ಸಾರಾಂಶ
ರಾಮನಗರ: ಸರ್ವರಿಗೂ ಅನ್ವಯವಾಗುವಂತಹ ಭಾರತ ಸಂವಿಧಾನ ಪೀಠಿಕೆಯ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಉದ್ದೇಶದಿಂದ ನಗರಸಭೆ ಕಚೇರಿಯೊಳಗೆ ತ್ರಿಡಿ ರೂಪದಲ್ಲಿರುವ ಸಂವಿಧಾನ ಪೀಠಿಕೆ ಅನಾವರಣ ಮಾಡಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನ.26ರಂದು ಭಾರತ ಸಂವಿಧಾನ ಪೀಠಿಕೆ ಅನಾವರಣ ಮಾಡುವ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ.26 ರಂದು ಸಂವಿಧಾನವನ್ನು ಅಂಗೀಕರಿಸಿ ಶಾಸನವನ್ನಾಗಿಸಿಕೊಂಡ ಮಹತ್ವದ ದಿನ. ನಗರಸಭೆ ಕಚೇರಿಯೊಳಗೆ ತ್ರಿಡಿ ರೂಪದಲ್ಲಿ ಸಂವಿಧಾನ ಪೀಠಿಕೆ ಸ್ಥಾಪನೆ ಮಾಡಲು ನಗರಸಭೆ ಸದಸ್ಯರೆಲ್ಲರೂ ಸೇರಿ ಒಮ್ಮತದಿಂದ ತೀರ್ಮಾನಿಸಲಾಗಿದೆ ಎಂದರು.ದೇಶದಾದ್ಯಂತ ಸಂವಿಧಾನದ ಪ್ರಸ್ತುತೆಯ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಇಂತಹ ವಾತಾವರಣದಲ್ಲಿ ಸಂವಿಧಾನದ ಪಾಲನೆ ಕಡ್ಡಾಯ ಎಂಬುದನ್ನು ಸಂವಿಧಾನ ವಿರೋಧಿ ಶಕ್ತಿಗಳು ಅರಿತಿಲ್ಲ. ಸಂವಿಧಾನ ಬದಲಾವಣೆಯ ಮಾತುಗಳನ್ನಾಡುತ್ತಿರುವ ದುಷ್ಟ ಶಕ್ತಿಗಳ ನಡುವೆ ನಾವು ಜವಾಬ್ದಾರಿ ವಹಿಸಿ ವಿದ್ಯಾರ್ಥಿಗಳು ಹಾಗೂ ಸರ್ವರಲ್ಲಿಯೂ ಸಂವಿಧಾನದ ಆಶಯ ಮತ್ತು ಮಹತ್ವದ ಬಗ್ಗೆ ತಿಳಿಸುವುದು ಸಂವಿಧಾನ ಪೀಠಿಕೆ ಅನಾವರಣದ ಉದ್ದೇಶವಾಗಿದೆ. ಹಾಗಾಗಿ ಸಂಘ ಸಂಸ್ಥೆಗಳು, ಸಲಹೆ, ಸೂಚನೆ, ಸಹಕಾರ ನೀಡುವಂತೆ ಕೆ.ಶೇಷಾದ್ರಿ ಮನವಿ ಮಾಡಿದರು.
ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಕುಮಾರಸ್ವಾಮಿ ಮಾತನಾಡಿ, ಭಾರತಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡಿದ ದಿನವನ್ನು ಮಾದರಿಯಾಗಿ ಆಚರಿಸಲು ನಗರಸಭೆ ತೆಗೆದು ಕೊಂಡಿರುವ ತೀರ್ಮಾನ ರಾಜ್ಯದಲ್ಲಿಯೇ ಮಾದರಿಯಾಗಲಿದೆ. ಈ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಹಕಾರ ನೀಡುತ್ತೇವೆ. ಕಾರ್ಯಕ್ರಮದ ಯಶಸ್ವಿಯಾಗಲು ಎಲ್ಲರನ್ನು ಜೋಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.ರೈತ ಮಹಿಳೆ ಅನುಸೂಯಮ್ಮ, ಪುಟ್ಟಸ್ವಾಮಿ, ಗೋವಿಂದಯ್ಯ, ರೈಡ್ ನಾಗರಾಜು, ಹರೀಶ್, ನೀಲಿ ರಮೇಶ್ ಮತ್ತಿತರರು ಮಾತನಾಡಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಕಣ್ಣು ತೆರೆಸುವ ಕೆಲಸವನ್ನು ಮಾಡಿರುವ ನಗರಸಭೆ ಚಿಂತನೆಗೆ ಅಭಿನಂದನೆ ಸಲ್ಲಿದರಲ್ಲದೆ ಹಲವು ಮೊದಲುಗಳಿಗೆ ರಾಮನಗರ ನಗರಸಭೆ ಹೆಸರಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಪೀಠಿಕೆ ಯನ್ನು ಅನಾವರಣ ಮಾಡುತ್ತಿರುವುದು ಶ್ಲಾಘನೀಯ. ಸಂವಿಧಾನ ಪೀಠಿಕೆಯ ಅನಾವರಣದ ಜೊತೆಗೆ ಕೈಪಿಡಿ ವಿತರಿಸಿ, ಇಲಾಖಾ ಮುಖ್ಯಸ್ಥರು ಭಾಗವಹಿಸುವಂತಾಗಲಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ಡಾ.ಜಯಣ್ಣ, ಉಪಾಧ್ಯಕ್ಷೆ ಆಯಿಷಾಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಅಜ್ಮತ್ , ಮಂಜುನಾಥ್, ಗಿರಿಜಮ್ಮ, ನಾಗಮ್ಮ, ಅಣ್ಣು, ರಮೇಶ್, ಗೋವಿಂದರಾಜು, ಜಯಲಕ್ಷ್ಮಮ್ಮ, ಸೋಮಶೇಖರ್, ಆರೀಫ್ , ಹಿಂದುಳಿದ ವರ್ಗದ ಜಿಲ್ಲಾ ಘಟಕದ ಅಧ್ಯಕ್ಷ ರೈಡ್ ನಾಗರಾಜು, ರೈತ ಮುಖಂಡರಾದ ಸಿ.ಪುಟ್ಟಸ್ವಾಮಿ, ಅನುಸೂಯಮ್ಮ, ಎಸ್ಸಿ/ಎಸ್ಟಿ ಸರ್ಕಾರಿ ನೌಕರರ ಸಂಘದ ಜಿಲ್ಲಾದ್ಯಕ್ಷ ಜೈಪ್ರಕಾಶ್ ಸೇರಿದಂತೆ ಪ್ರಗತಿಪರ ಚಿಂತಕರು, ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.21ಕೆಆರ್ ಎಂಎನ್ 4.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ಭಾರತ ಸಂವಿಧಾನ ಪೀಠಿಕೆ ಅನಾವರಣ ಮಾಡುವ ಸಂಬಂಧ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
;Resize=(128,128))
;Resize=(128,128))
;Resize=(128,128))
;Resize=(128,128))