Waive farmers' loans: MLA Kandakur urges
ಯಾದಗಿರಿ: ತಾಲೂಕಿನ ಹೊನಗೇರಾ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡಿ ಶಾಸಕ ಶರಣಗೌಡ ಕಂದಕೂರು ಭಾಷಣ ವೇಳೆ ಸರ್ಕಾರಕ್ಕೆ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ,ಸರಕಾರ ರೈತರ ರಾಷ್ಟ್ರೀಯ ಬ್ಯಾಂಕ್, ಸಹಕಾರ ಸಂಘಗಳ ಸಾಲ ಮನ್ನಾ ಮಾಡಬೇಕು, ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಮಾಡುವಂತೆ ಶಾಸಕ ಕಂದಕೂರು ಆಗ್ರಹ, CM ಡಿಕೆ ಶಿವಕುಮಾರ್ ಅವರಿಗೆ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು.ಸರ್ಕಾರ ಒಂದು ವರ್ಷ ಗ್ಯಾರೆಂಟಿ ಯೋಜನೆ ನಿಲ್ಲಿಸಿ ರೈತರ ಸಾಲ ಮನ್ನಾ ಮಾಡಬೇಕು, ರಾಜ್ಯದಲ್ಲಿ ಈಗ ಮಳೆಯಿಲ್ಲ, ಬೆಳೆಯಿಲ್ಲ, ರೈತರು ವಲಸೆ ಹೋಗುತ್ತಿದ್ದಾರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಕೆಟ್ಟ ದಾರಿಗೆ ಹೋಗಬಾರದು ಅಂದರೆ ಸಾಲ ಮನ್ನಾ ಮಾಡಿ, ಈ ಹಿಂದೆ HDK ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಪುಣ್ಯಾತ್ಮ ಸಾಲ ಮನ್ನಾ ಮಾಡಿದ್ರು, ಈಗ ನೀವು 140 ಸೀಟು ಇರುವ ನೀವು ರೈತರ ಸಾಲ ಮನ್ನಾ ಮಾಡುವಂತೆ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಆಗ್ರಹಿಸಿದರು.
