ಸಾರಾಂಶ
ಕಾಂಗ್ರೆಸ್ ಪಕ್ಷ ಎಂದರೇ ಹೈಕಮಾಂಡ್‌ನಿಂದ ನಿರ್ದೇಶನವಾಗುವ ಪಕ್ಷ. ಮುಂದಿನ ದಿನಗಳಲ್ಲಿ ಸಚಿವರಿಗೆ ಮುಂಬಡ್ತಿ ಮಾಡುವ ವಿಚಾರ ಹೈ ಕಮಾಂಡ್‌ಗೆ ಬಿಟ್ಟಿದ್ದು. ಯಾರಿಗೆ ಬೇಕಾದರೂ ಮುಂಬಡ್ತಿ ಕೊಡಲಿ. ಈ ಬಗ್ಗೆ ನನ್ನ ತಕರಾರಿಲ್ಲ. ರಾಹುಲ್ ಗಾಂಧಿಯವರು ಜಿ. ಪರಮೇಶ್ವರ್ ಅವರಿಗೆ ಮುಂಬಡ್ತಿ ಕೊಟ್ಟರೆ ಅದನ್ನು ತಪ್ಪಿಸಲು ನಮ್ಮಿಂದ ಸಾಧ್ಯಾನಾ! ಪರಮೇಶ್ವರ್ ಅವರಿಗೆ ಕೊಟ್ಟರೇ ಸಂತೋಷ ಎನ್ನುತ್ತಲೇ ಗೃಹ ಸಚಿವ ಪರಮೇಶ್ವರ್ ಪರ ಸಚಿವ ರಾಜಣ್ಣ ಬ್ಯಾಟ್ ಬೀಸಿದಲ್ಲದೇ ಮುಂಬಡ್ತಿ ವಿಚಾರವಾಗಿ ನಮ್ಮ ಹೋರಾಟ ಎಂದಿಗೂ ಇರುತ್ತದೆ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಕಾಂಗ್ರೆಸ್ ಅನ್ನೋದು ಹೈಕಮಾಂಡ್ ನಿರ್ದೇಶಿತ ಪಕ್ಷ. ಹಾಗಾಗಿ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರು ಜಿ. ಪರಮೇಶ್ವರ್ ಅವರಿಗೆ ಮುಂಬಡ್ತಿ ಕೊಟ್ಟರೆ ಅದನ್ನು ತಪ್ಪಿಸಲು ನಮ್ಮಿಂದ ಸಾಧ್ಯಾನ..? ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ನಗರದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಂದರೇ ಹೈಕಮಾಂಡ್‌ನಿಂದ ನಿರ್ದೇಶನವಾಗುವ ಪಕ್ಷ. ಮುಂದಿನ ದಿನಗಳಲ್ಲಿ ಸಚಿವರಿಗೆ ಮುಂಬಡ್ತಿ ಮಾಡುವ ವಿಚಾರ ಹೈ ಕಮಾಂಡ್‌ಗೆ ಬಿಟ್ಟಿದ್ದು. ಯಾರಿಗೆ ಬೇಕಾದರೂ ಮುಂಬಡ್ತಿ ಕೊಡಲಿ. ಈ ಬಗ್ಗೆ ನನ್ನ ತಕರಾರಿಲ್ಲ. ರಾಹುಲ್ ಗಾಂಧಿಯವರು ಜಿ. ಪರಮೇಶ್ವರ್ ಅವರಿಗೆ ಮುಂಬಡ್ತಿ ಕೊಟ್ಟರೆ ಅದನ್ನು ತಪ್ಪಿಸಲು ನಮ್ಮಿಂದ ಸಾಧ್ಯಾನಾ! ಪರಮೇಶ್ವರ್ ಅವರಿಗೆ ಕೊಟ್ಟರೇ ಸಂತೋಷ ಎನ್ನುತ್ತಲೇ ಗೃಹ ಸಚಿವ ಪರಮೇಶ್ವರ್ ಪರ ಸಚಿವ ರಾಜಣ್ಣ ಬ್ಯಾಟ್ ಬೀಸಿದಲ್ಲದೇ ಮುಂಬಡ್ತಿ ವಿಚಾರವಾಗಿ ನಮ್ಮ ಹೋರಾಟ ಎಂದಿಗೂ ಇರುತ್ತದೆ ಎಂದರು. ಮುಂದೆ ಗಣೇಶನ ಹಬ್ಬ, ಈದ್-ಮಿಲಾದ್ ಹಬ್ಬ, ಹಾಸನಾಂಬೆ ಉತ್ಸವ ಕೂಡ ಬರುತ್ತಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಬಂದೋಬಸ್ತ್ ಮಾಡುವಂತೆ ಬಗ್ಗೆ ಚರ್ಚೆ ಮಾಡಿದ್ದೇವೆ. ಇನ್ನು ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು, ಅವರು ಕೂಡ ಬರುವುದಾಗಿ ಹೇಳಿದ್ದಾರೆ. ಹಾಗಾಗಿ ಬಾಗಿನ ಬಿಡಲು ಸ್ವಲ್ಪ ತಡವಾಗಿದೆ. ಇಲ್ಲವಾದರೇ ನಾನು ಮತ್ತು ಸಂಸದರು, ಮುಖಂಡರು ಯಾರು ಇರುತ್ತಾರೆ ಅವರನ್ನು ಕರೆದುಕೊಂಡು ಹೋಗಿ ಹೇಮಾವತಿ ಮತ್ತು ಯಗಚಿಗೆ ಬಾಗಿನ ಅರ್ಪಿಸಬಹುದಿತ್ತು. ಮುಖ್ಯಮಂತ್ರಿಗಳು ಕೂಡ ಮುಡಾ ಕೇಸಿನಲ್ಲಿ ಸಲ್ಪ ಟೆಂಕ್ಷನ್‌ನಲ್ಲಿ ಇರುವುದರಿಂದ ತಡವಾಗಿದೆ. ನಾನು ಮತ್ತೊಮ್ಮೆ ಭೇಟಿ ಮಾಡಿ ಒಂದು ದಿನಾಂಕ ನಿಗದಿ ಮಾಡುತ್ತೇನೆ ಎಂದರು. ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು. ಮುಡಾ ವಿಚಾರದಲ್ಲಿ ನಾನು ಕೂಡ ೧೦ ವರ್ಷಗಳ ಕಾಲ ಪ್ರಾಕ್ಟಿಸ್ ಮಾಡಿದ್ದೇನೆ. ಈಗ ಪಿಟಿಷನಿಲ್ ಸಿದ್ದರಾಮಯ್ಯ, ಅಭಿಷೇಕ್ ಸಿಂಗ್ ಇರುವುದರಿಂದ ಅವರ ವಾದವನ್ನು ಮಂಡಿಸಿದ್ದಾರೆ. ನಾಲ್ಕೈದು ಜನ ಬೇರೆ ಅರ್ಜಿದಾರರ ವಕೀಲರು ಕೂಡ ಅವರ ಮನವಿಯನ್ನು ಕೋರ್ಟ್ ಮುಂದೆ ಗಮನಸೆಳೆಯುವ ಕೆಲಸ ಮಾಡಲಿದ್ದಾರೆ. ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ಇದೇ ವೇಳೆ ನಟ ದರ್ಶನ್ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವರು, ದರ್ಶನ್ ಒಬ್ಬನೇ ಇರೋದಾ. ಅವನೇನು ರೋಲ್ ಮಾಡೆಲ್ಲಾ. ಅವನೊಬ್ಬ ಒಳ್ಳೆಯ ಕಲಾವಿದ ಅನ್ನೋದನ್ನ ನಾವು ಕೂಡ ಒಪ್ಪುತ್ತೇವೆ. ಆದರೆ ಮಾಡಬಾರದನ್ನ ಮಾಡಿದ್ರೆ ಅವನನ್ನು ