ಸಾರಾಂಶ
2000 ವರ್ಷಗಳ ಇತಿಹಾಸವನ್ನು ಹೊಂದಿರುವಂತಹ ಕನ್ನಡ ಸಾಹಿತ್ಯಕ್ಕೆ ಸರಿಸಾಟಿ ಮತ್ತೊಂದಿಲ್ಲ ಎಂದು ಸಿಐಟಿ ಕಾಲೇಜಿನ ನಿರ್ದೇಶಕ ಡಾ. ಸುರೇಶ್ ಡಿ ಎಸ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
2000 ವರ್ಷಗಳ ಇತಿಹಾಸವನ್ನು ಹೊಂದಿರುವಂತಹ ಕನ್ನಡ ಸಾಹಿತ್ಯಕ್ಕೆ ಸರಿಸಾಟಿ ಮತ್ತೊಂದಿಲ್ಲ ಎಂದು ಸಿಐಟಿ ಕಾಲೇಜಿನ ನಿರ್ದೇಶಕ ಡಾ. ಸುರೇಶ್ ಡಿ ಎಸ್ ತಿಳಿಸಿದರು.ಗುಬ್ಬಿಯ ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕಾಲೇಜಿನ 25 ನೇ ವರ್ಷದ ರಜತ ಮಹೋತ್ಸವದ ಲೋಗೋ ಅನಾವರಣಗೊಳಿಸಿ ಮಾತನಾಡಿದರು.
ಕನ್ನಡ ನಾಡನ್ನು ಆಳಿದಂತಹ ಪ್ರತಿಯೊಬ್ಬ ರಾಜ ಮನೆತನದವರು ಸಹ ಕನ್ನಡಕ್ಕೆ ತನ್ನದೇ ಆದಂತಹ ಇತಿಹಾಸವನ್ನು ಬಿಟ್ಟು ಹೋಗಿದ್ದಾರೆ. ಕರ್ನಾಟಕ ಸಹ ಇಡೀ ಪ್ರಪಂಚದಲ್ಲಿ ತನ್ನದೇ ಆದಂತಹ ವಿಶೇಷತೆಗಳನ್ನು ಒಳಗೊಂಡಂತೆ ನಮ್ಮ ಗುಬ್ಬಿಯು ಸಹ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಕಲೆ, ಶಿಲ್ಪ ಕಲೆ,ಸಾಹಿತ್ಯ ರಂಗ ಭೂಮಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಇತಿಹಾಸವನ್ನು ಸೃಷ್ಟಿ ಮಾಡಿಕೊಂಡಿದೆ.ಗುಬ್ಬಿಯ ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯವು ಸಹ 25 ವರ್ಷಗಳ ಹಿಂದೆ ಆರಂಭವಾಗಿ ಈ ವರ್ಷ ರಜತ ಮಹೋತ್ಸವದಲ್ಲಿ ಇದ್ದೇವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ನೀಡುವಲ್ಲಿ ಸಿಐಟಿ ಕಾಲೇಜು ಅಗ್ರಮಾನ್ಯವಾಗಿದೆ. ಕಾರ್ಯಕ್ರಮ ನ. 29 ರಂದು ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಪ್ರಸನ್ನ ದೊಡ್ಡಗುಣಿ ಮಾತನಾಡಿ ಗುಬ್ಬಿಯ ಹೆಸರು ಇಡೀ ರಾಷ್ಟ್ರಕ್ಕೆ ಪರಿಚಿತ ಮಾಡಿದ ಗುಬ್ಬಿ ವೀರಣ್ಣ ನವರು ಸಾಲು ಮರದ ತಿಮ್ಮಕ್ಕ ಅಜ್ಜಿಯಂತಹ ಅಭೂತಪೂರ್ವ ಸಾಧಕರನ್ನು ಕೊಟ್ಟ ತಾಲೂಕು ನಮ್ಮೂದಾಗಿದೆ. ಈ ಸಂದರ್ಭದಲ್ಲಿ ಡಾ. ಶಾಂತಲಾ ಸಿಪಿ, ಡಾ. ಕುಲಕರ್ಣಿ, ಅನಿಲ್ ಕುಮಾರ್ ಸೇರಿದಂತೆ ಇನ್ನಿತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))