ಮಾನವೀಯತೆ ಮೆರೆದ ಪುರಸಭೆ ಮಾಜಿ ಅಧ್ಯಕ್ಷ ಟಿ.ಕೆ.ರಮೇಶ್

| Published : Nov 11 2023, 01:15 AM IST

ಸಾರಾಂಶ

ಮಾನವೀಯತೆ ಮೆರೆದ ಪುರಸಭೆ ಮಾಜಿ ಅಧ್ಯಕ್ಷ ಟಿ.ಕೆ.ರಮೇಶ್

ಕನ್ನಡಪ್ರಭ ವಾರ್ತೆ, ತರೀಕೆರೆ

ರಾತ್ರಿ ಸುರಿಯುವ ಜಡಿ ಮಳೆಯಲ್ಲಿ ರಸ್ತೆ ಬದಿಯಲ್ಲಿ ಜ್ಞಾನ ತಪ್ಪಿಬಿದ್ದಿದ್ದ 70 ವರ್ಷದ ವೃದ್ಧೆಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪುರಸಭಾ ಮಾಜಿ ಅಧ್ಯಕ್ಷ ಟಿ.ಕೆ.ರಮೇಶ್ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸ್ನೇಹಿತರ ಮನೆಯಿಂದ ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಲ್ಲಿ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಮನೆಗೆ ಹೋಗುವಾಗ ರಸ್ತೆಯಲ್ಲಿ ಬಿದ್ದಿರುವ ಮಹಿಳೆಯನ್ನು ಕಂಡ ಟಿ.ಕೆ.ರಮೇಶ್ ತಕ್ಷಣವೇ ಕಾರಿನಿಂದ ಇಳಿದು ಜ್ಞಾನ ತಪ್ಪಿದ್ದ ಮಹಿಳೆಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.

ರಸ್ತೆ ಬದಿ ಜ್ಞಾನ ತಪ್ಪಿ ಬಿದ್ದಿದ್ದ ಮಹಿಳೆಗೆ ಮುಖ ಹಾಗೂ ಸೊಂಟಕ್ಕೆ ಪೆಟ್ಟು ಬಿದ್ದಿತ್ತು.

ತಾಲೂಕು ಸಾರ್ವಜನಿಕ ಆಸ್ಪತ್ರೆ ಹೆಸರಿಗೆ ತಕ್ಕಂತೆ ಚಿಕಿತ್ಸಾ ವಿಭಾಗದ ಕರ್ತವ್ಯ ನಿರತರಾದ ಕೀಲು ಮತ್ತು ಮೂಳೆ ತಜ್ಞರಾದ ಡಾ.ದೇವರಾಜ್,ಶುಶ್ರೂಷಕಿ ಹಾಗೂ ಅಧಿಕಾರಿಗಳಾದ ಮಂಜುನಾಯಕ್, ಸುನಿತ, ಸರಿತಾ,ಇತರ ಸಿಬ್ಬಂದಿ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದಾರೆ.ವಿಷಯ ತಿಳಿದು ಬೆಳಿಗ್ಗೆ ಪುರಸಭೆ ಮಾಜಿ ಸದಸ್ಯರಾದ ಅಕ್ಬರ್ ಪಾಷ, ಬಿ.ಎಂ.ನಾಗಮ್ಮ ಕೆ.ರಂಗಯ್ಯ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಗೆ ಹಣ್ಣು ನೀಡಿ ಆರೋಗ್ಯ ವಿಚಾರಿಸಿದರು. ಮಹಿಳೆ ಆರೋಗ್ಯದಲ್ಲಿ ಚೇತರಿಕೆ ಹಾಗೂ ಲವಲವಿಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಲ್ಲಿ ನಂಬಿಕೆ ಉಂಟು ಮಾಡುವಂತಹ ಇಂತಹ ಚಿಕಿತ್ಸೆ ಮತ್ತು ಆರೈಕೆಗೆ ಕಾರಣರಾದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಮತ್ತು ವೈದ್ಯ ಸಿಬ್ಬಂದಿ ಬಗ್ಗೆ ಟಿ.ಕೆ.ರಮೇಶ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 10ಕೆಟಿಆರ್.ಕೆ.1ಃ ಮಾಜಿ ಪುರಸಭಾಧ್ಯಕ್ಷ ಟಿ.ಕೆ.ರಮೇಶ್ ಅವರು ಪಟ್ಟಣದ ರಸ್ತೆ ಬದಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ 70 ವರ್ಷದ ಮಹಿಳೆಯನ್ನು ಸಾರ್ವಜನಿಕ ಅಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಹಣ್ಣು ನೀಡಿದರು.