ಸಾರಾಂಶ
ಟಿವಿ, ಮೊಬೈಲ್ ಗೀಳಿನಿಂದ ಇಂದು ರಂಗಭೂಮಿ, ರಂಗಕಲೆಗಳು ನಶಿಸಿ ಹೋಗುತ್ತಲಿದ್ದು, ರಂಗಕಲೆಗಳನ್ನು ಉಳಿಸುವುದು ಅವಶ್ಯವಿದೆ ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ಬಸವರಾಜ ಹಿರೇಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಟಿವಿ, ಮೊಬೈಲ್ ಗೀಳಿನಿಂದ ಇಂದು ರಂಗಭೂಮಿ, ರಂಗಕಲೆಗಳು ನಶಿಸಿ ಹೋಗುತ್ತಲಿದ್ದು, ರಂಗಕಲೆಗಳನ್ನು ಉಳಿಸುವುದು ಅವಶ್ಯವಿದೆ ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ಬಸವರಾಜ ಹಿರೇಮಠ ಹೇಳಿದರು.ತಾಲೂಕಿನ ಕಲ್ಲೋಳಿಯಲ್ಲಿ ನವರಾತ್ರಿ ಉತ್ಸವ ಅಂಗವಾಗಿ ಬಸವ ಮಂಟಪದಲ್ಲಿ ಜೈ ಹನುಮಾನ ಯುವಜನ ಸೇವಾ ಸಂಘದಿಂದ ಏರ್ಪಡಿಸಿದ್ದ ಅತಿ ಸಿಂಗಾರಿ ಸೊಸಿ ಬಂಗಾರಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ರಂಗಕಲೆ ಜೀವಂತ ಕಲೆಯಾಗಿದ್ದು, ಪ್ರೇಕ್ಷಕರ ಹೃದಯ ಮುಟ್ಟುವ ಕಲೆಯಾಗಿದೆ. ನಮ್ಮ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯಾಗಿರುವ ರಂಗಕಲೆ, ಜಾನಪದ ಕಲೆಗಳ ಪ್ರದರ್ಶನಕ್ಕೆ ಅವಕಾಶ ನೀಡುವ ಮೂಲಕ ಅಂಥ ಕಲೆ ಬೆಳೆಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ರಾಜು ದಬಾಡಿ, ಅಶೋಕ ಅಡಿನವರ, ಯಲ್ಲಪ್ಪ ಬೇವಿನಮರದ, ಸಿದ್ರಾಯ ಮರಸಿದ್ದಪ್ಪಗೋಳ, ರಾಮಸಿದ್ದ ನಾವಿ, ನಾಗಪ್ಪ ಕುಮ್ಮನಗೋಳ ಪಾಲ್ಗೊಂಡಿದ್ದರು. ಸಂಘಟಕರಾದ ಪರಶುರಾಮ ಇಮಡೇರ, ಮಹಾಂತೇಶ ಕಡಲಗಿ, ರಾಜಪ್ಪ ಮಾವರಕರ, ಭೀಮಶಿ ಗೋಕಾವಿ, ಸಿದ್ದಪ್ಪ ಪೂಜೇರಿ, ಭೀಮಶಿ ಕಡಲಗಿ, ಹಣಮಂತ ತೋಟಗಿ, ಅನೀಲ ಖಾನಗೌಡ್ರ, ಸುರೇಶ ಕಲಾಲ, ನಾಗರಾಜ ಕಲಾಲ ಇದ್ದರು. ಕಲ್ಲೋಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನಾಟಕ ನೋಡಲು ಸಾವಿರಾರು ಜನರು ಸೇರಿದ್ದರು.