ಸಾರಾಂಶ
ರಾಮನಗರ: ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕಾಮ್ರೆಡ್ ಜಿ.ಸಿ.ಬಯ್ಯಾರೆಡ್ಡಿ ನಿಧನಕ್ಕೆ ಸಂತಾಪ ಸೂಚಕವಾಗಿ ರಾಜ್ಯ ರೈತ ಸಂಘದ ಪಧಾದಿಕಾರಿಗಳು ನಗರದ ಐಜೂರು ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ರಾಮನಗರ: ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕಾಮ್ರೆಡ್ ಜಿ.ಸಿ.ಬಯ್ಯಾರೆಡ್ಡಿ ನಿಧನಕ್ಕೆ ಸಂತಾಪ ಸೂಚಕವಾಗಿ ರಾಜ್ಯ ರೈತ ಸಂಘದ ಪಧಾದಿಕಾರಿಗಳು ನಗರದ ಐಜೂರು ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಅಗಲಿದ ಬಯ್ಯಾರೆಡ್ಡಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ರೈತರು ಬಯ್ಯಾರೆಡ್ಡಿ ಚಿರಾಯುವಾಗಲಿ ಎಂದು ಘೋಷಣೆ ಕೂಗಿ ಗೌರವ ಅರ್ಪಿಸಿದರು. ಈ ವೇಳೆ ರೈತಸಂಘದ ವಿಭಾಗೀಯ ಅಧ್ಯಕ್ಷ ಮಲ್ಲಯ್ಯ ಮಾತನಾಡಿ, ಕಾಮ್ರೆಡ್ ಬಯ್ಯಾರೆಡ್ಡಿಯವರ ಹೋರಾಟವೇ ಒಂದು ಸ್ಪೂರ್ತಿಯುತ ಅಧ್ಯಾಯವಾಗಿದ್ದು, ಕ್ರಾಂತಿಕಾರಕ ಹೋರಾಟದ ಕೊಂಡಿ ಕಳಚಿಕೊಂಡಿರುವುದು ವಿಷಾದನೀಯ ಎಂದರು.ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಬಯ್ಯಾರೆಡ್ಡಿಯವರ ಹೋರಾಟ ಕ್ರಾಂತಿಕಾರಕವಾಗಿದ್ದರೂ ರೈತರ ಬದುಕಿನ ಶಾಂತಿಯ ಧ್ಯೋತಕವಾಗಿತ್ತು. ದಣಿವರಿಯದ ಹೋರಾಟಕ್ಕೆ ಅವರ ದೇಹ ಶಾಶ್ವತ ವಿಶ್ರಾಂತಿ ಪಡೆದಿದ್ದರೂ ಮೌಲ್ಯಾಧಾರಿತ, ತತ್ವಾಧಾರಿತ ನಮ್ಮ ರೈತರ ಹೋರಾಟದಲ್ಲಿ ಅವರೆಂದಿಗೂ ಚಿರಸ್ಥಾಯಿ ಎಂದು ಹೇಳಿದರು. ರಾಜ್ಯ ರೈತಸಂಘದ ಸಂಚಾಲಕರಾದ ಚೀಲೂರು ಮುನಿರಾಜು, ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಚನ್ನಪಟ್ಟಣ ತಾಲೂಕಿನ ಅಧ್ಯಕ್ಷ ನಾಗರಾಜು, ರವಿ, ಕೃಷ್ಣಯ್ಯ, ಗುರುಲಿಂಗ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಹೊಸದುರ್ಗ ಹಾಜರಿದ್ದರು.
;Resize=(128,128))
;Resize=(128,128))