ಸಾರಾಂಶ
ಮಾಗಡಿ: ಕೆಂಪೇಗೌಡರ ಕೋಟೆಯನ್ನು ಉಳಿಸುವ ನಿಟ್ಟಿನಲ್ಲಿ ನನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಮಾಗಡಿ: ಕೆಂಪೇಗೌಡರ ಕೋಟೆಯನ್ನು ಉಳಿಸುವ ನಿಟ್ಟಿನಲ್ಲಿ ನನ್ನ ಹೋರಾಟ ನಿಲ್ಲಿಸುವುದಿಲ್ಲ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಚ್ಯ ವಸ್ತು ಇಲಾಖೆಗೆ ಸೇರಿರುವ ಕೋಟೆಯನ್ನು ಹಾಳು ಮಾಡುತ್ತಿರುವ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಶೀಘ್ರದಲ್ಲೇ ಹೋರಾಟಕ್ಕೆ ಸಿದ್ದತೆ ಮಾಡಲಾಗುವುದು. ಇದಕ್ಕಾಗಿ ಪುಟ 532, ಸಹಿ 6,336 ಸಾರ್ವಜನಿಕರಿಂದ ಸಹಿ ಸಂಗ್ರಹಣೆ ಮಾಡಿದ್ದು ಕೆಂಪೇಗೌಡರ ಕೋಟೆ ಉಳಿಸುವ ನಿಟ್ಟಿನಲ್ಲಿ 21 ಇಲಾಖೆಗಳಿಗೆ ಮನವಿ ನೀಡಲಾಗಿದೆ. ಜೊತೆಗೆ ಕೋಟೆ ಎಷ್ಟು ವಿಸ್ತೀರ್ಣದಲ್ಲಿದೆ ಎಂಬ ಮಾಹಿತಿಯನ್ನೂ ಸಂಬಂಧ ಪಟ್ಟ ಇಲಾಖೆಗಳಿಂದ ಪಡೆಯಲಾಗಿದೆ. ನನ್ನ ಹೋರಾಟದ ಬಳಿಕ ಕಾಟಾಚಾರಕ್ಕೆ ಮಣ್ಣನ್ನು ತೆಗೆದರು. ತೆಗೆದ ಕೆಲವೇ ದಿನಗಳಲ್ಲಿ 300 ಲೋಡು ಕಟ್ಟಡದ ಮಣ್ಣನ್ನು ಮತ್ತೆ ಕಂದಕದ ಬಳಿ ಹಾಕಿ ಕೆಂಪೇಗೌಡರ ಕೋಟೆಯನ್ನು ಹಾಳು ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಕೋಟೆ ಉಳಿಸುವ ಹೋರಾಟಕ್ಕೆ ಎಲ್ಲರೂ ಕೈಜೋಡಿಸುವುದೇ ಕೆಂಪೇಗೌಡರಿಗೆ ನಾವು ಕೊಡುವ ಗೌರವ ಎಂದರು.ಪ್ರಾಚ್ಯ ವಸ್ತು ಇಲಾಖೆ ಕೋಟೆ ವಿಸ್ತೀರ್ಣ:
ಪ್ರಾಚ್ಯ ವಸ್ತು ಇಲಾಖೆ ಈಗಾಗಲೇ ಮಾಗಡಿ ಕೋಟೆ 13 ಎಕರೆ 34 ಗುಂಟೆ ವಿಸ್ತೀರ್ಣ ಎಂದು ವಿವರ ನೀಡಿದೆ 1808ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇದ್ದ ನಕ್ಷೆ ಸಿದ್ಧಪಡಿಸಿದೆ. ಈಗ ತಿದ್ದುಪಡಿ ಮಾಡಿದ ನಂತರ ನಮೂದೆಯಲ್ಲಿ ಕೋಟೆ ಹೆಸರನ್ನೇ ಬಿಡಲಾಗಿದೆ. ಇದು ಯಾವ ನ್ಯಾಯ? ಪುರಸಭೆಯಿಂದ ಎಷ್ಟು ಜಾಗ ಕೋಟೆ ವಿಸ್ತೀರ್ಣ ಇದೆ ಎಂದು ಅರ್ಜಿ ಕೊಟ್ಟಾಗ ಪುರಸಭೆ 11 ಎಕರೆ 9 ಗುಂಟೆ ಎಂದು ಹೇಳಿದೆ. ಒಂದು ಎಕರೆ ವಿಸ್ತೀರ್ಣ ಕಂದಕ ಎಂದು ತಿಳಿಸಿದೆ. ಇವರಿಗೆ ಕಂದಕ ಜಾಗ, ಪಾರ್ಕಿಂಗ್ ಜಾಗ, ಕಟ್ಟಡ ಜಾಗ ಎಂದು ವಿಭಾಗಿಸಲು ಅಧಿಕಾರ ಕೊಟ್ಟಿದ್ದವರು ಯಾರು? ರಾಜ್ಯ ವಸ್ತು ಇಲಾಖೆ ಕೋಟೆಯ 100 ಮೀಟರ್ ಸುತ್ತ ಯಾವುದೇ ರೀತಿ ಅಭಿವೃದ್ಧಿ ಕಾಮಗಾರಿಗಳು ನಡೆಸಬಾರದು. ಕಟ್ಟಡ ವಿನ್ಯಾಸ ನಾಶ ಮಾಡಬಾರದು, ಮಾಡಿದರೆ ಎರಡು ವರ್ಷ ಕಾರಾಗೃಹ ಶಿಕ್ಷೆ ಒಂದು ಲಕ್ಷ ದಂಡ ಎಂದು ತಿಳಿಸಿದರೂ ಕೂಡ ಕೋಟೆ ಹಾಳು ಮಾಡುಲಾಗುತ್ತಿದೆ ಎಂದು ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.ಅಧಿಕಾರಿಗಳಿಂದ ಸರ್ವೆ ಕಾರ್ಯ:
ಪ್ರಾಚ್ಯ ವಸ್ತು ಇಲಾಖೆ ಹಾಗೂ ಕರ್ನಾಟಕ ರಾಜ್ಯ ನಿರ್ದೇಶನಾಲಯ ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಪುರಸಭಾ ಮುಖ್ಯ ಅಧಿಕಾರಿಗಳನ್ನು ಸೇರಿಸಿ ಅತಿ ಶೀಘ್ರದಲ್ಲೇ ಮಾಗಡಿ ಕೋಟೆ ಸರ್ವೆ ಕಾರ್ಯ ಮಾಡಿ ಕೋಟೆಯ ಚಕ್‌ಬಂದಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಪುರಸಭೆ ಅಧಿಕಾರಿಗಳಿಗೆ ಮಾಹಿತಿ ಕೊಡಲು ಹೋಗಿದ್ದರ ಕಚೇರಿಯಲ್ಲಿ ಅಧಿಕಾರಿಗಳು ಸಿಗಲಿಲ್ಲ. ಮುಂದಿನ ಬಾರಿ ಎಲ್ಲಾ ಅಧಿಕಾರಿಗಳನ್ನು ಭೇಟಿ ಮಾಡಿ ಅವರಿಂದ ಅಭಿಪ್ರಾಯ ಸಂಗ್ರಹಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಈ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.ಈ ವೇಳೆ ಮುಖಂಡರಾದ ಏಳಿಗೆಹಳ್ಳಿ ತಮ್ಮಣ್ಣಗೌಡ, ಪುಟ್ಟಸ್ವಾಮಿ, ದೊಡ್ಡಿ ಗೋಪಿ, ಮರೂರು ಶಂಕರಪ್ಪ, ಕೀರ್ತಿ, ಆನಂದ, ಸೈಯದ್, ರಾಮಣ್ಣ ಇತರರು ಭಾಗವಹಿಸಿದ್ದರು.