ಸಾರಾಂಶ
ಕೆ.ಆರ್.ಪೇಟೆ ಪಟ್ಟಣದ ಈ ರಸ್ತೆ ಹಲವು ದಶಕಗಳಿಂದ ರಿಪೇರಿಯಾಗದೆ ಬಡಾವಣೆ ನಿವಾಸಿಗಳಿಗೆ ಕಿರಿಕಿರಿಯಾಗಿತ್ತು. ನಿವಾಸಿಗಳು ನಾಗರೀಕ ಹಿತ ರಕ್ಷಣಾ ವೇದಿಕೆ ಮೂಲಕ ಸದರಿ ರಸ್ತೆಯ ರಿಪೇರಿಗಾಗಿ ಹತ್ತು ಹಲವು ಹೋರಾಟ ನಡೆಸಿ ಪುರಸಭೆ ಗಮನ ಸೆಳೆದಿದ್ದರೂ ರಸ್ತೆ ಮಾತ್ರ ರಿಪೇರಿಯಾಗದೆ ಜನ ಸಂಚಾರಕ್ಕೆ ಸಂಕಷ್ಟವಾಗಿತ್ತು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹಲವು ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಪಟ್ಟಣದ ಬಸವೇಶ್ವರ ನಗರದ 3ನೇ ಕ್ರಾಸ್ ರಸ್ತೆಯನ್ನು ಪುರಸಭಾ ಅಧ್ಯಕ್ಷೆ ಪಂಕಜಾ ಪ್ರಕಾಶ್ ಲೋಕಾರ್ಪಣೆ ಮಾಡಿದರು.ಪಟ್ಟಣದ ಈ ರಸ್ತೆ ಹಲವು ದಶಕಗಳಿಂದ ರಿಪೇರಿಯಾಗದೆ ಬಡಾವಣೆ ನಿವಾಸಿಗಳಿಗೆ ಕಿರಿಕಿರಿಯಾಗಿತ್ತು. ನಿವಾಸಿಗಳು ನಾಗರೀಕ ಹಿತ ರಕ್ಷಣಾ ವೇದಿಕೆ ಮೂಲಕ ಸದರಿ ರಸ್ತೆಯ ರಿಪೇರಿಗಾಗಿ ಹತ್ತು ಹಲವು ಹೋರಾಟ ನಡೆಸಿ ಪುರಸಭೆ ಗಮನ ಸೆಳೆದಿದ್ದರೂ ರಸ್ತೆ ಮಾತ್ರ ರಿಪೇರಿಯಾಗದೆ ಜನ ಸಂಚಾರಕ್ಕೆ ಸಂಕಷ್ಟವಾಗಿತ್ತು.
ಪಂಕಜಾ ಪ್ರಕಾಶ್ ಪುರಸಭೆ ಅಧ್ಯಕ್ಷರಾದ ನಂತರ ರಸ್ತೆ ಪುನರ್ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದರು. ಇದೀಗ ಸುಸಜ್ಜಿತ ಗುಣಮಟ್ಟದ ರಸ್ತೆ ನಿರ್ಮಾಣವಾಗಿದ್ದು, ಬಡಾವಣೆಯ ನಿವಾಸಿಗಳು ಸದರಿ ರಸ್ತೆಯನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ಅಧ್ಯಕ್ಷರಿಗೆ ಗೌರವಾರ್ಪಣೆ ಮಾಡಿದರು.ಈ ವೇಳೆ ಮಾತನಾಡಿದ ಪಟ್ಟಣ ನಾಗರೀಕ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಕೆ.ಎಸ್.ಸುರೇಶ್‌ಕುಮಾರ್, ಬಡಾವಣೆ ರಸ್ತೆ ಪುನರ್ ನಿರ್ಮಾಣಕ್ಕೆ ವೇದಿಕೆ ನಡೆಸಿದ ನಿರಂತರ ಹೋರಾಟಕ್ಕೆ ಪುರಸಭೆ ಅಧ್ಯಕ್ಷರು ಸ್ಪಂದಿಸಿದ್ದು, ನಾಗರಿಕರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಈ ವೇಳೆ ವೇದಿಕೆ ಅಧ್ಯಕ್ಷ ಬೊಪ್ಪನಹಳ್ಳಿ ಬಸವೇಗೌಡ, ನಿವೃತ್ತ ಸೈನಿಕ ಸುಕುಮಾರ್, ನಿವೃತ್ತ ಪ್ರಾಂಶುಪಾಲ ಲೇಪಾಕ್ಷಿಗೌಡ, ಮುಬೀನಾ ಸುರೇಶ್, ಭವ್ಯ ಪ್ರಕಾಶ್, ಪ್ರಕಾಶ್, ಪುರಸಭೆ ನಾಮಿನಿ ಸದಸ್ಯ ಅಜ್ಮತುಲ್ಹಾ ಷರೀಫ್, ಅಬೀದ್, ಸೈಯದ್ ಅತೀಕ್ ಸೇರಿದಂತೆ ಹಲವು ನಾಗರೀಕ ಮುಖಂಡರು ಉಪಸ್ಥಿತರಿದ್ದರು.ನವೆಂಬರ್ 5 ರಂದು ಕಲಾಶ್ರೀ ಸ್ಪರ್ಧೆ
ಮಂಡ್ಯ: ಜಿಲ್ಲಾ ಬಾಲಭವನದಲ್ಲಿ 2025 26 ನೇ ಸಾಲಿನಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ 5 ರಿಂದ 15 ವರ್ಷದ ಒಳಗಿನ ಮಕ್ಕಳಿಗೆ ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸೃಜನಾತ್ಮಕ ಕಲೆ, ಸೃಜನಾತ್ಮಕ ಪ್ರದರ್ಶನ ಕಲೆ, ಸೃಜನಾತ್ಮಕ ಬರವಣಿಗೆ ಮತ್ತು ವಿಜ್ಞಾನದಲ್ಲಿ ನೂತನ ಆವಿಷ್ಕಾರ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು. 6 ರಿಂದ 16 ವರ್ಷದ ಒಳಗಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮ ಸಂಯೋಜಕರಾದ ಕೋಮಲ ಪಿ ಮೊ-9036801065 ಅನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಹಾಗೂ ಜಿಲ್ಲಾ ಬಾಲ ಭವನ ಸಮಿತಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))