ಸಾರಾಂಶ
- ಜಯದೇವ ವೃತ್ತದ ಶಿವಯೋಗಿ ಮಂದಿರದಲ್ಲಿ ಕಾರ್ಯಕ್ರಮ ಆಯೋಜನೆ
- ಜಿಲ್ಲಾ ಸಚಿವ ಎಸ್ಸೆಸ್ಸೆಂ, ಮಾಯಕೊಂಡ, ಚನ್ನಗಿರಿ ಶಾಸಕರು ಭಾಗಿ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮೂರನೇ ವರ್ಷದ ಕನ್ನಡ ಹಬ್ಬ ಹಾಗೂ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಡಿ.21ರಂದು ಸಂಜೆ 5.30 ಗಂಟೆಗೆ ನಗರದ ಜಯದೇವ ವೃತ್ತದಲ್ಲಿರುವ ಶಿವಯೋಗಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಗ್ರ ಕರವೇ ಸಂಸ್ಥಾಪಕ ರಾಜಾಧ್ಯಕ್ಷ ವಿ.ಅವಿನಾಶ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸುವರು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಕನ್ನಡಾಂಬೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು. ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಿದ್ದಾರೆ. ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ್ ಕರವೇ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡುವರು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ಉದ್ಯಮಿ ಶಿವಗಂಗಾ ವಿ. ಶ್ರೀನಿವಾಸ್, ಶ್ರೀನಿವಾಸ ದಾಸಕರಿಯಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಚಿದಾನಂದ ಜನಾಯಿ, ಮೇಯರ್ ಕೆ.ಚಮನ್ ಸಾಬ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ದಾವಣಗೆರೆ ತಹಸೀಲ್ದಾರ ಡಾ. ಎಂ.ಬಿ. ಅಶ್ವಥ್, ಪಾಲಿಕೆ ಆಯುಕ್ತೆ ರೇಣುಕಾ, ಯಜಮಾನ್ ರಾಜೇಂದ್ರ, ರಂಗಭೂಮಿ ಕಲಾವಿದ ಸಿ.ಎಲ್. ಚಿಂದೋಡಿ ಚಂದ್ರಾಧರ, ಟಿ.ರವಿಕುಮಾರ್, ಮಣಿ ಸರ್ಕಾರ್, ಚಾಮುಂಡಿ ಕುಮಾರ್, ರಾಜೇಶ್ ಹಾಲೇಕಲ್ಲು, ವಾಸುದೇವ ರಾಯ್ಕರ್, ಆಲೂರು ನಿಂಗರಾಜ್, ಶಾಮನೂರು ಕಣ್ಣಾಳ್ ಅಂಜಿನಪ್ಪ, ಲಕ್ಷ್ಮಣ್, ನಲ್ಲೂರು ಜಿ.ಎನ್. ಅರುಣಾಚಲಾ, ಎ.ನಾಗರಾಜ, ಯಶೋಧ ಯೋಗೇಶ್ವರ್, ಶಿವನಹಳ್ಳಿ ರಮೇಶ್, ಕೆ.ಎಚ್. ರವೀಂದ್ರ ಬಾಬು ಇತರರು ಭಾಗವಹಿಸುವರು ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ವೇದಿಕೆಯ ಮಾಲಾ ನಾಗರಾಜ್, ಡಿ.ಜೆ. ರಾಘವೇಂದ್ರ, ಜೆ.ಜಗದೀಶ್, ಭೋಜರಾಜ್, ಆನಂದ್, ರೆಹಮಾನ್ ಖಾನ್, ಫಯಾಜ್, ಸೈಯದ್ ಇಮ್ತಿಯಾಜ್ ಇತರರು ಇದ್ದರು.
- - - -20ಕೆಡಿವಿಜಿ35:ದಾವಣಗೆರೆಯಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ಹಬ್ಬ, ಕನ್ನಡ ರಾಜ್ಯೋತ್ಸವ ಆಚರಿಸುವ ಕುರಿತು ವಿ.ಅವಿನಾಶ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.