ಪುರಸಭೆ ಗಾದಿಗೆ ಶಾಸಕರ ನಡೆ ತೀವ್ರ ಕುತೂಹಲ

| Published : Aug 22 2024, 12:49 AM IST

ಪುರಸಭೆ ಗಾದಿಗೆ ಶಾಸಕರ ನಡೆ ತೀವ್ರ ಕುತೂಹಲ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಘೋಷಣೆ ಬಳಿಕ ಗುಂಡ್ಲುಪೇಟೆ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇಲ್ಲದಿದ್ದರೂ ಪುರಸಭೆ ಅಧಿಕಾರ ಹಿಡಿಯಲು ಹೊರಟ ಕಾಂಗ್ರೆಸ್‌ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ರ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಘೋಷಣೆ ಬಳಿಕ ಗುಂಡ್ಲುಪೇಟೆ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇಲ್ಲದಿದ್ದರೂ ಪುರಸಭೆ ಅಧಿಕಾರ ಹಿಡಿಯಲು ಹೊರಟ ಕಾಂಗ್ರೆಸ್‌ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ರ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಪುರಸಭೆಯ ಒಟ್ಟು ೨೩ ಸದಸ್ಯರ ಬಲ ಹೊಂದಿದೆ. ೨೩ ಸದಸ್ಯರಲ್ಲಿ ಕಾಂಗ್ರೆಸ್‌ ೮ ಸದಸ್ಯರ ಜತೆಗೆ ಎಸ್‌ಡಿಪಿಐ ಸದಸ್ಯರೊಬ್ಬರು ಸೇರಿ ೯ ಸದಸ್ಯರ ಬಲವಾಗಲಿದ್ದು, ಶಾಸಕ, ಸಂಸದರ ಮತ ಸೇರಿ ೧೧ ಸದಸ್ಯರಾಗಲಿದ್ದಾರೆ. ಪುರಸಭೆ ಅಧಿಕಾರ ಹಿಡಿಯಲು ೧೩ ಮ್ಯಾಜಿಕ್‌ ನಂಬರಾಗಿದ್ದರೂ ಎರಡು ಮತಗಳ ಕೊರತೆ ಇದ್ದರೂ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಪುರಸಭೆ ಅಧಿಕಾರ ನಮ್ಮದೇ ಎಂದು ಹೇಳಿಕೊಂಡಿದ್ದಾರೆ.

ಇಬ್ಬರು ಸದಸ್ಯರು ದೂರ?:

ಪುರಸಭೆಯಲ್ಲಿ ಬಿಜೆಪಿಯ ೧೩ ಸದಸ್ಯರು ಇದ್ದಾರೆ. ೧೩ ಸದಸ್ಯರಲ್ಲಿ ಬಿಜೆಪಿ ಸದಸ್ಯ ರಮೇಶ್‌ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ವರ್ಷಗಳೇ ಕಳೆದರೆ, ಮತ್ತೋರ್ವ ಬಿಜೆಪಿ ಸದಸ್ಯೆ ರಾಣಿ ಲಕ್ಷ್ಮೀ ದೇವಿ ಹಾಗೂ ಅವರ ಪತಿ ಬಸವರಾಜು ಇತ್ತೀಚಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ದೂರ ಸರಿದಿದ್ದಾರೆ.

ಕೈ, ಕಮಲ ೧೧: ಪಕ್ಷೇತರ ಸದಸ್ಯ ಪಿ.ಶಶಿಧರ್ (ದೀಪು) ಬಿಜೆಪಿ ಬೆಂಬಲಿಸಿದ್ದರು. ಕಳೆದ ವಿಧಾನ ಸಭೆ ಚುನಾವಣೆ ಬಳಿಕ ಬಿಜೆಪಿಯಿಂದ ದೂರವಾಗಿದ್ದಾರೆ. ೧೩ ಸದಸ್ಯರಲ್ಲಿ ಇಬ್ಬರು ಸದಸ್ಯರು ಅಂತರ ಕಾಯ್ದುಕೊಂಡ ಕಾರಣ ಬಿಜೆಪಿಯಲ್ಲೂ ಕಾಂಗ್ರೆಸ್‌ನಂತೆ ೧೧ ಸದಸ್ಯರು ಇದ್ದಾರೆ.

