ಸಂಘ ಕಟ್ಟೋದಕ್ಕಿಂತ ಬೆಳೆಸುವುದೇ ಸವಾಲು

| Published : Jul 24 2024, 12:22 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಒಂದು ಸಂಘ ಹುಟ್ಟುಹಾಕುವುದು ಬಹಳ ಸುಲಭ. ಆದರೆ ಅದನ್ನು ಬೆಳೆಸುವುದು ಬಹಳ ಕಷ್ಟದ ಕೆಲಸ. ಸಂಘವನ್ನು ಬೆಳೆಸುವುದರೊಂದಿಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಸಿಕೊಂಡು ಹೋಗುವುದು ಮುಖ್ಯವಾಗಿದೆ ಎಂದು ಗಂಗಾವತಿಯ ಕರ್ನಾಟಕ ರಾಜ್ಯ ಶಾಮಿಯಾನ ಡೇಕೋರೇಶನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧ ಸಂಘದ ಅಧ್ಯಕ್ಷ ಆರ್.ಲಕ್ಷ್ಮಣ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಒಂದು ಸಂಘ ಹುಟ್ಟುಹಾಕುವುದು ಬಹಳ ಸುಲಭ. ಆದರೆ ಅದನ್ನು ಬೆಳೆಸುವುದು ಬಹಳ ಕಷ್ಟದ ಕೆಲಸ. ಸಂಘವನ್ನು ಬೆಳೆಸುವುದರೊಂದಿಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಸಿಕೊಂಡು ಹೋಗುವುದು ಮುಖ್ಯವಾಗಿದೆ ಎಂದು ಗಂಗಾವತಿಯ ಕರ್ನಾಟಕ ರಾಜ್ಯ ಶಾಮಿಯಾನ ಡೇಕೋರೇಶನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧ ಸಂಘದ ಅಧ್ಯಕ್ಷ ಆರ್.ಲಕ್ಷ್ಮಣ ಹೇಳಿದರು.

ನಗರದ ಮನ್ನತ್ ಪ್ಯಾಲೇಸ್ ಹಾಲ್‌ನಲ್ಲಿ ಜಿಲ್ಲಾ ಮಂಟಪ, ಮೈಕ್, ಲೈಟ್ ಮತ್ತು ಫ್ಲಾವರ್ ಡೇಕೋರೇಟರ್ಸ್‌ ಮಾಲೀಕರ ಸಂಘ ಹಾಗೂ ಗಂಗಾವತಿಯ ಕರ್ನಾಟಕ ರಾಜ್ಯ ಶಾಮಿಯಾನ ಡೇಕೋರೇಶನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದಿಂದ 27ನೇ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಸದ್ಯ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಇದೆ. ಅದೇ ರೀತಿ ನಮ್ಮ ಕ್ಷೇತ್ರದಲ್ಲಿಯೂ ಸ್ಪರ್ಧೆ ಇದೆ. ಆದರೆ ಸಂಘದ ಅಡಿಯಲ್ಲಿ ಬರುವ ಎಲ್ಲರನ್ನು ಬಿಟ್ಟುಕೊಡದೇ ವ್ಯಾಪಾರದಲ್ಲಿ ತೊಡಗಬೇಕು. ಅಲ್ಲದೆ, ಸಂಘದ ಅಡಿಯಲ್ಲಿ ಸರ್ಕಾರದ ದೊರೆಯುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಸಲಹೆ ನೀಡಿದರು.

ಇದೇ ಕಾರ್ಯಕ್ರಮದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಸಂಘದ ಪದಾಧಿಕಾರಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ಅಜೀಜ್ ಢಾಲಾಯತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಯ್ಯ ಅ. ಹಿರೇಮಠ, ಮೆಹಬೂಬ ಮುಲ್ಲಾ, ಶಿವಕುಮಾರ ಹಿರೇಮಠ, ಅಹ್ಮದ ಗುಡಗೇರಿ, ಮಂಜುನಾಥ, ನವೀನ, ವಿಜಯಕುಮಾರ, ಗುಂಡಯ್ಯಸ್ವಾಮಿ ಹಿರೇಮಠ, ರಾಜೇಸಾಬ್, ಮಂಜುನಾಥ ಕೋರಿ, ಮೊಹಮ್ಮದ ಹಾಸೀಮ ಜಕಲಿ, ಮೊಹಮ್ಮದ ರಫೀಕ ಈ. ಮುರಾಳ, ಮುನ್ನಾ ಅತ್ತಾರ, ಮೃತ್ಯುಂಜಯ ಕನನಂದಿ, ಅಬ್ದುಲ್ ಗಫಾರ್ ಹವಾಲ್ಧಾರ, ಡೊಂಗ್ರಿ ಕಟಬರ, ದಾವುದ ಕನಸಾನಿ, ದಾವಲಸಾಬ ಬಿರಿ, ನರೇಂದ್ರ ಚೋಪ್ರಾ ಮುಂತಾದವರು ಇದ್ದರು.