ಸ್ವಯಂ ಸೇವಕರು ನಿಸ್ವಾರ್ಥದಿಂದ ಸೇವೆ ಸಲ್ಲಿಸಿ: ಚಂದ್ರಶೇಖರ

| Published : Dec 21 2024, 01:16 AM IST

ಸ್ವಯಂ ಸೇವಕರು ನಿಸ್ವಾರ್ಥದಿಂದ ಸೇವೆ ಸಲ್ಲಿಸಿ: ಚಂದ್ರಶೇಖರ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಯಂ ಸೇವಕರ ನಿಸ್ವಾರ್ಥ ಸೇವೆಗಳ ಕುರಿತು ಮತ್ತು ಸ್ವಯಂ ಸೇವಕರ ಜವಾಬ್ದಾರಿಗಳ ಮಾಹಿತಿಯ ಮಾರ್ಗದರ್ಶನ

ನರಗುಂದ: ವಿಪತ್ತು ನಿರ್ವಹಣಾ ಘಟಕದ ಪದಾಧಿಕಾರಿಗಳು ಯಾವುದೇ ಸ್ವಾರ್ಥ ಬಯಸದೆ ನಿಸ್ವಾರ್ಥ ಭಾವನೆಯಿಂದ ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ಸಂಸ್ಥೆಯ ಕೊಪ್ಪಳ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಜೆ ಹೇಳಿದರು.

ಅವರು ತಾಲೂಕಿನ ಕೊಣ್ಣೂರ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ (ರಿ)ನರಗುಂದ/ ರೋಣ ಹಾಗೂ ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಸಹಯೋಗದೊಂದಿಗೆ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದ ಹಿನ್ನೆಲೆ, ಶೌರ್ಯ ಶ್ರೀಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ರಚನೆ ಕುರಿತು, ಸ್ವಯಂ ಸೇವಕರ ನಿಸ್ವಾರ್ಥ ಸೇವೆಗಳ ಕುರಿತು ಮತ್ತು ಸ್ವಯಂ ಸೇವಕರ ಜವಾಬ್ದಾರಿಗಳ ಮಾಹಿತಿಯ ಮಾರ್ಗದರ್ಶನ ನೀಡಿದರು.

ಇದೇ ಸಂದರ್ಭದಲ್ಲಿ ಮಂಗಳೂರಿನ ಉಷಾ ಪೈಯರ್ ಸೇಫ್ಟಿ ಕಂಪನಿಯವರು ವಿಪತ್ತು ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ಸಿದ್ದವ್ವ ಕಳಸಣ್ಣವರ, ಜಿಲ್ಲಾ ನಿರ್ದೇಶಕ ಯೋಗೀಶ್.ಎ, ಎಚ್.ಬಿ.ಅಸೂಟಿ, ಕೊಟ್ರೇಶ್ ಕೊಟ್ರಶೆಟ್ರ್‌ , ಸಂಪನ್ಮೂಲ ವ್ಯಕ್ತಿ ಸಂತೋಷ ಪೀಟರ್ ಡಿಸೋಜಾ, ಕಿಶೋರ್ ಕುಮಾರ, ಜಗದೀಶ್.ಬಿ, ಪಾಂಡುರಂಗ ಪತ್ತಾರ್,ಸಚಿನ್, ನರೇಶ, ರಾಘವೇಂದ್ರ, ರಿಯಾಜ್, ಅಕ್ಷಯ, ಸಿ.ಎಸ್.ಸಿ ಸೇವಾದಾರರು ಹಾಗೂ ನರಗುಂದ ಹಾಗೂ ರೋಣ ತಾಲೂಕಿನ ಸ್ವಯಂ ಸೇವಕರು ಉಪಸ್ಥಿತರಿದ್ದರು.