ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂಸಂರಕ್ಷಣಾ ಕಾಯ್ದೆ 2020ಕ್ಕೆ ತಿದ್ದುಪಡಿ ಮಾಡುವುದಕ್ಕೆ ಈಗಾಗಲೇ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ರಾಜ್ಯದಲ್ಲಿ ಗೋಹತ್ಯೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ವಿಶ್ವ ಹಿಂದೂ ಪರಿಷತ್ ಆಕ್ಷೇಪ ವ್ಯಕ್ತಪಡಿಸಿದೆ.
ನಾಳೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ: ಸುನಿಲ್ ಕೆ.ಆರ್.
ಉಡುಪಿ: ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂಸಂರಕ್ಷಣಾ ಕಾಯ್ದೆ 2020ಕ್ಕೆ ತಿದ್ದುಪಡಿ ಮಾಡುವುದಕ್ಕೆ ಈಗಾಗಲೇ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ರಾಜ್ಯದಲ್ಲಿ ಗೋಹತ್ಯೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಆದ್ದರಿಂದ ಈ ತಿದ್ದುಪಡಿಯನ್ನು ಕೈಬಿಡಬೇಕು ಎಂದು ವಿಶ್ವ ಹಿಂದೂ ಪರಿಷತ್‌ನಿಂದ ತೀವ್ರ ವಿರೋಧ ವ್ಯಕ್ತಪಡಿಸಿದೆ.ಈ ಬಗ್ಗೆ ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ್ಯ ಗೋರಕ್ಷಾ ಪ್ರಮುಖ್ ಸುನಿಲ್ ಕೆ.ಆರ್. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಈ ತಿದ್ದುಪಡಿಯ ಮೂಲಕ ಕಾಂಗ್ರೆಸ್ ಸರ್ಕಾರ ಗೋಕಳ್ಳಕರಿಗೆ ಬೆಂಬಲ ನೀಡುತ್ತಿದೆ, ಸರ್ಕಾರ ಗೋಕಳ್ಳರ ಜೊತೆ ನಾವಿದ್ದೇವೆ ಎಂಬ ಸಂದೇಶವನ್ನು ನೀಡುವುದಕ್ಕೆ ಹೊರಟಿದಂತಿದೆ. ಇದರಿಂದ ರಾಜ್ಯದಲ್ಲಿ ಗೋ ಕಳ‍್ಳತನ, ಗೋ ಸಾಗಾಟ, ಗೋಹತ್ಯೆ ಹೆಚ್ಚಲಿದೆ, ಇದುಪ ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆಯೂ ಇದೆ ಎಂದು ಸುನಿಲ್ ಕೆ. ಆರ್. ಹೇಳಿದರು.ವಿಹಿಂಪ ಜಿಲ್ಲಾ ಕಾರ್ಯದರ್ಶಿ ಸುನಿಲ್ ಮೆಂಡನ್ ಅವರು, ಸರ್ಕಾರ ಈ ತಿದ್ದುಪಡಿ ಕೈ ಬಿಡುವಂತೆ ಆಗ್ರಹಿಸಿ ಸೋಮವಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯಲಿದೆ. ಉಡುಪಿಯಲ್ಲಿಯೂ ಬೆಳಗ್ಗೆ 10 ಗಂಟೆಗೆ ನಗರದ ಜಟ್ಕಾ ಸ್ಟಾಂಡ್‌ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಇದರಲ್ಲಿ ಹಿಂದೂ ಸಂಘಟನೆಗಲಕಾರ್ಯಕರ್ತರು, ಗೋಪ್ರೇಮಿಗಳು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಉಡುಪಿ ಗೋರಕ್ಷಾ ಪ್ರಮುಖ್ ಪ್ರಸಾದ್ ಆಂಚನ್, ಮಂಗಳೂರು ಗೋರಕ್ಷ ಪ್ರಮುಖ್ ಹರೀಶ್ ಶೆಟ್ಟಿ, ಜಿಲ್ಲಾ ಸಂಯೋಜಕ ರಾಜೇಶ್ ಉಚ್ಚಿಲ ಮತ್ತು ಭಜರಂಗದಳ ವಿಭಾಗ ಸಂಚಾಲಕ ಪುನಿತ್ ಅತ್ತಾವರ ಮತ್ತಿತರರಿದ್ದರು. ತಿದ್ದುಪಡಿ ಹೇಗೆ? ಯಾಕೆ ?ಪ್ರಸ್ತುತ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂಸಂರಕ್ಷಣಾ ಕಾಯ್ದೆಯಲ್ಲಿ ಅಕ್ರಮ ಗೋಸಾಗಾಟದ ವಾಹನವನ್ನು ಪೊಲೀಸರು ಮುಟ್ಟ ಹಾಕುವ ಅಧಿಕಾರ ನೀಡಲಾಗಿದೆ ಮತ್ತು ಅದನ್ನು ಸಂಬಂಧಪಟ್ಟವರು ಬಿಡಿಸಲು ವಾಹನದ ಮೌಲ್ಯದ ಬ್ಯಾಂಕ್ ಗ್ಯಾರಂಟಿ ನೀಡಬೇಕಾಗುತ್ತದೆ. ಇದರಿಂದ ಅಕ್ರಮ ಗೋಸಾಗಾಟ ಸಾಕಾಷ್ಟು ಕಡಿಮೆಯಾಗಿತ್ತು, ಈಗ ಅಕ್ರಮ ಗೋಸಾಗಾಟಗಾರರಿಗೆ ಬ್ಯಾಂಕ್ ಗ್ಯಾರಂಟಿ ನೀಡುವುದು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಈ ನಿಯಮವನ್ನು ಕೈಬಿಡಲಾಗುತ್ತಿದೆ ಮತ್ತು ಸರ್ಕಾರ ಅಕ್ರಮ ಗೋ ಕಳ್ಳ ಸಾಗಾಟದಾರರ ಮೇಲೆ ಅನುಕಂಪ ತೋರಿಸುತ್ತಿದೆ. ಇದು ಅಕ್ರಮ ಗೋಸಾಗಾಟ - ಗೋಕಳ್ಳತನಕ್ಕೆ ಬೆಂಬಲ ನೀಡಿದಂತಾಗುತ್ತದೆ ಎಂದು ವಿಹಿಂಪ ಆತಂಕ ವ್ಯಕ್ತಪಡಿಸಿದೆ.