ಸಾರಾಂಶ
ದೇಶದ ಸುಭದ್ರತೆಗಾಗಿ ನಾವು- ನಮಗಾಗಿ ದೇಶ ಎಂಬ ತತ್ವದಡಿ ಎನ್ ಡಿಎ ಮೈತ್ರಿಕೂಟದ ನಮ್ಮ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನವರು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವುದು ನಮ್ಮ ಪ್ರಮುಖ ಗುರಿ ಎಂದು ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗು ಬಿಜೆಪಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್
ಕನ್ನಡಪ್ರಭ ವಾರ್ತೆ, ಕಡೂರುದೇಶದ ಸುಭದ್ರತೆಗಾಗಿ ನಾವು- ನಮಗಾಗಿ ದೇಶ ಎಂಬ ತತ್ವದಡಿ ಎನ್ ಡಿಎ ಮೈತ್ರಿಕೂಟದ ನಮ್ಮ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನವರು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವುದು ನಮ್ಮ ಪ್ರಮುಖ ಗುರಿ ಎಂದು ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗು ಬಿಜೆಪಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಬಿಜೆಪಿ- ಜೆಡಿಎಸ್ ಮೈತ್ರಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರಿಗೆ ದೇಶದ ಪರವಾಗಿ ಮತ ಚಲಾಯಿಸಿ ಅವರನ್ನು ಗೆಲ್ಲಿಸಲು ಜನರು ತೀರ್ಮಾನ ಮಾಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆಯೇ ಬಹು ದೊಡ್ಡ ಮಟ್ಟದ ಹೆಚ್ಚಿನ ಮತಗಳನ್ನು ಪಡೆಯುತ್ತೇವೆ ಎಂಬ ಆತ್ಮವಿಶ್ವಾಸ ತಮಗಿದೆ ಎಂದರು.ನಾವು ಯಾರನ್ನು ಟೀಕೆ ಮಾಡದೆ ಚುನಾವಣೆ ನಡೆಸುತ್ತೇವೆ. ವಿನಹ ಅದರ ಅಗತ್ಯವೂ ಕೂಡ ನಮಗಿಲ್ಲ. ನಮ್ಮ ಕ್ಷೇತ್ರದ 49 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಬೂತ್ ಗಳಲ್ಲಿ ನಮ್ಮ ಅಭ್ಯರ್ಥಿಗಳಲ್ಲಿ ಮತ ಕೊಡಿಸುತ್ತೇವೆ ಎಂದರು.ಸಂಸದ ಪ್ರಜ್ವಲ್ ರೇವಣ್ಣ 5 ವರ್ಷಗಳ ಅವಧಿಯಲ್ಲಿ ಅನೇಕ ಬಾರಿ ಕಡೂರು ಕ್ಷೇತ್ರಕ್ಕೆ ಬಂದಿದ್ದಾರೆ. ಎರಡು ವರ್ಷಗಳ ಕೊರೊನಾದಲ್ಲಿ ಮಾಜಿ ಶಾಸಕ ವೈ.ಎಸ್ ವಿ.ದತ್ತ ಅವರೊಂದಿಗೆ ಸೇರಿ ಪ್ರಜ್ವಲ್ ರೇವಣ್ಣ ಬಡವರು ಹಾಗು ಸಂತ್ರಸ್ತರಿಗೆ ಆಹಾರದ ಕಿಟ್ ಗಳನ್ನು ವಿತರಿಸಿ ಸಹಕಾರ ನೀಡಿದ್ದರು.ಕೇಂದ್ರದ ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇಕಡವಾರು ಪಾಲು ಇರುತ್ತದೆ. ಪ್ರತಿ ವರ್ಷದ ಮಾಹಿತಿ ಯನ್ನು ಕೇಂದ್ರ- ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಯೋಜನೆಗಳು ಯಾವುವು ಎಂಬ ಮಾಹಿತಿ ಸಿಗುತ್ತದೆ. ಜಲ ಜೀವನ ಮಿಷನ್ ಯೋಜನೆ ಕೇಂದ್ರದ ಸಂಸದರ, ಶಾಸಕರ ಶ್ರಮ ಇಲ್ಲದೆ ಯಾವ ಯೋಜನೆಗಳು ಬರುವುದಿಲ್ಲ. ಈ ಬಗ್ಗೆ ಅನಗತ್ಯ ಚರ್ಚೆ ವಾದದಿಂದ ಪ್ರಯೋಜನವಿಲ್ಲ ಎಂದರು. ಗ್ರಾಮ ಪಂಚಾಯತಿಗಳಲ್ಲಿ ಹೆಚ್ಚಾಗಿ ಕೇಂದ್ರ ಸರ್ಕಾರದ ಅನುದಾನಗಳು ನರೇಗಾ, ಪಿಎಂಜಿಎಸ್ ವೈ. ಯೋಜನೆಗಳು ಕೇಂದ್ರ ಸರ್ಕಾರದ ಪಾಲು ಹೆಚ್ಚು ಎಂಬುದು ತಿಳಿದರೆ ಸಾಕು. ಈ ಬಾರಿ ಕ್ಷೇತ್ರದ ಜನರು ಕಾಂಗ್ರೆಸ್ ಶಾಸಕರಿಗೆ ತೀರ್ಪು ನೀಡಿದ್ದು, ಅವರು ಜನ ನೀಡಿರುವ ತೀರ್ಪಿಗೆ ತಕ್ಕಂತೆ ಕ್ಷೇತ್ರದ ಅಭಿವೃದ್ಧಿ ಮಾಡಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೆ.ಆರ್.ಮಹೇಶ್ ಒಡೆಯರ್, ಗೋವಿಂದರಾಜು, ಚಿನ್ನರಾಜು,ಮಲ್ಲಿಕಾರ್ಜುನ (ಮಲ್ಲು), ಚೌಳ ಹಿರಿಯೂರು ರವಿ, ಕಡೂರು ಎ.ಮಣಿ, ಚಂದ್ರು ಶ್ರೀನಿವಾಸ್, ನಾಗೇಂದ್ರ ಅಗ್ನಿ ಮತ್ತಿತರರು ಇದ್ದರು
24 ಕೆಕೆಡಿಯು 1 ಬೆಳ್ಳಿ ಪ್ರಕಾಶ್..;Resize=(128,128))
;Resize=(128,128))
;Resize=(128,128))