ಬಿಜೆಪಿ ಪಕ್ಷ ರಾಷ್ಟ್ರಾಭಿವೃದ್ಧಿ ಧ್ಯೇಯದಿಂದ ಕಾರ್ಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಭಾರತದ ಬಲಿಷ್ಠತೆಗೆ ಶ್ರಮಿಸುತ್ತಿದ್ದಾರೆ

ಕುಕನೂರು: ಬಿಜೆಪಿ ಪಕ್ಷ ಎಲ್ಲರನ್ನು ಸಮನಾಗಿ ನೋಡುತ್ತದೆ. ಬಿಜೆಪಿಯಲ್ಲಿ ಕೀಳರಿಮೆ, ತಾರತಮ್ಯ ಇಲ್ಲ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಗಾಣದಾಳ ಗ್ರಾಮದ ಮುಖಂಡರನ್ನು ಬರಮಾಡಿಕೊಂಡು ಮಾತನಾಡಿದ ಅವರು, ಬಿಜೆಪಿ ಪಕ್ಷ ರಾಷ್ಟ್ರಾಭಿವೃದ್ಧಿ ಧ್ಯೇಯದಿಂದ ಕಾರ್ಯ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಭಾರತದ ಬಲಿಷ್ಠತೆಗೆ ಶ್ರಮಿಸುತ್ತಿದ್ದಾರೆ. ಅವರಿಗೆ ಶಕ್ತಿಯಾಗಿ ಇಡೀ ರಾಷ್ಟ್ರದ ಜನತೆ ನಿಂತಿದ್ದಾರೆ. ಬಿಜೆಪಿಯಲ್ಲಿರುವ ಎಲ್ಲಾ ಕಾರ್ಯಕರ್ತರು ಬಿಜೆಪಿಯ ನಾಯಕರು. ಬಿಜೆಪಿಯಲ್ಲಿ ನಾಯಕ, ಮುಖಂಡ ಎಂಬುದು ಇಲ್ಲ. ಎಲ್ಲರು ಇಲ್ಲಿ ಸಮಾನರು. ಜನರು ಬಿಜೆಪಿಯ ತತ್ವ, ಸಿದ್ದಾಮತ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಜನರ ಹಿತಕ್ಕಾಗಿ ಬಿಜೆಪಿ ಕೆಲಸ ಮಾಡುತ್ತದೆ ಎಂದರು.

ಮುಖಂಡರಾದ ಸಂಜೀವಪ್ಪ ಜರಕುಂಟಿ, ಮಂಜುನಾಥ ಬಳಿಗಾರ ಹಾಗೂ ಇತರರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ ಹಾಗೂ ಗಾಣದಾಳ ಗ್ರಾಮದ ಮುಖಂಡರಿದ್ದರು.