ನುಗ್ಗೇಹಳ್ಳಿಯ ಹುಲ್ಲೇನಹಳ್ಳಿ ದೊಡ್ಡಮ್ಮ ದೇಗುಲ ಅಭಿವೃದ್ಧಿಗೆ 2 ಲಕ್ಷ ರುಪಾಯಿ ಅನುದಾನ: ಕೇಶವ ದೇವಾಂಗ

| Published : Oct 26 2024, 01:08 AM IST

ನುಗ್ಗೇಹಳ್ಳಿಯ ಹುಲ್ಲೇನಹಳ್ಳಿ ದೊಡ್ಡಮ್ಮ ದೇಗುಲ ಅಭಿವೃದ್ಧಿಗೆ 2 ಲಕ್ಷ ರುಪಾಯಿ ಅನುದಾನ: ಕೇಶವ ದೇವಾಂಗ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಮ್ಮ ದೇವಿ ದೇವಾಲಯ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಡಾ.ವೀರೇಂದ್ರ ಹೆಗ್ಗಡೆಯವರು 2 ಲಕ್ಷ ರು. ಅನುದಾನವನ್ನು ನೀಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ತಿಳಿಸಿದರು. ನುಗ್ಗೇಹಳ್ಳಿಯಲ್ಲಿ ಸಹಾಯಧನದ ಡಿಡಿಯನ್ನು ದೇವಾಲಯ ಸಮಿತಿ ಸದಸ್ಯರಿಗೆ ಹಸ್ತಾಂತರಿಸಿ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಶವ ದೇವಾಂಗ ಮಾಹಿತಿ । ದೇಗುಲ ಸಮಿತಿಗೆ ಹಸ್ತಾಂತರ

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಹೋಬಳಿಯ ಕೆಂಬಾಳು ಹುಲ್ಲೇನಹಳ್ಳಿ ಗ್ರಾಮದ ಶ್ರೀ ದೊಡ್ಡಮ್ಮ ದೇವಿ ದೇವಾಲಯ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಡಾ.ವೀರೇಂದ್ರ ಹೆಗ್ಗಡೆಯವರು 2 ಲಕ್ಷ ರು. ಅನುದಾನವನ್ನು ನೀಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ತಿಳಿಸಿದರು.

ಹೋಬಳಿಯ ಕೆಂಬಾಳು ಹುಲ್ಲೇನಹಳ್ಳಿ ಗ್ರಾಮದ ಶ್ರೀ ದೊಡ್ಡಮ್ಮ ದೇವಿ ದೇವಾಲಯ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರವಣಬೆಳಗೊಳ ಯೋಜನಾ ಕಚೇರಿ ವತಿಯಿಂದ ನೀಡಲಾಗಿದ್ದ 2 ಲಕ್ಷ ರು. ಸಹಾಯಧನದ ಡಿಡಿಯನ್ನು ದೇವಾಲಯ ಸಮಿತಿ ಸದಸ್ಯರಿಗೆ ಹಸ್ತಾಂತರಿಸಿ ಮಾತನಾಡಿದರು.

ಡಾ.ವೀರೇಂದ್ರ ಹೆಗ್ಗಡೆಯವರು ಸಮಾಜದಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ಸಮಾಜಮುಖಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುತ್ತ ಬಂದಿದ್ದು ಹೈನೋದ್ಯಮದ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಡೈರಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಆಟದ ಮೈದಾನ ನಿರ್ಮಾಣ ಹಾಗೂ ದೇವಾಲಯಗಳ ಜೀರ್ಣೋದ್ಧಾರ ಸೇರಿದಂತೆ ಅನೇಕ ಜನಸ್ನೇಹಿ ಕೆಲಸಗಳಿಗೆ ಹೆಚ್ಚಿನ ಸಹಾಯ ಸಹಕಾರ ನೀಡುತ್ತ ಬಂದಿದ್ದಾರೆ. ಗ್ರಾಮದ ಶ್ರೀ ದೊಡ್ಡಮ್ಮ ದೇವಿ ದೇವಾಲಯ ಜೀರ್ಣೋದ್ಧಾರಕ್ಕೆ ಅನುದಾನ ನೀಡುವಂತೆ ಪೂಜ್ಯರಲ್ಲಿ ವಿನಂತಿಸಿದ ಹಿನ್ನೆಲೆಯಲ್ಲಿ ಸುಮಾರು 2 ಲಕ್ಷ ರು. ಹಣವನ್ನು ನೀಡಿದ್ದಾರೆ ಎಂದು ಹೇಳಿದರು.

ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ, ರೈತರಿಗೆ ಕೃಷಿ ಯಂತ್ರಧಾರೆ ಮೂಲಕ ರಿಯಾಯಿತಿ ದರದಲ್ಲಿ ಯಂತ್ರೋಪಕರಣಗಳನ್ನು ಬಾಡಿಗೆ ನೀಡಲಾಗುತ್ತಿದೆ. ಇದರ ಜತೆಗೆ ಕೆರೆಗಳ ಪುನಶ್ಚೇತನಕ್ಕಾಗಿ ಹೂಳೆತ್ತುವ ಕೆಲಸವನ್ನು ಕೂಡ ಮಾಡಲಾಗುತ್ತಿದೆ ಎಂದರು.

ದೇವಾಲಯ ಸಮಿತಿ ಉಪಾಧ್ಯಕ್ಷ ಯತಿರಾಜ್ ಮಾತನಾಡಿ, ಗ್ರಾಮದ ದೊಡ್ಡಮ್ಮ ದೇವಿ ದೇವಾಲಯ ಅಭಿವೃದ್ಧಿಗೆ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 2 ಲಕ್ಷ ರು. ಅನುದಾನವನ್ನು ನೀಡಿದ್ದು ಇದರಿಂದ ದೇವಾಲಯದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಗ್ರಾಮದ ಬಸವೇಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೆಚ್ಚಿನ ಸಹಾಯಧನ ನೀಡುವಂತೆ ಮನವಿ ಮಾಡಿದರು.

ಶ್ರವಣಬೆಳಗೊಳ ಯೋಜನಾ ಕಚೇರಿಯ ಯೋಗಾನಾಧಿಕಾರಿ ಸದಾಶಿವ ಕುಲಾಲ್, ದೇವಾಲಯ ಸಮಿತಿ ಅಧ್ಯಕ್ಷ ಎಚ್.ಡಿ.ರಮೇಶ್, ಕಾರ್ಯದರ್ಶಿ ಮಂಜೇಗೌಡ, ಖಜಾಂಚಿ ನಂಜೇಶ್ ಗೌಡ, ಶಿಕ್ಷಕ ಎಚ್.ಡಿ.ದಿನೇಶ್, ಬಾಗೂರು ಹೋಬಳಿ ಮೇಲ್ವಿಚಾರಕ ಹನುಮಯ್ಯ, ಸೇವಾ ಪ್ರತಿನಿಧಿ ರಾಜಕುಮಾರ್, ದೇವಾಲಯ ಸಮಿತಿ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.