ಸೋಮವಾರ ಬಾಗಲಕೋಟೆ ಜಿಲ್ಲೆ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.೨೨ ರಲ್ಲಿನ ಪ್ಲೇಟ್ ಮುರಿದು ಅಪಾರ ಪ್ರಮಾಣದ ನೀರು ಹರಿದುಹೋಗಿದ್ದು, ಜನತೆಗೆ ಕುಡಿಯುವ ನೀರಿನ ಬವಣೆ ಭೀತಿ ಕಾಡುತ್ತಿದೆ. ಒಂದೆಡೆ ಅಧಿಕಾರಿಗಳಿಗೆ ದಿಕ್ಕು ತೋಚದಂತಾಗಿದ್ದು, ಮತ್ತೊಂದೆಡೆ ರಾಜಕೀಯ ಮೇಲಾಟ ಜೋರಾಗಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸೋಮವಾರ ಬಾಗಲಕೋಟೆ ಜಿಲ್ಲೆ ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.೨೨ ರಲ್ಲಿನ ಪ್ಲೇಟ್ ಮುರಿದು ಅಪಾರ ಪ್ರಮಾಣದ ನೀರು ಹರಿದುಹೋಗಿದ್ದು, ಜನತೆಗೆ ಕುಡಿಯುವ ನೀರಿನ ಬವಣೆ ಭೀತಿ ಕಾಡುತ್ತಿದೆ. ಒಂದೆಡೆ ಅಧಿಕಾರಿಗಳಿಗೆ ದಿಕ್ಕು ತೋಚದಂತಾಗಿದ್ದು, ಮತ್ತೊಂದೆಡೆ ರಾಜಕೀಯ ಮೇಲಾಟ ಜೋರಾಗಿದೆ.ಗುರುವಾರ ಸ್ಥಳಕ್ಕೆ ಭೇಟಿನೀಡಿದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಸುದ್ದಿಗಾರರೊಂದಿಗೆ ಮಾತನಾಡಿ, ಗೇಟ್‌ನ ಪ್ಲೇಟ್ ಮುರಿದಿರುವುದಕ್ಕೆ ಸರ್ಕಾರವೇ ಹೊಣೆಯೆಂದು ವಿನಾಕಾರಣ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸುತ್ತಿರುವ ತೇರದಾಳ ಶಾಸಕ ಸಿದ್ದು ಸವದಿ ನೈಜತೆ ಅರಿತು ಮಾತನಾಡಲಿ ಎಂದು ಶಾಸಕ ಸವದಿ ವಿರುದ್ಧ ಹರಿಹಾಯ್ದರು.
ಮೂರು ವರ್ಷಗಳ ಹಿಂದೆ ಇಂತಹದ್ದೇ ಪ್ರಸಂಗ ನಡೆದಾಗ ಸವದಿಯವರೇ ಶಾಸಕರಾಗಿದ್ದರು. ಆವಾಗ ಹೊಸ ಗೇಟ್ ಅಳವಡಿಕೆ ಮಾಡುವ ಬದಲು ಈಗ ಬೂಟಾಟಿಕೆ ಮಾತುಗಳನ್ನಾಡುತ್ತಿರುವುದು ವಿಚಿತ್ರವಾಗಿದೆ. ಕ್ಷೇತ್ರದ ಶಾಸಕರಾಗಿ ಜನಸಾಮಾನ್ಯರಿಗೆ ಆಗಿರುವ ತೊಂದರೆ ನಿವಾರಿಸುವ ಬದಲು ವೃಥಾ ಆರೋಪಗಳಿಂದ ಹತಾಶೆ ಭಾವನೆ ತೋರುತ್ತಿದ್ದಾರೆ. ಇದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿಯೊಂದಿಗೆ ಸಮಸ್ಯೆಗಳ ಸಂದರ್ಭ ಪರಿಹರಿಸುವ ಕಾರ್ಯದಲ್ಲಿ ತೊಡಗುವುದು ಜನಪ್ರನಿಧಿಯ ಕರ್ತವ್ಯ ಎಂಬುದನ್ನು ಮರೆತಿದ್ದಾರೆದನ್ನು ಸವದಿಯವರು ಅಳವಡಿಸಿಕೊಳ್ಳಲಿಯೆಂದು ದೂರಿದರು.ಕೆಲಸವಾದಾಗ ನಾನು, ಸಮಸ್ಯೆಗಳಿಗೆ ನೀವು : ಯಾವುದೇ ಕಾರ್ಯಗಳಾದಾಗ ಜನರ ಮುಂದೆ ನಿಂತು ನಾನೇ ಮಾಡಿದ್ದು ಎಂದು ಹೇಳುತ್ತ, ಸಮಸ್ಯೆಗ ಬಂದಾಗ ಸರ್ಕಾರ ಹೊಣೆಯೆಂದು ಪೊಳ್ಳು ಆರೋಪ ಮಾಡುವ ಚಾಳಿಯನ್ನು ಶಾಸಕರು ಬಿಡಬೇಕೆಂದು ಸಿದ್ದು ಕೊಣ್ಣೂರ ಕಿವಿಮಾತು ಹೇಳಿದರು.
