ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರು, ಹಾಲಿ ಗೌರವಾಧ್ಯಕ್ಷರಾಗಿ, ಸ್ವಾತಂತ್ರ್ಯ ಹೋರಾಟಗಾರಾಗಿ , ಸಂಘಟನಾಶೀಲ ಚಿಂತಕ, ಸಮಾಜಮುಖಿ ನಾಯಕ ಹಾಗೂ ಸಮುದಾಯದ ಅಗ್ರಪಂಕ್ತಿಯ ದಿಟ್ಟ ಧ್ವನಿಯಾಗಿದ್ದ ಭೀಮಣ್ಣಖಂಡ್ರೆ ಅವರು ಲಿಂಗೈಕ್ಯರಾಗಿರುವುದು ಸಮಸ್ತ ಸಮುದಾಯಕ್ಕೆ ಮಾತ್ರವಲ್ಲ, ಇಡೀ ನಾಡಿಗೇ ಅಪಾರ ನಷ್ಟವಾಗಿದೆ .

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವೀರಶೈವ ಲಿಂಗಾಯತ ಸಮಾಜ ಧೀಮಂತ ನಾಯಕರೊಬ್ಬರನ್ನು ಕಳೆದುಕೊಂಡು ಅಪಾರ ನಷ್ಟ ಅನುಭವಿಸಿದೆ ಎಂದು ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.

ಮಾಜಿ ಸಚಿವ, ಸಮಾಜದ ಮುಖಂಡ ಭೀಮಣ್ಣ ಖಂಡ್ರೆ ಅವರು ನಿಧನ ಹೊಂದಿದ ಅಂಗವಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವತಿಯಿಂದ ನಗರದ ಸಿದ್ಧಮಲ್ಲೇಶ್ವರ ವಿರಕ್ತ ಮಠದ ಮುಂಭಾಗ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭೀಮಣ್ಣ ಖಂಡ್ರೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರು, ಹಾಲಿ ಗೌರವಾಧ್ಯಕ್ಷರಾಗಿ, ಸ್ವಾತಂತ್ರ್ಯ ಹೋರಾಟಗಾರಾಗಿ , ಸಂಘಟನಾಶೀಲ ಚಿಂತಕ, ಸಮಾಜಮುಖಿ ನಾಯಕ ಹಾಗೂ ಸಮುದಾಯದ ಅಗ್ರಪಂಕ್ತಿಯ ದಿಟ್ಟ ಧ್ವನಿಯಾಗಿದ್ದ ಭೀಮಣ್ಣಖಂಡ್ರೆ ಅವರು ಲಿಂಗೈಕ್ಯರಾಗಿರುವುದು ಸಮಸ್ತ ಸಮುದಾಯಕ್ಕೆ ಮಾತ್ರವಲ್ಲ, ಇಡೀ ನಾಡಿಗೇ ಅಪಾರ ನಷ್ಟವಾಗಿದೆ ಎಂದರು.

ಧರ್ಮದ ಸ್ವತಂತ್ರ ಅಸ್ತಿತ್ವವನ್ನು ದುರ್ಬಲಗೊಳಿಸುವ ಉದ್ದೇಶದಿಂದ ರೂಪುಗೊಂಡ ಹಾವನೂರು ವರದಿಯ ವಿರುದ್ಧ ರಾಷ್ಟ್ರಮಟ್ಟದಲ್ಲಿ ಸಂಘಟಿತ ಹೋರಾಟಕ್ಕೆ ಮುನ್ನುಡಿ ಬರೆದವರು ಡಾ.ಭೀಮಣ್ಣ ಖಂಡ್ರೆ ಎಂದು ತಿಳಿಸಿ,

ಇವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಬಸವಾದಿ ಶರಣರು ಕರುಣಿಸಲಿ ಎಂದು ಸಂತಾಪ ಸೂಚಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಮೂಡ್ಲುಪುರ ನಂದೀಶ್, ಪ್ರಧಾನ ಕಾರ್ಯದರ್ಶಿ ನಿರಂಜನಮೂರ್ತಿ, ನಿರ್ದೇಶಕ ಎಸ್, ಉಮೇಶ್, ಮುಖಂಡರಾದ ಕೋಡಿಮೋಳೆ ರಾಜಶೇಖರ್, ಆರ್. ಪುಟ್ಟಮಲ್ಲಪ್ಪ, ನಟೇಶ್, ರತ್ನಮ್ಮ, ಎನ್‌ರಿಚ್ ಮಹದೇವಸ್ವಾಮಿ, ಆಲೂರು ಬಾಬು, ಗುರು, ವಿರೇಂದ್ರ, ಹೊಸೂರು ಜಗದೀಶ್, ಗಿರಿ ಇತರರು ಇದ್ದರು.