ವಿಐಎಸ್‌ಎಲ್‌ ಶತಮಾನೋತ್ಸವ: ಗಣ್ಯರು, ಸಾಧಕರು, ದಾನಿಗಳಿಗೆ ಸನ್ಮಾನ

| Published : Nov 06 2023, 12:46 AM IST

ವಿಐಎಸ್‌ಎಲ್‌ ಶತಮಾನೋತ್ಸವ: ಗಣ್ಯರು, ಸಾಧಕರು, ದಾನಿಗಳಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ನಿವೃತ್ತ ಕಾರ್ಮಿಕರು, ಸಮಾರಂಭದ ಯಶಸ್ವಿಗೆ ಶ್ರಮಿದವರನ್ನು, ಗಣ್ಯರು ಹಾಗು ಸಾಧಕರನ್ನು ಮತ್ತು ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಶತಮಾನೋತ್ಸವ ಸಮಾರೋಪ ಸಮಾರಂಭ ಭಾನುವಾರ ಯಶಸ್ವಿಯಾಗಿ ನಡೆದಿದ್ದು, ಸಂಜೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಕಾರ್ಮಿಕರು, ಸಮಾರಂಭದ ಯಶಸ್ವಿಗೆ ಶ್ರಮಿದವರನ್ನು, ಗಣ್ಯರು ಹಾಗು ಸಾಧಕರನ್ನು ಮತ್ತು ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ, ಹಿರಿಯ ಚಲನಚಿತ್ರ ನಟ ಎಸ್. ದೊಡ್ಡಣ್ಣ ನೇತೃತ್ವದಲ್ಲಿ ಕಳೆದ 2 ದಿನಗಳ ಕಾಲ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಹಲವು ವೈಶಿಷ್ಟಗಳೊಂದಿಗೆ ಶತಮಾನೋತ್ಸವ ಅದ್ಧೂರಿಯಾಗಿ ನಡೆಯಿತು.

ಹೊರ ದೇಶ, ಹೊರ ರಾಜ್ಯಗಳಿಂದ ಮತ್ತು ರಾಜ್ಯದ ವಿವಿಧ ಮೂಲೆಗಳಿಂದ ಹಾಗು ನಗರದ ವಿವಿಧೆಡೆಗಳಿಂದ ಆಗಮಿಸಿದ್ದ ನಿವೃತ್ತ ಅಧಿಕಾರಿಗಳು, ಕಾರ್ಮಿಕರು ಹಾಗು ಕುಟುಂಬ ವರ್ಗದವರು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಶತಮಾನೋತ್ಸವದ ಕೇಂದ್ರ ಬಿಂದು ದೊಡ್ಡಣ್ಣ ಅವರನ್ನು ಗುತ್ತಿಗೆ ಕಾರ್ಮಿಕರ ಸಂಘ ಹಾಗೂ ಸಂತೋಷ್ ಶಾಮಿಯಾನ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

- - - -ಡಿ5-ಬಿಡಿವಿಟಿ3:

ಭದ್ರಾವತಿ ವಿಐಎಸ್‌ಎಲ್‌ ಶತಮಾನೋತ್ಸವದ ಕೇಂದ್ರ ಬಿಂದು ದೊಡ್ಡಣ್ಣ ಅವರನ್ನು ಗುತ್ತಿಗೆ ಕಾರ್ಮಿಕರ ಸಂಘ ಹಾಗೂ ಸಂತೋಷ್ ಶಾಮಿಯಾನ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.