ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೇವಾ ರಕ್ಷಣೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ದಯಾನಂದ ಬೆನ್ನೂರು ಅವರ ನೇತೃತ್ವದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಉಡುಪಿ: ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೇವಾ ರಕ್ಷಣೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ದಯಾನಂದ ಬೆನ್ನೂರು ಅವರ ನೇತೃತ್ವದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪಂ.ಅ.ಅಧಿಕಾರಿಗಳ ಮೇಲಿನ ಅಮಾನವೀಯ ಕಾರ್ಯ ಒತ್ತಡ ಹಾಗೂ ಹಾಗೂ ಮಾನಸಿಕ ಕಿರುಕಳವನ್ನು ತಗ್ಗಿಸಬೇಕು, ಬಾಕಿ ವೇತನ ಬಿಡುಗಡೆ ಮಾಡಬೇಕು, ಆಯುಕ್ತಾಲಯ, ಜಿಪಂ ಮತ್ತು ತಾಪಂ ಕಚೇರಿಗಳಿಗೆ ಕಡ್ಡಾಯ ವರ್ಗಾವಣೆ ಮಾಡಬಾರದು, ಹಿರಿಯ ಅಧಿಕಾರಿಗಳ ಅಸಹಕಾರ, ಕ್ಷುಲ್ಲಕ ಕಾರಣಕ್ಕೆ ಅಮಾನತು ಮಾಡುವುದನ್ನು ನಿಲ್ಲಿಸಬೇಕು, ಮೀನಾಕ್ಷಿ ಸುಂದರಂ ಸಮಿತಿ ವರದಿ ಜಾರಿ ಮಾಡಬೇಕು, ಆನ್‌ಲೈನ್‌ನಲ್ಲಿ ಬರುವ ಆಧಾರ ರಹಿತ ದೂರುಗಳಿಗೆ ಇಲಾಖಾ ವಿಚಾರಣೆ ಮಾಡುವುದನ್ನು ನಿಲ್ಲಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.ಸಂಘದ ಜಿಲ್ಲಾ ಉಪಾದ್ಯಕ್ಷೆ ಫರ್ಜಾನಾ, ರಾಜ್ಯ ಸಮಿತಿ ಸದಸ್ಯ ಹರೀಶ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷರಾದ ಅನಿಲ್ ಶೆಟ್ಟಿ, ರಾಘವೇಂದ್ರ ಪ್ರಭು, ಸಂಘಟನಾ ಕಾರ್ಯದರ್ಶಿ ಜಯರಾಮ ಶೆಟ್ಟಿ, ಉಡುಪಿ ತಾಲೂಕು ಸಂಘದ ಅಧ್ಯಕ್ಷ ಸುರೇಶ್, ಕಾರ್ಕಳ ತಾಲೂಕು ಅಧ್ಯಕ್ಷ ಪ್ರತಾಪ ಶೆಟ್ಟಿ, ಬ್ರಹ್ಮಾವರ ತಾಲೂಕಿನ ಉಪಾಧ್ಯಕ್ಷ ಪ್ರಭಾಶಂಕರ್ ಪುರಾಣಿಕ್, ಪಂ. ಅ. ಅಧಿಕಾರಿಗಳಾದ ಸಂದೇಶ್ ಶೆಟ್ಟಿ, ಆಶಾಲತಾ, ಮೆಲ್ವಿನ್ ಭಾಂಜಿ, ಸುಧಾಕರ ಶೆಟ್ಟಿ, ರವಿರಾಜ್, ಅನುಪಮಾ ಹಾಗೂ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪಿಡಿಒ ಆತ್ಮಹತ್ಯೆ - ತನಿಖೆಗೆ ಆಗ್ರಹ
ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾಗಿದ್ದ ಮುಕ್ತಂ ಹುಸೇನ ಕರಡಿಗುಡ್ಡ (46) ಅವರು ಅತಿಯಾದ ಕೆಲಸದ ಒತ್ತಡ, ಪ್ರಕರಣವೊಂದರ ಲೋಕಯುಕ್ತ ತನಿಖೆ ಹಾಗೂ ಸತತ ವೇತನವಿಲ್ಲದೆ ಬೇಸತ್ತು ಕೆಲದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದೂ ಮನವಿಯಲ್ಲಿ ಆಗ್ರಹಿಸಲಾಗಿದೆ.