ಹೋಟೆಲ್ ಉದ್ಯಮ ಬಹಳಷ್ಟು ಜನರಿಗೆ ದಾರಿದೀಪ

| Published : Mar 27 2024, 01:10 AM IST

ಸಾರಾಂಶ

ಚಾಮರಾಜನಗರದ ಕರಿನಂಜನಪುರದ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಚಾಮರಾಜನಗರ ಜಿಲ್ಲಾ ಹೋಟೆಲ್ ಮಾಲೀಕರ ಸಂಘವನ್ನು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಚಂದ್ರಶೇಖರ ಹೆಬ್ಬಾರ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪ್ರವಾಸೋದ್ಯಮವು ಬೆಳೆದಂತೆ ಹೋಟೆಲ್ ಉದ್ಯಮಗಳು ಬೆಳೆಯಲು ಸಾಧ್ಯವಾಗುತ್ತದೆ. ಜೊತೆಗೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಚಂದ್ರಶೇಖರ ಹೆಬ್ಬಾರ್ ತಿಳಿಸಿದರು.

ನಗರದ ಕರಿನಂಜನಪುರದ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಚಾಮರಾಜನಗರ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಜ್ಯೊತಿ ಬೆಳಗಿಸಿ ಮಾತನಾಡಿದರು. ಹೋಟೆಲ್ ಉದ್ಯಮ ಬಹಳಷ್ಟು ಜನರಿಗೆ ದಾರಿದೀಪವಾಗಿದೆ. ೩೦ ವರ್ಷಗಳ ಹಿಂದೆ ಕಡಿಮೆ ಜನರು ಮಾತ್ರ ಹೋಟೆಲ್‌ಗಳನ್ನು ತೆರೆದು ಜೀವನ ನಡೆಸುತ್ತಿದ್ದರು. ಇತ್ತಿಚೀನ ದಿನಗಳಲ್ಲಿ ಹೋಟೆಲ್ ಉದ್ಯಮ ಬಹಳಷ್ಟು ಬೆಳೆದು ಬಿಟ್ಟಿದೆ. ಯಾವುದೇ ವೃತ್ತಿ ಮಾಡಬೇಕಾದರೆ ಜೊತೆಗೆ ಕೈ ಜೋಡಿಸುವವರು ಬೇಕಾಗುತ್ತದೆ. ಅದೇ ಕಾರಣಕ್ಕೆ ಹೋಟೆಲ್ ಮಾಲೀಕರ ಸಂಘವನ್ನು ಸ್ಥಾಪಿಸಲಾಗಿದೆ. ಇದರ ಉದ್ದೇಶ ಸರ್ಕಾರದ ಜೊತೆಗೆ ಹೋಟೆಲ್ ಮಾಲೀಕರು ಸೇರಿಕೊಂಡು ಪ್ರವಾಸೋದ್ಯಮವಿರುವ ಜಾಗಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೋಟೆಲ್‌ಗಳನ್ನು ತೆರೆದು ಉತ್ತಮ ಆಹಾರ ನೀಡಿದರೆ ಫಲಹಾರ ಮಂದಿರಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಚಾಮರಾಜನಗರ ಜಿಲ್ಲೆಯ ಸುತ್ತಲು ಪ್ರವಾಸಿ ಕೇಂದ್ರಗಳಿವೆ. ಅಲ್ಲಿರುವ ಹೋಟೆಲ್ ಉದ್ಯಮಿಗಳನ್ನು ಸಂಘದ ಸದಸ್ಯರನ್ನಾಗಿ ಮಾಡಿದರೆ ಸಂಘವು ಉತ್ತಮ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಿದರು. ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ಜಿ.ಕೆ.ಶೆಟ್ಟಿ ಮಾತನಾಡಿ, ಜಿಲ್ಲೆಯು ಶೇ. ೫೦ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಪ್ರವಾಸೋದ್ಯಮದಲ್ಲಿ ಹೋಟೆಲ್ ತೆರೆಯಲು ಬಯಸುವವರಿಗೆ ಮಾರ್ಗದರ್ಶನ ನೀಡುತ್ತೇನೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚಾಮರಾಜನಗರ ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ನಂದ್ಯಪ್ಪ ಶೆಟ್ಟಿ ಮಾತನಾಡಿ, ಇತ್ತೀಚೆಗೆ ಹೋಟೆಲ್ ನಡೆಸಲು ಕಾರ್ಮಿಕರ ಕೊರತೆ ಇದೆ. ಜನರಿಗೆ ಒಪ್ಪುವಂತೆ ರುಚಿಕರ ಆಹಾರ ಕೊಡಬೇಕಾದರೆ ಕಾರ್ಮಿಕರನ್ನು ನಾವೇ ರೆಡಿಮಾಡಬೇಕಿದೆ. ಕಾರ್ಮಿಕರು ಸ್ವಂತ ಊರಿನಲ್ಲಿ ಕೆಲಸ ನಿರ್ವಹಿಸಲು ಒಪ್ಪುವುದಿಲ್ಲ, ಹಲವು ಕಾರ್ಮಿಕರು ಬೆಂಗಳೂರು, ಮೈಸೂರುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೋಟೆಲ್ ನಡೆಸಲು ಪೈಪೋಟಿ ನಡೆಸಬೇಕಿದೆ. ಬೆಲೆ ಏರಿಕೆಯಾದ ಸಂದರ್ಭದಲ್ಲಿ ಗ್ರಾಹಕರು ನಮ್ಮ ಜೊತೆ ಸಹಕರಿಸಿದರೆ ಉದ್ಯಮ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಪ್ರತಾಪ್ ಪ್ರಸ್ತಾವಿಕವಾಗಿ ಮಾತನಾಡಿ, ಹೋಟೆಲ್ ಉದ್ಯಮಕ್ಕೆ ಸೇರುವ ಸಂಸ್ಥೆಗಳು ಬಾರ್ & ರೆಸ್ಟೋರೆಂಟ್, ರೇರ್ಜಟ್, ಹೊಂಸ್ಟೆ, ಬೇಕರಿ, ಸ್ವೀಟ್‌ಸ್ಟಾಲ್, ಕ್ಯಾಟಿಂನ್‌ಗಳು ಇದರಡಿಗೆ ಬರುತ್ತದೆ ಎಂದರು. ಮೈಸೂರು ಅಧ್ಯಕ್ಷ ಸಿ.ನಾರಾಯಣಗೌಡ, ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ರವಿಶಾಸ್ತ್ರಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಎಲ್ಲರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಖಜಾಂಚಿ, ವಿಜಯ್‌ಕುಲಾಲ್, ಉಪಾಧ್ಯಕ್ಷ ಸಿ.ಓ.ಪಾಪಣ್ಣ, ಶ್ರೀನಿವಾಸ್‌ರಾವ್, ಸಹ ಕಾರ್ಯದರ್ಶಿ ಜಿ.ಅಂಕಶೆಟ್ಟಿ, ಸಮಿತಿ ಸದಸ್ಯರಾದ ಕೆ.ಇ.ಮಂಜುನಾಥ್, ಜಿ.ಶಂಕರ್, ವೆಂಕಟೇಶ್.ಎಂ,ಕುಮಾರ್, ಕಿರಣ್.ಎಸ್ ಉಪಸ್ಥಿತರಿದ್ದರು.