ನಾವು ಮಾಡಿಲ್ಲವೇ? ನೀವಾದ್ರೂ ಮಾಡಿ: ಹಿಪ್ಪರಗಿ ಬ್ಯಾರೇಜ್‌ನಲ್ಲಿ ೨ ಟಿಎಂಸಿಗಿಂತಲೂ ಅಧಿಕ ನೀರು ಪೋಲಾಗಿದೆ. ಇದರ ದುರಸ್ತಿ ಕಾರ್ಯದೊಂದಿಗೆ ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ರೈತರು ಹಾಗೂ ಜನಸಾಮಾನ್ಯರ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುವ ಬದಲು ನಮ್ಮ ಸರ್ಕಾರದ ಅವಧಿಯಲ್ಲಾಗಿಲ್ಲವೆಂದು ಬೂಟಾಟಿಕೆ ಉತ್ತರ ಹೇಳುವುದು ಸರಿಯಲ್ಲವೆಂದು ತೇರದಾಳ ಶಾಸಕ ಸಿದ್ದು ಸವದಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.ನೀರಾವರಿ ಸಚಿವರು ಏಕೆ ಬರಲಿಲ್ಲ:
ನಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ನಿರ್ಲಕ್ಷ್ಯ ಅಥವಾ ಅಪಾರ ಪ್ರಮಾಣದ ನೀರು ಪೋಲಾಗಿಲ್ಲ. ಇಷ್ಟೊಂದು ಭೀಕರ ಸಮಸ್ಯೆ ಎದುರಾಗಿದ್ದರೂ ನೀರಾವರಿ ಸಚಿವರು ಇತ್ತ ಸುಳಿಯದಿರುವುದು ಉತ್ತರ ಕರ್ನಾಟಕದ ಬಗ್ಗೆ ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ತುಂಗಭದ್ರ ಜಲಾಶಯದಲ್ಲಿ ಇಂತಹ ಸಮಸ್ಯೆ ಉಂಟಾಗಿದ್ದಾಗ ಒಂದೇ ದಿನದೊಳಗಾಗಿ ದುರಸ್ತಿ ಕಾರ್ಯ ಮಾಡಿದ್ದರು.ಮೊಸರಲ್ಲಿ ಕಲ್ಲು ಹುಡುಕುವ ಕಾರ್ಯ ಕಾಂಗ್ರೆಸ್‌ನದ್ದಾಗಿದ್ದು, ರೈತರ ಹಿತ ಕಾಪಾಡುವ ಬದಲು ನೀರಿನ ಮೇಲೆ ರಾಜಕಾರಣ ಸಲ್ಲದು ಎಂದು ಸವದಿ ತಿಳಿಸಿದರು. ಈ ಕುರಿತಾಗಿ ಸರ್ಕಾರವನ್ನು ಆಪಾದಿಸುತ್ತಿದ್ದಂತೆ ನಮ್ಮ ಮೇಲೆಯೇ ಗೂಬೆ ಕೂಡ್ರಿಸುವ ತಂತ್ರಗಾರಿಕೆ ಸರ್ಕಾರದ್ದು. ಆಪಾದನೆಯನ್ನು ಸರ್ಕಾರದ ವಿರುದ್ಧ ಬದಲಾಗಿ ಸಾರ್ವಜನಿಕರ ವಿರುದ್ಧ ಮಾಡಬೇಕೆ? ಎಂದು ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ್ದ ಸವದಿ ಸಮರ್ಥಿಸಿಕೊಂಡರು.