ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ವಿಶ್ವಕರ್ಮರು ದೇಶದ ಕಲೆ, ಸಂಸ್ಕೃತಿ, ಜನರ ಬದುಕಿಗೆ ತಮ್ಮದೇ ಕೊಡುಗೆ ನೀಡುತ್ತಾ ಬಂದಿದ್ದಾರೆ. ವಿಶ್ವಕರ್ಮ ಸಮಾಜವು ಸಂಘಟಿತವಾಗಿ ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ಪಟ್ಟಣದ ಲೋಕೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಶ್ರೀ ಸೃಷ್ಠಿ ಕರ್ತ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ಲೋಕಾಪುರ, ಲಕ್ಷಾನಟ್ಟಿ, ಅರಳಿಕಟ್ಟಿ ಗ್ರಾಮದ ಸಹಯೋಗದಲ್ಲಿ ಏರ್ಪಡಿಸಿದ ವಿಶ್ವಕರ್ಮ ಜಯಂತಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಂದು ಕಾರ್ಯ ಯಶಸ್ವಿಗೊಳ್ಳಬೇಕಾದರೆ ವಿಶ್ವಕರ್ಮ ಸಮಾಜ ಬೇಕು. ಎಲ್ಲ ಉದ್ಯೋಗಗಳನ್ನು ವಿಶ್ವಕರ್ಮದವರು ಬಲ್ಲವರಾಗಿದ್ದು, ಇಡೀ ಮಾನವ ಕುಲಕ್ಕೆ ವಿಶ್ವಕರ್ಮರ ಕಾಯಕ ಅಗತ್ಯವಾಗಿದೆ ಎಂದು ಬಣ್ಣಿಸಿದರು.
ಪಂಚ ಕಸುಬುಗಳು ಕೇವಲ ಕೆಲಸಗಳಲ್ಲ, ಸೇವೆಗಳು ಅಲ್ಲ, ಮನುಷ್ಯ ನಾಗರಿಕತೆಯ ಬೆಳವಣೆಗೆಯಲ್ಲಿ ಪಂಚಾಳ ವೃತ್ತಿಗಳ ಪಾಲು ಬಹುದೊಡ್ಡದಾಗಿದ್ದು, ವಿಶ್ವಕರ್ಮರು ಜ್ಞಾನ ವಿಜ್ಞಾನ ತಂತ್ರಜ್ಞಾನದ ಹರಿಕಾರರು ಎಂದು ಬಣ್ಣಿಸಿದರು.ಶಿರೂರದ ರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿ, ವಿಶ್ವಕರ್ಮನು ತನ್ನ ಸಂಕಲ್ಪದಿಂದಲೇ ಸಕಲವನ್ನು ಸೃಷ್ಠಿಸಿದವನು. ಜಗತ್ತಿನ ಜನರೆಲ್ಲರ ಹಿತಕ್ಕಾಗಿ, ಅಗ್ನಿಷ್ಟೋಮಾದಿಯಾಗ, ಎಲ್ಲ ವರ್ಣ ಪ್ರಾಣಿಗಳ ಸ್ಥಿತಿ ಕಾರಣಕ್ಕಾಗಿ ಶಿಲೆ, ಲೋಹ, ಕಾಪ್ಠ, ಸ್ವರ್ಣ ಮೊದಲಾದ ಪ್ರತಿಮಾ ಪಂಚಶಿಲ್ಪಗಳನ್ನು ನಿರ್ಮಿಸಿದವನು. ೬೪ ಕಲೆಗಳಲ್ಲಿ ಪರಿಣತ, ವಾಸ್ತುವಿದ್ಯಾ ಕೋವಿದ, ಧರ್ಮನಿಷ್ಠ ಕರ್ಮವನ್ನೇ ಯೋಗ ಮಾಡಿಕೊಂಡ, ಜ್ಞಾನ ಮತ್ತು ಕರ್ಮ ಮಾರ್ಗಗಳನ್ನು ಸಮನ್ವಯ ಮಾಡಿ ಜಗತ್ತನ್ನು ಸಮಚಿತ್ತದಿಂದ ನಡೆಸುವವನೇ ವಿಶ್ವಕರ್ಮ ಪರಮಾತ್ಮನಾಗಿದ್ದಾನೆ ಎಂದು ತಿಳಿಸಿದರು.
ವೇದಿಕೆ ಮೇಲೆ ಲಕ್ಷಾನಟ್ಟಿಯ ಶಿವಾನಂದ ಮಹಾಸ್ವಾಮೀಜಿ, ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ಭೀಮನಗೌಡ ಪಾಟೀಲ, ಬೀರಪ್ಪ ಮಾಯಣ್ಣವರ, ಶ್ರೀ ಸೃಷ್ಠಿಕರ್ತ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಂಕ್ರೆಪ್ಪ ಬಡಿಗೇರ ಕಾರ್ಯಕ್ರಮದ ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ಪಿ.ಬಿ.ಬಡಿಗೇರ, ಹೆಸ್ಕಾಂ ಅಧಿಕಾರಿ ಮೌನೇಶ ಬಡಿಗೇರ, ಉಪಾಧ್ಯಕ್ಷ ವಿಠ್ಠಲ ಬಡಿಗೇರ, ಕಾರ್ಯದರ್ಶಿ ಹಣಮಂತ ಕಂಬಾರ, ಕಾಳಪ್ಪ ಬಡಿಗೇರ, ಅಶೋಕ ಕಂಬಾರ, ಮಲ್ಲಪ್ಪ ಬಡಿಗೇರ, ಪುಂಡಲೀಕ ಕಂಬಾರ, ಲೋಕಣ್ಣ ಕಂಬಾರ, ಶಂಕ್ರೆಪ್ಪ ಬಡಿಗೇರ, ಮೌನೇಶ ಕಂಬಾರ, ಮಲ್ಲಿಕಾರ್ಜುನ ಕಂಬಾರ, ಈರಪ್ಪ ಬಡಿಗೇರ, ಲೋಕಣ್ಣ ಬಡಿಗೇರ, ಲಕ್ಷ್ಮಣ ಕಂಬಾರ, ಮೌನೇಶ ಕಂಬಾರ, ಶೇಖರ ಲೋಹಾರ, ಭಾರತಿ ಗೌಡನಹಳ್ಳಿ ಕೃಷ್ಣಾ ಯಾದವಾಡ ಕಾರ್ಯಕ್ರಮ ನಿರೂಪಿಸಿದರು. ಸೃಷ್ಠಿ ಕರ್ತ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸೇವಾ ಸಂಘ, ಅರಳಿಕಟ್ಟಿ-ಲಕ್ಷಾನಟ್ಟಿ-ಲೋಕಾಪುರ ಮಹಿಳಾ ಸಂಘ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಾಜ ಬಾಂಧವರು ಇದ್ದರು.