ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನಾಡಿನ ಮಠ-ಮಾನ್ಯಗಳ ಕೊಡುಗೆ ಅನನ್ಯವಾಗಿದೆ. ಹೊಸ ವರ್ಷವನ್ನು ಭಾರತೀಯ ಸಂಸ್ಕೃತಿಯೊಂದಿಗೆ ಆಚರಿಸಬೇಕು. ಲಿಂಗಪೂಜೆ ಮಾಡಿ ಬರಮಾಡಿಕೊಳ್ಳಬೇಕು.

ನವಲಗುಂದ:

ಭೂಮಿ, ಜಲ, ವಾಯು ಸೇರಿದಂತೆ ಎಲ್ಲವೂ ಮಾನವನಿಗೆ ದೇವರು ಕೊಟ್ಟ ದಾನವಾಗಿವೆ. ದೇವರ ಕೃಪೆಗೆ ಜಪ, ತಪ, ಧ್ಯಾನ ಮಾಡಿ ಭಗವಂತನಿಗೆ ಎಲ್ಲರೂ ಕೃತಜ್ಞರಾಗಿರಬೇಕು ಎಂದು ತುಪ್ಪದಕುರಹಟ್ಟಿಯ ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಶಲವಡಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ, ಲಕ್ಷ ದಿಪೋತ್ಸವ, ಧರ್ಮಸಭೆ ಹಾಗೂ ಸಂಸ್ಕೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನಾಡಿನ ಮಠ-ಮಾನ್ಯಗಳ ಕೊಡುಗೆ ಅನನ್ಯವಾಗಿದೆ. ಹೊಸ ವರ್ಷವನ್ನು ಭಾರತೀಯ ಸಂಸ್ಕೃತಿಯೊಂದಿಗೆ ಆಚರಿಸಬೇಕು. ಲಿಂಗಪೂಜೆ ಮಾಡಿ ಬರಮಾಡಿಕೊಳ್ಳಬೇಕು ಎಂದರು.

ಬಿಜೆಪಿ ಮುಖಂಡ ದೇವರಾಜ ದಾಡಿಬಾವಿ ಮಾತನಾಡಿ, ಸನಾತನ ಧರ್ಮದ ಸಂಸ್ಕೃತಿಯ ಮೂಲವೇ ನಮ್ಮ ಗ್ರಾಮೀಣ ಪ್ರದೇಶ. ಇಂದಿನ ಯುವಕರು ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದರು.

ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಗ್ರಾಪಂ ಅಧ್ಯಕ್ಷೆ ಮಾಮತಾಜಬೇಗಂ ಯಾವಗಲ್ಲ, ಉಪಾಧ್ಯಕ್ಷೆ ರೇಣುಕಾ ಉಡಚಣ್ಣವರ, ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಸಿ. ಪಾಟೀಲ, ಈರಣ್ಣ ಹಸಬಿ, ಎಂ.ಆರ್. ಹಳ್ಳಿ, ಶ್ರೀಶೈಲಪ್ಪ ಬಸವರಡ್ಡಿ, ವೀರಪ್ಪ ಜಡಿ, ನಾಗಪ್ಪ ಇಂಗಳಹಳ್ಳಿ, ಕವಿತಾ ಹುಚ್ಚನಾಯ್ಕರ, ನಿಂಗವ್ವ ವಗ್ಗರ, ರುದ್ರಗೌಡ ಎಮ್ಮಿಗೌಡ್ರ, ವಿ.ವಿ. ಬಳಿಗೇರ, ಎಸ್.ಎಫ್. ನಡುವಿನಹಳ್ಳಿ, ಬುದೇಶ ಕಳ್ಳಿಮನಿ, ವೀರಣ್ಣ ಸಾಂಬ್ರಾಣಿ, ಶ್ರೀಶೈಲಪ್ಪ ಹುಯಿಲಗೊಳ, ಸಿ.ಎಸ್. ಗಡಾದ, ಶ್ರೀದೇವಿ ಭಜಂತ್ರಿ, ಲಲಿತಾ ಸಾಲಿಮನಿ ಸೇರಿದಂತೆ ಹಲವರಿದ್ದರು.