ಸಾರಾಂಶ
ಕುದೂರು: ಶಿವ ಪಥವನ್ನು ಅರಿಯಬೇಕಾದರೆ ಮೊದಲು ಗುರುಪಥವನ್ನು ಅರಿಯಬೇಕು. ಗುರು ಯಾವಾಗಲೂ ಗೆಲುವಿನ ದಿಕ್ಕಿಗೆ ದಾರಿ ತೋರುವವನಾಗಿರುತ್ತಾನೆ ಎಂದು ಮಾಗಡಿ ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್ ತಿಳಿಸಿದರು.
ಮಾಗಡಿ ತಾಲೂಕು ತಿಪ್ಪಸಂದ್ರ ಹೋಬಳಿ ಚಿಕ್ಕಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಚಿಕ್ಕಹಳ್ಳಿ ಗ್ರಾಮ ಪಂಚಾಯ್ತಿಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಗುರುವಂದನಾ ಮತ್ತು ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಚಿಕ್ಕಹಳ್ಳಿ ಕ್ಲಸ್ಟರ್ ನಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಶಿಕ್ಷಕರನ್ನು ಗೌರವಿಸುವ ಮತ್ತು ಅಂಗನವಾಡಿ ಆಶಾ ಕಾರ್ಯಕರ್ತೆಯರನ್ನು ಗೌರವಿಸುವ ಸಂಪ್ರದಾಯವನ್ನು ಚಿಕ್ಕಹಳ್ಳಿ ಗ್ರಾಮ ಪಂಚಾಯ್ತಿ ಕಳೆದ ಐದು ವರ್ಷಗಳಿಂದ ಪಾಲಿಸುತ್ತ ಬಂದಿದೆ. ಇದು ಗುರುವಿಗೆ ತೋರುವ ಭಕ್ತಿ ಭಾವದ ಪರಂಪರೆ ಮುಂದುವರೆಯಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಗಂ.ದಯಾನAದ ಮಾತನಾಡಿ ಕುರಿಗಳ ನಡುವೆ ಬೆಳೆದ ಹುಲಿಮರಿ ಕೂಡಾ ತನ್ನ ಅಸ್ತಿತ್ವವನ್ನು ಮರೆತು ಕುರಿಗಳ ರೀತಿ ಬೆಳೆಯುವಂತೆ ಮಕ್ಕಳು ನಮ್ಮ ಕೈಯಲ್ಲಿ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಹತಾಶವಾದಿಗಳ ಜೊತೆಗೆ ಇರುವುದನ್ನು ಬಿಟ್ಟು ಆಶಾಜೀವಿಗಳ ಜೊತೆ ಇದ್ದಾಗ ನಮ್ಮ ನಿಜವಾದ ಸಾಮರ್ಥ್ಯದ ಅರಿವಾಗುತ್ತದೆ ಎಂದು ತಿಳಿಸಿದರು.ಗ್ರಾಮ ಪಂಚಾಯಿತಿ ಸದಸ್ಯ ನಿಂಗೇಗೌಡ ಮಾತನಾಡಿ, ಪ್ರತಿಭಾವಂತ ಶಿಕ್ಷಕರ ಸಮೂಹವನ್ನು ಹೊಂದಿರುವ ಗ್ರಾಮ ಯಾವುದೇ ಸಮಸ್ಯೆ ಇಲ್ಲದೆ ಎಲ್ಲಾ ವಿಭಾಗಗಳಲ್ಲೂ ಸಮೃದ್ದಿಯಾಗಿ ಪ್ರಗತಿಯನ್ನು ಸಾಧಿಸುತ್ತದೆ ಎಂದು ಹೇಳಿದರು.
ಸಿಆರ್‌ಪಿ ವಿಜಯಲಕ್ಷ್ಮಿ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಹೊರಗೆ ತೆಗೆದು ಜಗತ್ತಿಗೆ ತೋರಿಸುವುದರ ಜೊತೆಗೆ ಆ ವಿದ್ಯಾರ್ಥಿಯ ನಿಜವಾದ ದಾರಿ ಯಾವುದು, ಗುರಿ ಏನು ಎಂಬುದರ ಅರಿವನ್ನು ಮೂಡಿಸುವ ಕೆಲಸವನ್ನು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಾಡುತ್ತಾ ಬಂದಿವೆ ಎಂದು ತಿಳಿಸಿದರು.ಕಸಾಪ ಅಧ್ಯಕ್ಷ ಪದ್ಮನಾಭ್, ಚಿಕ್ಕಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷ ಮುನಿರಾಜ್, ಸದಸ್ಯ ನಿಂಗೇಗೌಢ, ಶಿವಪ್ರಸಾದ್, ಪುಷ್ಪವೆಂಕಟೇಶ್, ಜಯಮ್ಮ, ಚಿಕ್ಕಬೋರಣ್ಣ, ಭವ್ಯ, ನೂರ್‌ಜಾನ್, ಯಸ್ಮೀನಭಾನು, ನರಸಿಂಹಯ್ಯ, ಗುರುಪ್ರಸಾದ್, ಎಸ್‌ಡಿಎಂಸಿ ಅದ್ಯಕ್ಷ ಸಲೀಮ್, ಚಿಕ್ಕಹಳ್ಳಿ ಎಚ್‌ಪಿಎಸ್ ಮುಖ್ಯೋಪಾಧ್ಯಾಯ ಮಹೇಶ್, ಸಿದ್ದಲಿಂಗದೇವರು, ಜಯಣ್ಣ, ಇಷ್ರತ್‌ಭಾನು, ಪ್ರತಿಭಾರವಿ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಮಂಜುಳ, ಶಿಕ್ಷಣ ಸಂಯೋಜಕ ಮಂಜುನಾಥ್, ಹಾಜರಿದ್ದರು.
21ಕೆಆರ್ ಎಂಎನ್ 5.ಜೆಪಿಜಿಮಾಗಡಿ ತಾಲೂಕು ಚಿಕ್ಕಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮ ಮತ್ತು ಪ್ರತಿಬಾಕಾರಂಜಿ ಕರ‍್ಯಕ್ರಮದಲ್ಲಿ ಶಿಕ್ಷಕರು ಮತ್ತು ಪಂಚಾಯ್ತಿ ಸದಸ್ಯರನ್ನು ಸನ್ಮಾನಿಸಲಾಯಿತು.
)
)
;Resize=(128,128))
;Resize=(128,128))
;Resize=(128,128))
;Resize=(128,128))