ಜಿಸಿಪಿಎಎಸ್‌ನಲ್ಲಿ ಕೋಭಾರ್ - ಮಂಜೂಷಾ ಕಲಾ ಕಾರ್ಯಾಗಾರ

| Published : Apr 25 2024, 01:03 AM IST

ಸಾರಾಂಶ

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್)ನ ಆಶ್ರಯದಲ್ಲಿ ಕೋಭಾರ್ ಮತ್ತು ಮಂಜೂಷಾ ಸಾಂಪ್ರದಾಯಿಕ ಕಲಾ ಪ್ರಕಾರಗಳ ಕುರಿತ ಕಾರ್ಯಕ್ರಮ ನಡೆಯಿತು. ಕೋಭಾರ್ ಚಿತ್ರಕಲೆಯು ಮದುವೆಯ ಪೂರ್ವ ಆಚರಣೆಯ ಭಾಗವಾಗಿದೆ. ಮಂಜುಷಾ ಚಿತ್ರಕಲೆ ಪೌರಾಣಿಕ ವಿಷಯಗಳನ್ನು ಹೊಂದಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಕಲೆಯು ಜಾತಿ ಮತ್ತು ಧರ್ಮಗಳ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಬಿಹಾರದ ಕಲಾವಿದರಾದ ಶ್ರವಣ್ ಕುಮಾರ್ ಪಾಸ್ವಾನ್ ಮತ್ತು ಪವನ್ ಕುಮಾರ್ ಹೇಳಿದರು.

ಅವರು ಇಲ್ಲಿನ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್)ನ ಆಶ್ರಯದಲ್ಲಿ ನಡೆದ ಕೋಭಾರ್ ಮತ್ತು ಮಂಜೂಷಾ ಸಾಂಪ್ರದಾಯಿಕ ಕಲಾ ಪ್ರಕಾರಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಾಂಪ್ರದಾಯಿಕ ಕಲೆಗಳು ಆರಂಭದಲ್ಲಿ ಕೆಲವು ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗಿದ್ದರೂ, ಇಂದು ಅವುಗಳನ್ನು ಮೀರಿ ಆಚರಣೆಯಲ್ಲಿದೆ. ಈ ಕಲೆಯ ಪ್ರಕ್ರಿಯೆಯಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ಪರಸ್ಪರ ಅವಲಂಬನೆ ಇದೆ ಎಂದು ಅವರು ಹೇಳಿದರು.

ಕೋಭಾರ್ ಚಿತ್ರಕಲೆಯು ಮದುವೆಯ ಪೂರ್ವ ಆಚರಣೆಯ ಭಾಗವಾಗಿದೆ. ಮಂಜುಷಾ ಚಿತ್ರಕಲೆ ಪೌರಾಣಿಕ ವಿಷಯಗಳನ್ನು ಹೊಂದಿದೆ. ಬಿದಿರಿನ ಕುಂಚ ಮತ್ತು ನೈಸರ್ಗಿಕ ಬಣ್ಣಗಳನ್ನು ಸಾಮಾನ್ಯವಾಗಿ ಇದರಲ್ಲಿ ಬಳಸಲಾಗುತ್ತದೆ ಎಂದು ಅವರು ವಿವರಿಸಿದರು.

ಜಿ.ಸಿ.ಪಿ.ಎ.ಎಸ್. ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಕಲಾವಿದರಾದ ಡಾ.ಜನಾರ್ದನ್ ಹಾವಂಜೆ, ಡಾ.ರಾಜಾರಾಂ ತೋಳ್ಪಾಡಿ, ಡಾ.ಭ್ರಮರಿ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.