ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ಸಮಾಜ ಸೇವೆ ಮಾಡುವೆ ಎಂದು ಜನರಿಂದ ಮತ ಪಡೆದು ಆಯ್ಕೆಯಾದ ನೀನು ಇಂದು ಸಮಾಜ ಸೇವೆ, ಜನ ಸೇವೆ ಮಾಡದೇ ಕೇವಲ ಹಣ ಮಾಡುವ ಗುರಿಯಿಂದ ಕಾರ್ಯ ಮಾಡುತ್ತಿರುವೆ. ಅದಕ್ಕಾಗಿ ನಿನಗೆ ಕಾಶಪ್ಪನವರ ಎನ್ನುವ ಬದಲು ಕ್ಯಾಶ್ಪ್ಪನವರ ಎನ್ನುವುದೇ ಅತೀ ಸೂಕ್ತ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಗುಡುಗಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಆರು ಸದಸ್ಯರನ್ನು ಕರೆದುಕೊಂಡು ಇಳಕಲ್ಲ ನಗರಸಭೆಯಲ್ಲಿ ಬಹುಮತ ಸಾಬೀತು ಮಾಡಿದ್ದು ಅಕ್ಷಮ್ಯ. ನೀನು ನಿನ್ನೆ ನನ್ನ ಬಗ್ಗೆ ದೊಡ್ಡನಗೌಡ ದೊಡ್ಡನಗೌಡ ಅಲ್ಲ ಆತನು ದಡ್ಡಗೌಡ ಎಂದು ಹೇಳಿದ್ದು ನಿಜವಿದೆ. ಕಾರಣ ನಾನು ಜನರ ಪರ ಕಾರ್ಯ ಮಾಡಿದ್ದೇನೆ. ನಿನ್ನಂತೆ ಹಣ ಮಾಡುವುದನ್ನು ಮಾಡಿಲ್ಲ. ಅದಕ್ಕೆ ನಾನು ದಡ್ಡನಗೌಡ ಎಂದು ನೀನು ಹೇಳಿದನ್ನು ನಾನು ಒಪ್ಪುತ್ತೇನೆ ಎಂದರು.
ತೊರೆದವರು ಪಕ್ಷ ದ್ರೋಹಿಗಳು:ಹಣದ ಆಮಿಷಕ್ಕೆ ಬಲಿಯಾಗಿ ಪಕ್ಷ ತೊರೆದ ಆರು ಜನ ಸದಸ್ಯರ ಬಗ್ಗೆ ಮಾತನಾಡಿದ ಅವರು, ಬಿಜೆಪಿಯ ಆ ಆರು ಜನ ಸದಸ್ಯರು ಪಕ್ಷ ದ್ರೋಹಿಗಳು. ಅವರ ಬಗ್ಗೆ ಪಕ್ಷದ ಮೇಲಿನವರಿಗೆ ವರದಿ ಸಲ್ಲಿಸಿ ಅವರ ಸದಸ್ಯತ್ವ ಅನರ್ಹ ಮಾಡುವಂತ್ತೆ ತಿಳಿಸಲಾಗುವುದು. ಪಕ್ಷ ದ್ರೋಹಿಗಳಿಗೆ ಯಾವ ಪಕ್ಷದಲ್ಲೂ ಗೌರವವಿರುವುದಿಲ್ಲ. ಅಂತವರನ್ನು ಆ ವಾರ್ಡ್‌ನ ಮತದಾರರು ಅವರ ಮನೆಗೆ ಹೋಗಿ ಕೇಳಲಿದ್ದಾರೆ ಎಂದು ತಿಳಿಸಿದರು.
ಕಮಿಷನ್ ಪಡೆಯುವುದೇ ಜಾಯಮಾನ:ಇನ್ನೂ ಶಾಸಕ ವಿಜಯಾನಂದ ಕಾಶಪ್ಪನವರ ಆಯ್ಕೆಯಾಗಿ ಏನು ಅಭಿವೃದ್ಧಿ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ತಂದ ಹಣದಲ್ಲಿಯೇ ಕಾಮಗಾರಿ ಪ್ರಾರಂಭ ಮಾಡಿ ಅವರಿಂದ ಕಮಿಷನ್ ಪಡೆಯುತ್ತಿದ್ದಾರೆ. ಅಲ್ಲದೇ ಪ್ರತಿ ದಿನಾಲು ಇಳಕಲ್ಲ ಹಾಗೂ ಹುನಗುಂದ ತಾಲೂಕಿನಿಂದ 50 ರಿಂದ 60 ಟಿಪ್ಪರ್ ಉಸಕು ಹೊರ ಜಿಲ್ಲೆಗಳಿಗೆ ಹೋಗುತ್ತಿದೆ. ಅವಳಿ ತಾಲೂಕಿನಲ್ಲಿ 50ಕ್ಕೂ ಹೆಚ್ಚು ಇಸ್ಪೇಟ್ ಅಡ್ಡೆಗಳಿವೆ. ಈ ಎಲ್ಲ ಮೂಲಗಳಲ್ಲದೆ ಇನ್ನೂ ಅನೇಕ ಮೂಲಗಳಿಂದ ಕಮಿಷನ್ ಪಡೆಯುವುದೆ ನಿನ್ನ ಜಾಯಮಾನವಾಗಿದೆ. ಹಣ ಮಾಡುವ ನಿನ್ನ ಜೊತೆ ನಾನು ಎಂದು ಸಮನಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಜನ ನನಗೆ ಕರೆ ಮಾಡುತ್ತಾರೆ:ಧನ್ನೂರ, ಮರೋಳ ಗ್ರಾಮದ ರೈತರು ನಾಲೆಯಲ್ಲಿ ನೀರು ಬಿಡಿಸಲು ನನಗೆ ಕರೆ ಮಾಡಿದ್ದಾರೆ. ಶಾಸಕನಾದ ನೀನು ಮಾಡಬೇಕಾದ ಕೆಲಸಗಳನ್ನು ಸಾರ್ವಜನಿಕರು ನನಗೆ ಫೋನ್ ಮುಖಾಂತರ ಮಾಡಲು ವಿನಂತಿಸುತ್ತಿದ್ದಾರೆ. ಸಾರ್ವಜನಿಕರ ಮುಂದೆ ನಾನು ಲಿಂಗಸೂರಿನವನು ಎಂದು ಹೇಳುವ ನೀನು ನಿನ್ನ ಮೂಲ ಯಾವ ಊರು? ಇನ್ನು ನಿಮ್ಮ ಪಕ್ಷದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಇನ್ನೂ ನಿಮ್ಮ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಬೇರೆ ಮತಕ್ಷೇತ್ರದಲ್ಲಿ ನಿಲ್ಲಲುತ್ತಾರಲ್ಲ ಅದನ್ನು ನೀನು ಯಾಕೆ ವಿರೋಧಿಸುವುದಿಲ್ಲ ಎಂದು ಪ್ರಶ್ನಿಸಿದರು.
