಾಳೆ ಸ್ವಾಗತಿಸಿದರು. ಮಲ್ಲಿನಾಥ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಗುರು ವಿಠ್ಠಲ ಹವಲ್ದಾರ ನಿರೂಪಿಸಿದರು. ಹುಸೇನಭಾಷಾ ಶೇಖ್ ವಂದಿಸಿದರು. ಮಾಜಿ ವಿದ್ಯಾರ್ಥಿಗಳು ಗುರುಗಳಿಗೆ ಗುಲಾಬಿ ಹೂವಿನಿಂದ ಸ್ವಾಗತಿಸಿ ಸ್ಮರಣಿಕೆ ನೀಡಿ ಗೌರವಿಸಿ ಗುರುವಂದನೆ ಸಲ್ಲಿಸಿದರು.