ಕೆಎಎಸ್, ಐಎಎಸ್ ತರಬೇತಿ ಕೇಂದ್ರ ತೆರೆಯಲು ಚಿಂತನೆ

| Published : Oct 05 2025, 01:01 AM IST

ಕೆಎಎಸ್, ಐಎಎಸ್ ತರಬೇತಿ ಕೇಂದ್ರ ತೆರೆಯಲು ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಸರ್ಕಾರಿ ಮಹಿಳಾ ಪ್ರಥಮ ಕಾಲೇಜು ಬೇಕಾಗಿತ್ತು. ಇದನ್ನು ಮನಗಂಡು ಹಿಂದಿನ ನಮ್ಮ ಸರ್ಕಾರ ಅವಧಿಯಲ್ಲಿಯೇ ಕಾಲೇಜು ಮಂಜೂರು ಮಾಡಿ, ಸ್ವಂತ ಕಟ್ಟಡಕ್ಕೆ ಜಾಗವಿಲ್ಲದ ಇತರೇ ಸರ್ಕಾರಿ ಕಟ್ಟಡವನ್ನು ಬಳಕೆ ಮಾಡಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಮಹಿಳಾ ಪ್ರಥಮ ಕಾಲೇಜು ನಿರ್ಮಾಣ ಮಾಡಿ, ಸೂಕ್ತ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಕೆಎಎಸ್, ಐಎಎಸ್ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದು ಕ್ಷೇತ್ರದ ಶಾಸಕ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಚೇರಿಯಲ್ಲಿ ನಡೆದ ಶಾಲಾಭಿವೃದ್ಧಿ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸರ್ಕಾರಿ ಮಹಿಳಾ ಪ್ರಥಮ ಕಾಲೇಜು ಬೇಕಾಗಿತ್ತು. ಇದನ್ನು ಮನಗಂಡು ಹಿಂದಿನ ನಮ್ಮ ಸರ್ಕಾರ ಅವಧಿಯಲ್ಲಿಯೇ ಕಾಲೇಜು ಮಂಜೂರು ಮಾಡಿ, ಸ್ವಂತ ಕಟ್ಟಡಕ್ಕೆ ಜಾಗವಿಲ್ಲದ ಇತರೇ ಸರ್ಕಾರಿ ಕಟ್ಟಡವನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಈಗಾಗಲೇ 600 ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ವಿವಿಧ ಕೋರ್ಸುಗಳನ್ನು ಆರಂಭಿಸಲಾಗಿದೆ. ಹೆಣ್ಣು ಮಕ್ಕಳು ಬಹಳ ಆಸಕ್ತಿಯಿಂದ ವ್ಯಾಸಂಗ ಮಾಡುತ್ತಿದ್ದಾರೆ. ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಸುವ ಬಗ್ಗೆ ಸಭೆಯಲ್ಲಿ ಅನುಮೋದನೆ ಪಡೆದುಕೊಂಡರು.

ಮೇಜರ್ ಕನ್ನಡ, ಮೇಜರ್ ಇಂಗ್ಲೀಷ್, ಸಾರ್ವಜನಿಕ ಆಡಳಿತ, ಬಯೋ ಕೇಮಿಸ್ಟ್ರಿ, ಬಯೋ ಟೆಕ್ನಾಲಜಿಯನ್ನು ಸೇರಿಸಿಕೊಂಡರೆ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಪ್ರಿನ್ಸಿಪಾಲ್ ಮಹದೇವಸ್ವಾಮಿ ಅವರು ತಿಳಿಸುತ್ತಿದ್ದಂತೆ ಆಡಳಿತ ಮಂಡಳಿ ಕ್ರಮ ವಹಿಸಲು ತಿಳಿಸಿದರು.

ಸಭೆಯಲ್ಲಿ ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿ ಘಟಕ ನಿರ್ಮಾನ, ಮತ್ತು ನಿರ್ವಹಣೆ, ಸಿಸಿ ಕ್ಯಾಮಾರಾ ಆಳವಡಿಕೆ, ಶೌಚಾಲಯ ನಿರ್ವಹಣೆ, ಪಿಠೋಪಕರಣಗಳು, ಗಣಕಯಂತ್ರ ವಿಭಾಗಕ್ಕೆ ಅವಶ್ಯಕವಾದ ಪಠ್ಯ ಪುಸ್ತಕಗಳು, ಲ್ಯಾಪ್‌ಟಾಪ್, ವಿಜ್ಞಾನ ವಿಭಾಗಕ್ಕೆ ಕೆಮಿಕಲ್ಸ್, ಪುಸ್ತಕಗಗಳನ್ನು ಖರೀದಿಸಲು ಅನುಮೋದನೆ ನೀಡಿದರು.

ಸಭೆಯಲ್ಲಿ ಕೊಳ್ಳೆಗಾಲ ಮನೋರಖ್ಖಿತ ಬಂತೇಜಿ, ಪ್ರಾಂಶುಪಾಲ ಡಾ. ಮಹದೇವಸ್ವಾಮಿ, ಸದಸ್ಯರಾದ ಬಿ.ಕೆ. ರವಿಕುಮಾರ್, ಹೆಬ್ಬಸೂರು ರಂಗಸ್ವಾಮಿ, ಗೋವಿಂದಶೆಟ್ಟಿ, ಕರಿನಂಜನಪುರ ಸ್ವಾಮಿ, ಕಾಗಲವಾಡಿ ಚಂದ್ರು, ಶಾಂತಲಾ, ಎಂ. ಮಹದೇವಸ್ವಾಮಿ, ಶಮಿವುಲ್ಲಾ, ಪಿಡಬ್ಲ್ಯೂಡಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿರಣ್, ಪ್ರೊ. ಮಲ್ಲಿಕಾರ್ಜುನಸ್ವಾಮಿ, ಪ್ರೊ. ಜಯಣ್ಣ, ಅನೇಕರು ಇದ್ದರು.

--------

3ಸಿಎಚ್ಎನ್‌20

ಚಾಮರಾಜ

ನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಚೇರಿಯಲ್ಲಿ ನಡೆದ ಶಾಲಾಭಿವೃದ್ಧಿ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿದರು.