ಬದುಕಿಗೆ ಚೈತನ್ಯ ನೀಡುವ ಶಕ್ತಿ ರಂಗಭೂಮಿಗಿದೆ

| Published : Mar 29 2024, 12:50 AM IST

ಬದುಕಿಗೆ ಚೈತನ್ಯ ನೀಡುವ ಶಕ್ತಿ ರಂಗಭೂಮಿಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ವೈಚಾರಿಕತೆ ಹಾದಿಯಲ್ಲಿ ಆದರ್ಶಪ್ರಾಯ ಮೌಲ್ಯಗಳನ್ನು ಕಲ್ಪಿಸಿ, ಬದುಕಿಗೆ ಚೈತನ್ಯ ನೀಡುವ ಶಕ್ತಿ ರಂಗಭೂಮಿಗಿದೆ. ಕಲಾವಿದರು ಈ ನಾಡಿನ ಸಾಂಸ್ಕೃತಿಕ ಸಂಪತ್ತು. ಆಧುನಿಕ ಮಾಧ್ಯಮಗಳ ಪ್ರಾಬಲ್ಯದಲ್ಲಿ ರಂಗಭೂಮಿ ಕಲೆ ನಶಿಸುತ್ತಿರುವುದು ಆತಂಕದ ಸಂಗತಿ ಎಂದು ಸಾಹಿತಿ ಎಚ್.ಕೆ. ಸತ್ಯಭಾಮ ಮಂಜುನಾಥ್ ದಾವಣಗೆರೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ ವೈಚಾರಿಕತೆ ಹಾದಿಯಲ್ಲಿ ಆದರ್ಶಪ್ರಾಯ ಮೌಲ್ಯಗಳನ್ನು ಕಲ್ಪಿಸಿ, ಬದುಕಿಗೆ ಚೈತನ್ಯ ನೀಡುವ ಶಕ್ತಿ ರಂಗಭೂಮಿಗಿದೆ. ಕಲಾವಿದರು ಈ ನಾಡಿನ ಸಾಂಸ್ಕೃತಿಕ ಸಂಪತ್ತು. ಆಧುನಿಕ ಮಾಧ್ಯಮಗಳ ಪ್ರಾಬಲ್ಯದಲ್ಲಿ ರಂಗಭೂಮಿ ಕಲೆ ನಶಿಸುತ್ತಿರುವುದು ಆತಂಕದ ಸಂಗತಿ ಎಂದು ಸಾಹಿತಿ ಎಚ್.ಕೆ. ಸತ್ಯಭಾಮ ಮಂಜುನಾಥ್ ಅಭಿಪ್ರಾಯಪಟ್ಟರು.

ನಗರದ ರೋಟರಿ ಬಾಲಭವನದಲ್ಲಿ ಬುಧವಾರ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಜನರಲ್ಲಿ ರಂಗಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನವಾಗಬೇಕು. ಮನುಷ್ಯ ಸುಸಂಸ್ಕೃತನಾಗಿ ಬಾಳಲು ಕಲೆ, ಸಾಹಿತ್ಯ, ಸಂಗೀತವನ್ನು ಆಸ್ವಾದಿಸಬೇಕು ಎಂದರು.

ಪತ್ರಕರ್ತ, ಕಲಾವಿದ ಬಸವರಾಜ ಐರಣಿ ರಂಗಭೂಮಿ ಕುರಿತು ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ರಂಗ ತರಬೇತಿ ನೀಡಬೇಕು. ಅದಕ್ಕಾಗಿ ರಂಗ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಇಂದು ಕಲಾವಿದರಲ್ಲಿ ಒಗ್ಗಟ್ಟಿನ ಕೊರತೆ ಕಾಣುತ್ತಿದೆ. ಸಂಘಟನಾತ್ಮಕ ಹೋರಾಟದಿಂದ ಸಮರ್ಪಕ ಸೌಲಭ್ಯಗಳನ್ನು ಪಡೆಯಬಹುದು ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಗೌರವಾಧ್ಯಕ್ಷ ಎಂ.ಎಸ್. ನಾಗರಾಜಪ್ಪ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಸಾಹಿತಿ, ಲೇಖಕ ಡಾ. ಎ.ಶಿವನಗೌಡ, ಮಾನವ ಮಹಿಳಾ ಹಕ್ಕುಗಳ ಅಧ್ಯಕ್ಷರಾದ ಡಿ.ಎಂ. ಕಲ್ಪನಾ ರಾಜ್, ಬಿಳಿಚೋಡಿನ ಕಲಾವಿದ ಪಿ.ಜಿ. ಪರಮೇಶ್ವರಪ್ಪ, ನಾರಶೆಟ್ಟಿಹಳ್ಳಿ ಕಲಾವಿದ ಬಿ.ಇ.ತಿಪ್ಪೇಸ್ವಾಮಿ, ಶ.ಸಾ.ಪ. ಜಿಲ್ಲಾಧ್ಯಕ್ಷ ಪರಮೇಶ್ವರಪ್ಪ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಎ.ಸೂರೇಗೌಡರು ಪ್ರಾರ್ಥಿಸಿ, ವಾಣಿ ಗದಗ ಕಾರ್ಯಕ್ರಮ ನಿರೂಪಿಸಿದರು. ವಿಠೋಬರಾವ್ ಕಾರ್ಯನಿರ್ವಹಿಸಿದರು. ಸಂಘದ ಅಧ್ಯಕ್ಷ ಎನ್.ಎಸ್.ರಾಜು ಸ್ವಾಗತಿಸಿ, ವಂದಿಸಿದರು.

ಅನಂತರ ಕಲಾವಿದರಿಂದ ಚೌಡಕಿ ಪದ, ಭಜನೆ, ಸಂಗೀತ, ರಂಗಗೀತೆ, ಏಕಪಾತ್ರಾಭಿನಯ ಕಾರ್ಯಕ್ರಮಗಳು ನಡೆದವು.

- - - -28ಕೆಡಿವಿಜಿ32ಃ:

ದಾವಣಗೆರೆಯಲ್ಲಿ ಸ್ಫೂರ್ತಿ ಸೇವಾ ಸಂಘದಿಂದ ನಡೆದ ರಂಗಭೂಮಿ ದಿನ ಕಾರ್ಯಕ್ರಮವನ್ನು ಸಾಹಿತಿ ಎಚ್.ಕೆ.ಸತ್ಯಭಾಮ ಉದ್ಘಾಟಿಸಿದರು.