ನವಲಗುಂದ:
ಪ್ರಜಾಪ್ರಭುತ್ವದ ಅಡಿಪಾಯವೇ ನಿಖರ ಮತ್ತು ಸಮಗ್ರ ಮತದಾರರ ಪಟ್ಟಿಯಾಗಿದೆ. ಹೀಗಾಗಿ, ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದರು.ತಾಲೂಕಿನ ಹಣಸಿ, ಶಿರಕೋಳ, ಮೊರಬ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಅಂಗವಾಗಿ ಬೂತ್ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಎಸ್‌ಐಆರ್ ನಮೂನೆ ಭರ್ತಿ ಮಾಡಿ ಸಲ್ಲಿಸಿದರು. ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಈ ವಿಶೇಷ ಪರಿಷ್ಕರಣೆ ಅಭಿಯಾನದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಬೇಕು. ಅರ್ಹ ಮತದಾರರಿಗೆ ಅಗತ್ಯ ನೆರವು ನೀಡಿ, ಯಾವುದೇ ಒಬ್ಬ ಅರ್ಹ ವ್ಯಕ್ತಿಯ ಹೆಸರು ಕೂಡ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಜಾಗೃತಿ ಮೂಡಿಸಬೇಕು. ಆ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿ ಪ್ರತಿಯೊಬ್ಬ ಅರ್ಹ ಮತದಾರನ ಹಕ್ಕನ್ನು ಸಂರಕ್ಷಿಸೋಣ ಎಂದರು.ಬ್ಲಾಕ್ ಅಧ್ಯಕ್ಷ ವರ್ಧಮಾನ ಹಿರೇಗೌಡ್ರ, ಸದುಗೌಡ ಪಾಟೀಲ, ಎಂ.ಎಸ್. ರೋಣದ, ಶಾಂತವ್ವ ಗುಜ್ಜಳ, ಸೋಮಲಿಂಗಪ್ಪ ಬಳಿಗೇರ, ದಾವಲಸಾಬ ಖುದ್ಧನವರ, ಸಂತೋಷ ಗುಜ್ಜಳ, ಈರಪ್ಪ ಮಾಳವಾಡ, ಮೌಲಾಸಾಬ ಮುತ್ತೋಜಿ, ಎಂ.ಎಂ. ಕಳ್ಳಿಮನಿ, ಗಡಿಗೆಪ್ಪ ಪಾಟೀಲ, ರಾಮಣ್ಣ ನಾಯ್ಕರ, ಶಿವಲೀಲಾ ಬೋರಶೆಟ್ಟರ ಸೇರಿ ಹಲವರಿದ್ದರು.