---ಬಾಕ್ಸ್
ಅವಾಚ್ಯ ಶಬ್ಧಗಳ ಮಾತು ನಿಲ್ಲಿಸದಿದ್ರೆನಾವು ಮುಂದುವರೆಯಬೇಕಾಗುತ್ತೆ
ಇನ್ನು ನಿಮ್ಮ ಕಾಂಗ್ರೆಸ್ ಪಕ್ಷ ದಲಿತ ಜನರ ವೋಟಿನಿಂದ ಆಯ್ಕೆಯಾಗಿದೆ. ಆದರೆ, ಓರ್ವ ದಲಿತ ರಾಜ್ಯಪಾಲರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯುವಾಗ ನೀನು ಏನು ಮಾಡುತಿದ್ದಿ. ಇನ್ನು ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ಹಲ್ಲೆ ನಡೆದರೆ ಇಲ್ಲಿಯವರೆಗೂ ನಿಮ್ಮ ಕಾಂಗ್ರೆಸ್ ಪಕ್ಷ ಖಂಡನೆ ಮಾಡಿಲ್ಲ ಎಂಬುವುದು ನಾಚಿಕೆ ವಿಷಯ. ನಿಮ್ಮ ಓರ್ವ ಎಂ.ಎಲ್.ಸಿ ಸದಸ್ಯರು ಇದು ಬಾಂಗ್ಲಾ ದೇಶದಂತೆ ಮಾಡುತ್ತೇನೆ ಎಂದನಲ್ಲ ನಿಮ್ಮ ಪಕ್ಷ ಏನು ಮಾಡುತ್ತಿದೆ ನೋಡು, ನೀನು ಅವಾಚ್ಯ ಶಬ್ಧಗಳಿಂದ ಮಾತನಾಡುವುದನ್ನು ನಿಲ್ಲಿಸದಿದ್ದರೆ ನಾವು ಮುಂದುವರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.---
ದೊಡ್ಡಗೌಡ ಅಲ್ಲ ದಡ್ಡಗೌಡ: ಕಾಶಪ್ಪನವರಗೌಡ ಅಂತ ಹೇಳಿಕೊಳ್ಳುತ್ತಾರೆ. ಆದರೆ, ಇವರು ಯಾವೂರ ಗೌಡ. ನಮ್ಮ ತಾಲೂಕಿಗೆ ಯಾವ ಗೌಡ. ಲಿಂಗಸೂರಿನಿಂದ ಓಡಿ ಒಂದು ಇಲ್ಲಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದರು.
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಳಿಯಲ್ಲಿ 30 ಸಾವಿರ ವೋಟು ತೆಗೆದುಕೊಂಡು ಗೆದ್ದು ಬಿಟ್ಟಾ ಎಂದು ನನಗೆ ಹೇಳುತ್ತಾರೆ. ನಾನು 5000 ವೋಟ್‌ನಿಂದ ಸೋತ್ತಿದ್ದೇನೆ. ಅದೇನೋ ಅಂತಾರಲ್ಲ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಂತಾರಲ್ಲ ಹಾಗಾಗಿದೆ. ಅದಕ್ಕೆ ಇವರು ದೊಡ್ಡನಗೌಡ ಅಲ್ಲ ದಡ್ಡಗೌಡ ಎಂದು ಕುಹಕ ಆಗಿದರು. ಕಾಂಗ್ರೆಸ್‌ಗೆ ಬೆಂಬಲ ನೀಡಿದವರಿಗೆ ನಾವು ಯಾವುದೇ ಆಮಿಷ್ ಒಡ್ಡಿಲ್ಲ. ಅವರು ಪ್ರೀತಿ, ವಿಶ್ವಾಸ, ಅಭಿವೃದ್ಧಿ ಮೆಚ್ಚಿ ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂದು ಹೇಳಿದರು.