ಇವ್ರ ಬೆಂಬಲ ಯಾರಿಗೆ?: ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಪುರಸಭೆ ಸದಸ್ಯರಾದ ರಮೇಶ್‌, ರಾಣಿ ಲಕ್ಷ್ಮೀದೇವಿ ಹಾಗೂ ಪಕ್ಷೇತರ ಸದಸ್ಯ ಪಿ.ಶಶಿಧರ್‌ (ದೀಪು) ಇವರ ಬೆಂಬಲ ಯಾರಿಗೆ ಎಂದರೆ ಮೇಲ್ನೋಟಕ್ಕೆ ಕಾಂಗ್ರೆಸ್‌ಗೆ ಕಂಡರೂ ಬಿಜೆಪಿ ಸದಸ್ಯರಾದ ರಮೇಶ್‌ ಹಾಗೂ ರಾಣಿ ಲಕ್ಷ್ಮೀದೇವಿಗೆ ಪಕ್ಷಾಂತರ ನಿಷೇಧ ಅಡ್ಡವಂತೂ ಬರಲಿದೆ. ಪಕ್ಷೇತರ ಸದಸ್ಯ ಪಿ.ಶಶಿಧರ್‌ (ದೀಪು) ಪಕ್ಷೇತರನಾಗಿ ಆಯ್ಕೆಯಾಗಿರುವ ಕಾರಣ ಯಾವ ಪಕ್ಷದತ್ತ ಹೋಗಲು ಅವಕಾಶವಿದೆ ಆದರೆ ಬಿಸಿಎಂ(ಬಿ)ಗೆ ಅಧ್ಯಕ್ಷ ಸ್ಥಾನ ಮೀಸಲಾದ ಕಾರಣ ಅಧ್ಯಕ್ಷ ಸ್ಥಾನ ಮೊದಲು ಕೊಟ್ಟವರರಿಗೆ ನನ್ನ ಮತ ಎಂದು ಹೇಳಿಕೊಂಡಿದ್ದಾರೆ.

ಶಾಸಕರ ನಡೆ ಕುತೂಹಲ: ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ಗೆ ಪುರಸಭೆ ಅಧಿಕಾರ ಪಡೆಯಲೇ ಬೇಕು ಎಂದು ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಪುರಸಭೆ ಅಧಿಕಾರ ಹಿಡಿದರೆ ಪಟ್ಟಣದಲ್ಲೂ ಬಿಜೆಪಿಗೆ ಟಕ್ಕರ್‌ ಕೊಡಲು ಮುಂದಾಗಿದ್ದಾರೆ. ಎರಡು ಮತಗಳ ಕೊರತೆಯ ನಡುವೆ ಪುರಸಭೆ ಅಧಿಕಾರ ಕೈಗೆ ಎಂದು ಹೇಳುತ್ತಿರುವ ನಡೆ ಗಮನಿಸಿದರೆ ಇಬ್ಬರು ಸದಸ್ಯರ ಕೊರತೆ ತುಂಬಲು ತಂತ್ರ ರೂಪಿಸಿದ್ದಾರೆ ಎಂಬುದು ಮಾತ್ರ ಸದ್ಯಕ್ಕೆ ತಿಳಿಯುತ್ತಿಲ್ಲ.೨೧ಜಿಪಿಟಿ೩

ಗುಂಡ್ಲುಪೇಟೆ ಪುರಸಭೆ ಕಾರ್ಯಾಲಯ.

೨೧ಜಿಪಿಟಿ೪

ಎಚ್.ಎಂ.ಗಣೇಶ್‌ ಪ್ರಸಾದ್‌