ಸಕಲೇಶಪುರ ತಾಲೂಕಿನ ಮೂಗಲಿ ಬಳಿ ಮಹಿಳೆಯನ್ನು ಕೊಂದುಹಾಕಿದ್ದ ಕಾಡಾನೆಯನ್ನು ಸೆರೆಹಿಡಿಯಲು ಅನುಮತಿ ಕೋರಿ ಸರಕಾರಕ್ಕೆ ಅಂದೇ ಪತ್ರ ಬರೆದ ಪರಿಣಾಮ ಜ.೧೪ಕ್ಕೆ ಅನುಮತಿ ದೊರೆಕಿತು. ಕೇವಲ ನೂರು ಗಂಟೆಯೊಳಗೆ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು, ಇಟಿಎಫ್ ಸಿಬ್ಬಂದಿ ಸೇರಿ ಅಂದಾಜು ೧೦೦ ಜನರ ತಂಡ ಇದರ ಹಿಂದೆ ಕೆಲಸ ಮಾಡಿದೆ. ಸೆರೆಹಿಡಿದ ಆನೆಯು ಕೇವಲ ಒಂದು ವಾರದಲ್ಲೇ ಆಲೂರು, ಸಕಲೇಶಪುರ ಹಾಗೂ ಬೇಲೂರು ತಾಲೂಕಿನಾದ್ಯಂತ ಸಂಚರಿಸಿ ಆತಂಕ ಸೃಷ್ಟಿಸಿತ್ತು ಎಂದು ಡಿಎಫ್‌ಒ ಸೌರಭ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರುಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿಸಿದ್ದ ಪುಂಡಾನೆಯನ್ನು ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಬೆಳ್ಳಾವರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸೆರೆ ಹಿಡಿಯಲಾಗಿದೆ. ಕೆಲ ದಿನಗಳ ಹಿಂದಷ್ಟೆ ಕೂಲಿ ಕಾರ್ಮಿಕ ಮಹಿಳೆಯನ್ನು ಬಲಿ ಪಡೆದಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯಲು ಜಿಲ್ಲಾ ಅರಣ್ಯ ಇಲಾಖೆ ಯೋಜನೆ ರೂಪಿಸಿತ್ತು. ಈ ಹಿನ್ನೆಲೆಯಲ್ಲಿ ದುಬಾರೆಯಿಂದ ೫ ಸಾಕಾನೆಗಳನ್ನು ಕರೆಸಲಾಗಿತ್ತು. ಕಾಡಾನೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಅರಣ್ಯ ಇಲಾಖೆಗೆ ಬೆಳ್ಳಾವರ ಸಮೀಪದ ಚಂದಾಪುರ ಎಂಬಲ್ಲಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಲಾಯಿತು. ಬಳಿಕ ಕುಮ್ಕಿ ಆನೆಗಳಾದ ಧನಂಜಯ, ಸುಗ್ರೀವ, ಅಯ್ಯಪ್ಪ, ಶ್ರೀರಾಮ, ಲಕ್ಷ್ಮಣ ಕಾಡಾನೆಯಿದ್ದ ಸ್ಥಳಕ್ಕೆ ತೆರಳಿದವು. ಡಾ.ರಮೇಶ್ ಕಾಡಾನೆಗೆ ಡಾಟ್ ಮಾಡಿ ಅರವಳಿಕೆ ನೀಡಿದ ಬಳಿಕ ಒಂಟಿ ಕಾಡಾನೆ ಚಂದಾಪುರ, ಬೆಳ್ಳಾವರ, ಈಚಲಪುರ ಗ್ರಾಮಗಳ ತೋಟ,ಗದ್ದೆಗಳನ್ನು ಹಾದು ಎಲ್ಲೆಂದರಲ್ಲಿ ಓಡಾಡುತ್ತಿತ್ತು. ಈ ವೇಳೆ ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿ ನಿತ್ರಾಣಗೊಂಡಿದ್ದ ಕಾಡಾನೆ ಬೆಳ್ಳಾವರದ ಮಲ್ಲಿಕಾರ್ಜುನ್ ಎಂಬುವವರ ತೋಟದಲ್ಲಿ ಪ್ರಜ್ಞೆ ತಪ್ಪಿತು.ಸಕಲೇಶಪುರ ತಾಲೂಕಿನ ಮೂಗಲಿ ಬಳಿ ಮಹಿಳೆಯನ್ನು ಕೊಂದುಹಾಕಿದ್ದ ಕಾಡಾನೆಯನ್ನು ಸೆರೆಹಿಡಿಯಲು ಅನುಮತಿ ಕೋರಿ ಸರಕಾರಕ್ಕೆ ಅಂದೇ ಪತ್ರ ಬರೆದ ಪರಿಣಾಮ ಜ.೧೪ಕ್ಕೆ ಅನುಮತಿ ದೊರೆಕಿತು. ಕೇವಲ ನೂರು ಗಂಟೆಯೊಳಗೆ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು, ಇಟಿಎಫ್ ಸಿಬ್ಬಂದಿ ಸೇರಿ ಅಂದಾಜು ೧೦೦ ಜನರ ತಂಡ ಇದರ ಹಿಂದೆ ಕೆಲಸ ಮಾಡಿದೆ. ಸೆರೆಹಿಡಿದ ಆನೆಯು ಕೇವಲ ಒಂದು ವಾರದಲ್ಲೇ ಆಲೂರು, ಸಕಲೇಶಪುರ ಹಾಗೂ ಬೇಲೂರು ತಾಲೂಕಿನಾದ್ಯಂತ ಸಂಚರಿಸಿ ಆತಂಕ ಸೃಷ್ಟಿಸಿತ್ತು ಎಂದು ಡಿಎಫ್‌ಒ ಸೌರಭ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ಈ ಕಾರ‍್ಯಾಚರಣೆಯಲ್ಲಿ ಎಸಿಎಫ್ ಖಲಂದರ್, ಆರ್‌ಎಫ್‌ಒಗಳಾದ ಯತೀಶ್, ಸುನೀಲ್ ರಾಥೋಡ್,ಶಿವಾನಂದ್, ದಿಲೀಪ್,ಮೋಹನ್,ಮಧುಸೂಧನ್, ಇಟಿಎಫ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.