ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ (ರಿ) ಕಿಕ್ಕೇರಿ ವತಿಯಿಂದ ಕಸಬಾ ವಲಯದ ಮಡುವಿನ ಕೋಡಿ ಕಾರ್ಯಕ್ಷೇತ್ರದಲ್ಲಿ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ನಡೆಯಿತು.ಸಂಸ್ಥೆ ಜಿಲ್ಲಾ ನಿರ್ದೇಶಕರಾದ ಯೋಗೇಶ್ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉದ್ದೇಶಗಳು, ಕಾರ್ಯಕ್ರಮಗಳು, ಸಮುದಾಯ ಅಭಿವೃದ್ಧಿ, ಸ್ವಸಹಾಯ ಸಂಘಗಳ ಪಾತ್ರ, ಕೃಷಿ ಅಭಿವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿ, ಪ್ರಗತಿ ನಿಧಿ, ಜನಜಾಗೃತಿ, ನಮ್ಮೂರು ನಮ್ಮ ಕೆರೆ, ಜ್ಞಾನದೀಪ ಶಾಲಾ ಶಿಕ್ಷಣ, ಸುಜ್ಞಾನ ನಿಧಿ, ಶಿಷ್ಯವೇತನ ಯೋಜನೆ, ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಮೊದಲಾದ ವಿವಿಧ ಯೋಜನೆಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು.
ಮುಖ್ಯವಾಗಿ ಒಕ್ಕೂಟದ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಹೇಗೆ ಸಮರ್ಪಕವಾಗಿ ನಿರ್ವಹಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು.ಯೋಜನಾಧಿಕಾರಿ ಪ್ರಸಾದ್ ಮಾತನಾಡಿ, ಪ್ರಗತಿ ರಕ್ಷಾ ಕವಚ, ಬಡ್ಡಿದರ, ವಾರದ ಸಭೆ, ಒಕ್ಕೂಟ ಸಭೆ, ಮರುಪಾವತಿ ಚೀಟಿ ಅನುಷ್ಠಾನ, ಆರೋಗ್ಯ ರಕ್ಷಾ ಹಾಗೂ ಸಂಪೂರ್ಣ ಸುರಕ್ಷಾ ವಿಮಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಗುಣಶ್ರೀ, ಸೇವಾ ಪ್ರತಿನಿಧಿಗಳಾದ ಅನಿತಾ, ಉಮಾ, ಶ್ವೇತಾ, ನೇತ್ರವತಿ, ಶಶಿಕಲಾ, ಸುನಿತಾ ಹಾಗೂ ಒಕ್ಕೂಟ ಪದಾಧಿಕಾರಿಗಳು ಉಪಸ್ಥಿತರಿದ್ದರು.ಇಂದು ಸ್ವಯಂ ಸೇವಕರಿಂದ ಪಥ ಸಂಚಲನ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸ್ಥಾಪನೆಯಾಗಿ ನೂರುವರ್ಷ ತುಂಬಿದ ಹಿನ್ನೆಲೆಯಲ್ಲಿ ಅ.26 ರಂದು ಪಟ್ಟಣದಲ್ಲಿ ಸ್ವಯಂ ಸೇವಕರಿಂದ ಪಥ ಸಂಚಲನ ನಡೆಯಲಿದೆ.
ಅಂದು ಸಂಜೆ 4 ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಗಣವೇಷ ಧರಿಸಿ ದಂಡದಾರಿಗಳಾಗಿ ಶಿಸ್ತಿನ ಪಥಸಂಚಲನ ನಡೆಸಲಿದ್ದಾರೆ. ಪಥಸಂಚಲನ ಯಶಸ್ಸಿಗೆ ಸಕಲ ಸಿದ್ಧತೆ ನಡೆಯುತ್ತಿವೆ.ಪಥಸಂಚಲನದಲ್ಲಿ ಭಾಗವಹಿಸುವ ನೂತನ ಕಾರ್ಯಕರ್ತರಿಗೆ ಅಗತ್ಯವಾದ ಸಮವಸ್ತ್ರ, ದಂಡ ಮತ್ತು ಟೋಪಿಗಳ ಮಾರಾಟಕ್ಕಾಗಿ ಗಣವೇಷ ಮಾರಾಟ ಮಳಿಗೆ ತೆರೆಯಲಾಗಿದೆ.
ಪಥ ಸಂಚಲನಕ್ಕೆ ಅಗತ್ಯವಾದ ಅನುಮತಿಯಿಂದ ಈಗಾಗಲೇ ಸಂಘದ ಸದಸ್ಯರು ತಾಲೂಕು ಆಡಳಿತದಿಂದ ಪಡೆದುಕೊಂಡಿದ್ದು ಪಟ್ಟಣದ ಹೊಸಹೊಳಲು ರಸ್ತೆಯ ಅಗ್ನಿ ಶಾಮಕ ಠಾಣೆಯ ಮುಖ್ಯರಸ್ತೆ, ಪ್ರವಾಸಿ ಮಂದಿರ ವೃತ್ತ, ಹಳೇ ಪುರಸಭೆ ವೃತ್ತ, ಹೊಸ ಕಿಕ್ಕೇರಿ ರಸ್ತೆಯ ಮೂಲಕ ಹಳೇ ಕಿಕ್ಕೇರಿ ರಸ್ತೆ, ಜಾಮೀಯಾ ಮಸೀದಿ ವೃತ್ತದ ಮೂಲಕ ನಾಗಮಂಗಲ ರಸ್ತೆ ಮಾರ್ಗವಾಗಿ ಟಿಎಪಿಸಿಎಂಎಸ್ ಬಳಿಯಿಂದ ಸಾಗಿ ಜಾಮೀಯಾ ಮಸೀದಿ ವೃತ್ತಕ್ಕೆ ಬರಲಿರುವ ಪಥಸಂಚಲನ ಮುಖ್ಯರಸ್ತೆಯಲ್ಲಿ ಕುಮಾರ್ ಟೆಕ್ಸ್ ಟೈಲ್ ವರೆಗೆ ಸಾಗಿ ಅಂತ್ಯಗೊಳ್ಳಲಿದೆ.150ಕ್ಕೂ ಹೆಚ್ಚು ಸ್ವಯಂ ಸೇವಕರು ಪಥಸಂಚಲನದಲ್ಲಿ ಭಾಗವಹಿಸಲಿದ್ದು, ಸುಗಮ ಪಥಸಂಚಲನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾವುದೇ ಅಹಿತರ ಘಟನೆಗಳು ನಡೆಯದಂತೆ ಪಟ್ಟಣ ಪೋಲಿಸರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
;Resize=(128,128))
;Resize=(128,128))
;Resize=(128,128))