ಸಾರಾಂಶ
ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವುದು ಕೇವಲ ಜಾತಿಗಣತಿ ಅಲ್ಲ, ಬದಲಿಗೆ ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವುದು ಕೇವಲ ಜಾತಿಗಣತಿ ಅಲ್ಲ, ಬದಲಿಗೆ ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ನಾಗರಿಕರಿಗೂ ಸಮಾನತೆ ಒದಗಿಸುವ ದೃಷ್ಟಿಯಿಂದ ಈ ಮಹತ್ವದ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಈ ಸಮೀಕ್ಷೆಗೆ ಎಲ್ಲಾ ಶಿಕ್ಷಕರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು ಸಮೀಕ್ಷೆಗಾಗಿ ಕೆಲವು ಕಡೆ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಪ್ರತಿ ಶಿಕ್ಷಕರಿಗೆ ದಿನಕ್ಕೆ ಹತ್ತು ಮನೆಗಳ ಗುರಿ ನೀಡಲಾಗಿದ್ದು, ನಿಗದಿತ ಸಮಯದೊಳಗೆ ಸಮೀಕ್ಷೆ ಸಂಪೂರ್ಣಗೊಳ್ಳಿದೆ ಎಂದು ವಿಶ್ವಾಸ ಇದೆ ಎಂದರು. ಲಕ್ಕಿನಕೊಪ್ಪದಲ್ಲಿ ನಾಡಬಾಂಬ್ ಬಳಸಿ ಜಿಂಕೆ ಸಾಯಿಸಲಾಗಿದೆ. ಯಾರಾದರೂ ಶಾಮೀಲಾದರೂ ಅವರನ್ನು ಬಿಡುವುದಿಲ್ಲ. ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.ಧಾರವಾಡದಲ್ಲಿ ಉಪನ್ಯಾಸಕರ ವಯೋಮಿತಿ ಸಡಿಲಿಕೆ ವಿಷಯದಲ್ಲಿ ಹೋರಾಟ ನಡೆಯುತ್ತದೆ. ನಮ್ಮ ಇಲಾಖೆ ಕೋವಿಡ್ ನಂತರ ಸಡಿಲಕೆ ಆಗಿದೆ. ಮೀಸಲಾತಿ ಸರಿ ಅಗಿದೆ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದರುಸಾಗರ ತಾಲೂಕಿಗೆ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಅದು ಸರ್ಕಾರಕ್ಕೆ ಬಿಟ್ಟ ವಿಷಯ. ಸಾಗರವನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಬಗ್ಗೆ ಅಲ್ಲಿನ ನಾಗರಿಕರು ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾ ಕೇಂದ್ರವಾಗಿಸುವ ಕುರಿತು ಹೋರಾಟ ಮಾಡುವುದು ತಪ್ಪಲ್ಲ. ಈ ನಿಟ್ಟಿನಲ್ಲಿ ನಾವು ಕೂಡ ಜನರ ಹೋರಾಟದ ಜೊತೆಗಿರುತ್ತೇವೆ ಎನ್ನುವ ಮೂಲಕ ಸಾಗರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಇಂದು ಪಾಕಿಸ್ತಾನ ಮತ್ತು ಭಾರತದ ನಡುವೆ 20-20 ಫೈನಲ್ ಕ್ರಿಕೆಟ್ ಮ್ಯಾಚ್ ನಡೆಯುತ್ತಿದೆ. ಈ ವಿಚಾರದಲ್ಲಿ ಬಿಜೆಪಿಗೆ ಪೋಸ್ಟ್ ಹಾಕಿಕೊಳ್ಳಲಿ. ಒಂದು ಕಡೆ ಯುದ್ಧ ಎನ್ನುತ್ತಾರೆ ಮತ್ತೊಂದುಕಡೆ ಮ್ಯಾಚ್ ಆಡುತ್ತಾರೆ. ಆಟದಲ್ಲಿ ರಾಜಕೀಯ ಬೇಡ ಎಂದರು.