ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಿದೆ: ಪರಸನ್‌

| Published : Feb 19 2024, 01:33 AM IST

ಸಾರಾಂಶ

ಚಿತ್ತಾಪುರದ ಗೊಟೂರ ಗ್ರಾಪಂ ವ್ಯಾಪ್ತಿಯ ಕಣಸೂರ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾದ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಕನ್ನಡ ಪ್ರಭ ವಾರ್ತೆ ಚಿತ್ತಾಪುರ

ಭಾರತ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಅವರ ಏಕತೆಗೆ, ಭದ್ರತೆಗೆ, ಒಗ್ಗಟ್ಟಿಗೆ ಧಕ್ಕೆ ಬಾರದಂತೆ ಸರ್ವರಿಗೂ ಸಮಾನವಾದ ಹಕ್ಕನ್ನು ಕಲ್ಪಿಸಲಾಗಿದೆ ಎಂದು ತಾಪಂ ಇಒ ವಿಲಾಸರಾಜ್ ಪರಸನ್ ಹೇಳಿದರು.

ತಾಲೂಕಿನ ಕಣಸೂರ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲೂಕು ಆಡಳಿತ, ಗ್ರಾಪಂ ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿ, ಮೆರಣವಣಿಗೆಯ ನಂತರ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನವು ಜಾರಿಗೆ ಬಂದು ೭೫ ವರ್ಷಗಳು ಪೂರೈಸಿದ ಕಾರಣ ಇದರ ಕುರಿತು ಪ್ರತಿಯೊಬ್ಬರಿಗೂ ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾಥಾ ಹಮ್ಮಿಕೊಂಡಿದೆ. ಪ್ರತಿ ಗ್ರಾಪಂಗಳಿಗೆ ತೆರಳಿ ಅದರ ಮಹತ್ವ ಸಾರುತ್ತಿದೆ. ಇದರ ಪ್ರಯೊಜನವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.

ತಹಸೀಲ್ದಾರ್‌ ಘಮಾವತಿ ರಾಠೋಡ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಶಿವಕುಮಾರ ಕಮಕನೂರ, ತಾಲೂಕು ಅಧಿಕಾರಿಗಳಾದ ಪ್ರಭುಲಿಂಗ ಬುಳ್ಳಾ, ಶಿವಶರಣಪ್ಪ ಮಂಠಾಳಕರ್, ನೋಡಲ್ ಅಧಿಕಾರಿ ಸಿದ್ರಾಮ ದಂಡಗುಂಡ, ಜೆಸ್ಕಾಂ ಅಧಿಕಾರಿ ಅಂಬರಿಶ ವೇದಿಕೆಯಲ್ಲಿದ್ದರು.

ಗ್ರಾಪಂ ಪಿಡಿಒ ಗುರುನಾಥ ರಾಠೋಡ, ರಮೇಶ ಕಟ್ಟಿಮನಿ, ಗ್ರಾಪಂ ಸದಸ್ಯರಾದ ಪ್ರವೀಣ ನಾಮದಾರ, ಇಂದೂಬಾಯಿ ರಾಜಕುಮಾರ ಸಜ್ಜನ್, ಅಣ್ಣಾರಾವ ರಾಠೋಡ, ರಾಕೇಶ ಕಟ್ಟಿಮನಿ, ಶರಣು ಗಂಗ್ಮಾ, ಸದ್ದಾಂ, ಮಲ್ಲಿಕಾರ್ಜುನ ಗ್ರಾಮಸ್ಥರು, ಸ್ವ ಸಹಾಯ ಸಂಘಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕರಾದ ಶಂಕರ ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ ಸಜ್ಜನ್ ಸ್ವಾಗತಿಸಿ, ವಂದಿಸಿದರು.