ರಾಯರಡ್ಡಿ ಪತ್ರ ಬರೆದಿದ್ದರಲ್ಲಿ ತಪ್ಪೇನಿಲ್ಲ: ರಾಜಶೇಖರ ಹಿಟ್ನಾಳ

| Published : Oct 26 2025, 02:00 AM IST

ರಾಯರಡ್ಡಿ ಪತ್ರ ಬರೆದಿದ್ದರಲ್ಲಿ ತಪ್ಪೇನಿಲ್ಲ: ರಾಜಶೇಖರ ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಹಿರೇಹಳ್ಳ ಸೇರಿದಂತೆ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆದಿದ್ದರೆ ಅದನ್ನು ತಡೆಯುವ ದಿಸೆಯಲ್ಲಿ ಪತ್ರ ಬರೆದಿದ್ದಾರೆ.

ಕೊಪ್ಪಳ: ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹಿರಿಯರು. ಭ್ರಷ್ಟಚಾರ ನಡೆದಿದ್ದರೆ ಅದನ್ನು ತಿದ್ದಲೆಂದು ಪತ್ರ ಬರೆದಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರೇಹಳ್ಳ ಸೇರಿದಂತೆ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆದಿದ್ದರೆ ಅದನ್ನು ತಡೆಯುವ ದಿಸೆಯಲ್ಲಿ ಪತ್ರ ಬರೆದಿದ್ದಾರೆ. ಅಧಿಕಾರಿಗಳು ಬಹಳ ದಿನಗಳಿಂದ ಇದ್ದಾರೆ. ಹೀಗಾಗಿ ಅವರು ಇದರಲ್ಲಿ ಭಾಗಿಯಾಗಿರಬಹುದು, ಅವರನ್ನು ವರ್ಗಾವಣೆ ಮಾಡಿ ಎಂದು ಬರೆದಿದ್ದಾರೆ. ಅದು ಸರಿಯಾಗಿದೆ ಎಂದರು.

ಇದರಲ್ಲಿ ನಮ್ಮ ಮೇಲೆ ಎತ್ತಿ ಕಟ್ಟುವ, ಟಾರ್ಗೆಟ್ ಮಾಡುವ ಪ್ರಶ್ನೆ ಇಲ್ಲ. ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ. ಜಗಳ ಹಚ್ಚಲು ಹೀಗೆ ಹೇಳುತ್ತಾರೆ ಎಂದರು.

ಇಲಾಖೆಯಲ್ಲಿರುವ ಅಧಿಕಾರಿಗಳು ನಮ್ಮ ಸಂಬಂಧಿಕರೇನಲ್ಲ ಎಂದು ಖಡಕ್ ಆಗಿಯೇ ಹೇಳಿದ್ದಾರೆ. ಅವರು ಹಿರಿಯರಿದ್ದಾರೆ. ತಮಗಿರುವ ಮಾಹಿತಿಯನ್ನಾಧರಿಸಿ ಸುಧಾರಣೆಗಾಗಿ ಸಿಎಂ ಅವರಿಗೆ ಪತ್ರ ಬರೆದಿದ್ದಾರೆ. ಸಿಎಂ ಈ ಕುರಿತು ಕ್ರಮ ವಹಿಸುತ್ತಾರೆ ಎಂದರು.