ಸಾರಾಂಶ
ದಾವಣಗೆರೆ ಮೂಲದ ಯುವ ನಾಯಕ ಪೃಥ್ವಿ ಶಾಮನೂರ ನಾಯಕ ನಟನಾಗಿ ಅಭಿನಯಿಸಿದ್ದು, ನಾಯಕಿಯಾಗಿ ರಿತಿಕಾ ಶ್ರೀನಿವಾಸ್ ಮಿಂಚಲಿದ್ದಾರೆ. ಚಿತ್ರದ ನಿರ್ಮಾಣವನ್ನು ಯೋಗರಾಜ್ ಭಟ್, ರವಿ ಶಾಮನೂರ ಹಾಗೂ ರಚನೆ ಮತ್ತು ನಿರ್ದೇಶನವನ್ನು ಅಮೋಲ್ ಪಾಟೀಲ್ ಮಾಡಿದ್ದಾರೆ.
ಗದಗ: ಉತ್ತರ ಕರ್ನಾಟಕ ಕಥೆ ಒಳಗೊಂಡಿರುವ ಉಡಾಳ ಚಲನಚಿತ್ರ ನ. 14ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದ್ದು, ನಗರದ ಮಹಾಲಕ್ಷ್ಮೀ ಚಿತ್ರಮಂದಿರದಲ್ಲಿ ಪ್ರದರ್ಶನಗೋಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಚಿತ್ರಮಂದಿರದಲ್ಲಿ ವೀಕ್ಷಿಸುವ ಮೂಲಕ ಆಶೀರ್ವದಿಸಬೇಕೆಂದು ಕಾಮಿಡಿ ಕಿಲಾಡಿ ವಿನ್ನರ್ ಹಾಗೂ ರಂಗಭೂಮಿ ಹಾಸ್ಯ ಕಲಾವಿದ ಹರೀಶ ಹಿರಿಯೂರ ಮನವಿ ಮಾಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆ ಮೂಲದ ಯುವ ನಾಯಕ ಪೃಥ್ವಿ ಶಾಮನೂರ ನಾಯಕ ನಟನಾಗಿ ಅಭಿನಯಿಸಿದ್ದು, ನಾಯಕಿಯಾಗಿ ರಿತಿಕಾ ಶ್ರೀನಿವಾಸ್ ಮಿಂಚಲಿದ್ದಾರೆ. ಚಿತ್ರದ ನಿರ್ಮಾಣವನ್ನು ಯೋಗರಾಜ್ ಭಟ್, ರವಿ ಶಾಮನೂರ ಹಾಗೂ ರಚನೆ ಮತ್ತು ನಿರ್ದೇಶನವನ್ನು ಅಮೋಲ್ ಪಾಟೀಲ್ ಮಾಡಿದ್ದಾರೆ ಎಂದರು.ಪೃಥ್ವಿ ಶಾಮನೂರ ಮಾತನಾಡಿ, ಕಥೆ ಸಂಪೂರ್ಣವಾಗಿ ಉತ್ತರ ಕರ್ನಾಟಕಕ್ಕೆ ಸಂಬಧಪಟ್ಟದ್ದಾಗಿದೆ. ಖ್ಯಾತ ರಂಗಭೂಮಿ ಕಲಾವಿದರಾದ ದಯಾನಂದ ಬಿಳಗಿ, ಹರೀಶ್ ಹಿರಿಯೂರ ಹಾಗೂ ಖ್ಯಾತ ಯೂಟ್ಯೂಬರ್ ಗಳು ಚಿತ್ರದಲ್ಲಿ ನಟಿಸಿದ್ದಾರೆ. ಜಾನಪದ ಗಾಯಕರಾದ ಬಾಳು ಬೆಳಗುಂದಿ, ಮಾಳು ನಿಪನಾಳ, ಕರಿಬಸಪ್ಪ ಸೇರಿದಂತೆ ಹಲವರು ಹಾಡಿದ್ದಾರೆ. ಫುಲ್ ಕಾಮಿಡಿ ಚಿತ್ರ ಇದಾಗಿದ್ದು, ಚಿತ್ರಿಕರಣ ವಿಜಯಪುರದಲ್ಲಿ ನಡೆದಿದೆ. ಮಹಿಳೆಯರಿಗೆ ಯಾವ ರೀತಿ ಗೌರವ ನೀಡಬೇಕು ಎನ್ನುವ ಸಾರಾಂಶವನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು.ಈ ವೇಳೆ ಸಿದ್ದು ಪೂಜಾರ, ಪ್ರಿಯದರ್ಶಿನಿ ಹಿರಿಯೂರ, ಸಂಗಮೇಶ ದೊಡ್ಡಣ್ಣನವರ, ರವಿಕಿರಣ್ ಹೊಸಮನಿ ಉಪಸ್ಥಿತರಿದ್ದರು.2.10 ಲಕ್ಷ ಹೆಕ್ಟೇರನಲ್ಲಿ ಹಿಂಗಾರು ಬಿತ್ತನೆ
ಗದಗ: ಜಿಲ್ಲೆಯಲ್ಲಿ 2025- 26ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ 119.6 ಮಿಮೀ ವಾಡಿಕೆ ಮಳೆಗೆ 73.3 ಮಿಮೀ ಮಳೆ ಬಿದ್ದಿದೆ.(ಅಕ್ಟೋಬರ್‌ದಿಂದ ನವೆಂಬರ್ 10). ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 257925 ಹೆ. ಪ್ರದೇಶದ ಬಿತ್ತನೆ ಗುರಿಯಿದೆ.ಗದಗ ತಾಲೂಕಿನಲ್ಲಿ 52310 ಹೆ., ಗಜೇಂದ್ರಗಡ 27745 ಹೆ., ಲಕ್ಷ್ಮೇಶ್ವರ 12075 ಹೆ., ಮುಂಡರಗಿ 34750 ಹೆ., ನರಗುಂದ 25520 ಹೆ., ರೋಣ 49021 ಹೆ. ಹಾಗೂ ಶಿರಹಟ್ಟಿ ತಾಲೂಕಿನಲ್ಲಿ 8723 ಹೆಕ್ಟೇರ್ ಪ್ರದೇಶದಂತೆ ಒಟ್ಟು 210144 ಹೆ.(ಶೇ. 81.47) ರಷ್ಟು ಬಿತ್ತನೆಯಾಗಿದೆ.ನ. 11ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಸಗೊಬ್ಬರ ಸರಬರಾಜು ಹಾಗೂ ದಾಸ್ತಾನು ಕುರಿತಂತೆ ಸಭೆಯನ್ನು ಜರುಗಿಸಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 4958 ಮೆ.ಟನ್ ಯೂರಿಯಾ, 4483 ಮೆ. ಟನ್ ಡಿಎಪಿ, 915 ಮೆ.ಟನ್ ಎಂಒಪಿ, 304 ಮೆ.ಟನ್ ಎಸ್‌ಎಸ್‌ಪಿ ಹಾಗೂ 5558 ಮೆ.ಟನ್ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರ ಸೇರಿದಂತೆ ಒಟ್ಟು 16221 ಮೆ.ಟನ್ ರಸಗೊಬ್ಬರಗಳನ್ನು ಜಿಲ್ಲೆಯ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಇದೆ. 2025- 26ನೇ ಸಾಲಿನ ಹಿಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ರಸಗೊಬ್ಬರಗಳಿಗೆ ಯಾವುದೇ ಕೊರತೆ ಇರುವುದಿಲ್ಲ ಪ್ರಕಟಣೆಯಲ್ಲಿ ತಿಳಿಸಿದೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))