ಶಿಕ್ಷಕರ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲಲ್ಲ

| Published : Aug 05 2024, 12:37 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ ಹೇಳಿದರು. ನಗರದ ಗಾಂಧಿ ಚೌಕ್ ಹತ್ತಿರದ ಶಾರದಾ ಭವನದಲ್ಲಿ ಪದವೀಧರ ಶಿಕ್ಷಕರ ಬೇಡಿಕೆಗಳ ಕುರಿತು ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಸರ್ಕಾರ ಶಿಕ್ಷಕರಲ್ಲಿಯೇ ಬೇಧಭಾವ ಮಾಡುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ ಹೇಳಿದರು.

ನಗರದ ಗಾಂಧಿ ಚೌಕ್ ಹತ್ತಿರದ ಶಾರದಾ ಭವನದಲ್ಲಿ ಪದವೀಧರ ಶಿಕ್ಷಕರ ಬೇಡಿಕೆಗಳ ಕುರಿತು ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ,

ಸರ್ಕಾರ ಶಿಕ್ಷಕರಲ್ಲಿಯೇ ಬೇಧಭಾವ ಮಾಡುತ್ತಿದೆ. ಸೇವಾಜೇಷ್ಠತೆ ಪರಿಗಣಿಸದೇ ಮುಂಬಡ್ತಿ ನೀಡುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಪದವೀಧರ ಶಿಕ್ಷಕರಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ ಸುಮಾರು ೧.೩೦ ಲಕ್ಷ ಪದವೀಧರ ಶಿಕ್ಷಕರಿದ್ದಾರೆ. ಅವರೊಂದಿಗೆ ಮುಂದಿನ ದಿನಗಳಲ್ಲಿ ತರಗತಿ ಭಹಿಷ್ಕರಿಸಿ ಹೋರಾಟ ಮಾಡಲು ಸಿದ್ಧತೆಗಳನ್ನು ನಡೆಸಿದ್ದಾಗಿ ಅವರು ತಿಳಿಸಿದರು.

ಹಂತ ಹಂತದಲ್ಲಿ ಪ್ರತಿಭಟನೆ:

ಮೊದಲ ಹಂತವಾಗಿ ಆ. ೫ರಂದು ಶಾಸಕರು, ತಹಸೀಲ್ದಾರ್, ಬಿಇಒಗಳಿಗೆ ಮನವಿ ಸಲ್ಲಿಸಲಾಗುವುದು. ಆ.೭ರಂದು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿಪಂ ಸಿಇಒ, ಡಿಡಿಪಿಐ ಅವರಿಗೆ ಮನವಿ ಸಲ್ಲಿಸಲಾಗುವುದು, ಆ.೧೨ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಂಡು ರಾಜ್ಯ ಸಂಘದ ನಿರ್ದೇಶನದಂತೆ ಮುಂದಿನ ಹೋರಾಟದ ರೂಪರೇಷೆಯ ಬಗ್ಗೆ ಚರ್ಚಿಸಲಾಗುವುದು. ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಮುಖಂಡ ಪ್ರವೀಣ ಪತ್ತಾರ ಮಾತನಾಡಿ, ಪದವೀಧರರಿಗೆ ಯಾವ ರೀತಿ ಅನ್ಯಾಯವಾಗಿದೆ. ಏನು ಮಾಡಬೇಕೆಂಬುದುರ ಕುರಿತು ವಿವರಿಸಿದರು.

ಜಿಒಸಿಸಿ ಬ್ಯಾಂಕ್‌ ನಿರ್ದೇಶಕ ಹಣಮಂತ ಕೊಣದಿ, ಸಾವಿತ್ರಿಬಾಯಿಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಎ.ಬಿ.ನಾಯಿಕ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸು ಬೇನೂರ, ಸಂಘಟನಾ ಕಾರ್ಯದರ್ಶಿ ಟಿ.ಕೆ.ಜಂಬಗಿ, ರಾಮಣ್ಣ ಬೋಳೆಗಾರ ಸೇರಿ ಹಲವರು ಮಾತನಾಡಿದರು.ಜಿಲ್ಲಾ ಉಪಾಧ್ಯಕ್ಷೆ ಪುಷ್ಪಾ ಗಚ್ಚಿನಮಠ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ಸಂಘದ ತಿಕೋಟಾ ಅಧ್ಯಕ್ಷ ಎ.ಬಿ.ಧಡಕೆ, ಗ್ರಾಮೀಣ ಅಧ್ಯಕ್ಷ ಬಿ.ಎಸ್.ಮಠ, ನಗರ ಘಟಕದ ಅಧ್ಯಕ್ಷ ವೀರಭದ್ರಪ್ಪ, ಬಬಲೇಶ್ವರ ಅಧ್ಯಕ್ಷ ಎಚ್.ಎಂ.ಚಿತ್ತರಗಿ, ಜಿಓಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಅಶೋಕ ಚನಬಸಪ್ಪಗೋಳ, ನಿರ್ದೇಶಕ ಚಂದ್ರಶೇಖರ ಜಿತ್ತಿ, ಎಂ.ಎಸ್.ಟಕ್ಕಳಕಿ, ಅಶೋಕ ಬೂದಿಹಾಳ, ಸಾಬು ಗಗನಮಾಲಿ, ಅಶೋಕ ಭಜಂತ್ರಿ, ಚಂದ್ರಶೇಖರ ಹಾರಿವಾಳ, ಆರ್.ಡಿ.ಪವಾರ, ವಾಸೀಮ ಚಟ್ಟರಕಿ, ಬಸು ಮೆಡೆಗಾರ, ಸಿದ್ದು ಕೋಳಿ, ಸಂಗಮೇಶ ಜಂಗಮಶೆಟ್ಟಿ, ರಾಜೇಶ ಪಾಟೀಲ, ಕೆ.ಎಚ್.ಪೂಜಾರಿ, ಎಂ.ಬಿ.ಜಮಾದಾರ, ಮಲ್ಲಿಕಾರ್ಜುನ ಮಾದರ, ದಿವಾನಜಿ ಮೆಡಮ್‌, ವಿದ್ಯಾವತಿ ಸವನಳ್ಳಿ, ಇಂದುಮತಿ ಭಜಂತ್ರಿ, ನಂದಾ ತಿಕೋಟಿ ಸೇರಿದಂತೆ ಶಿಕ್ಷಕರು ಪಾಲ್ಗೊಂಡಿದ್ದರು.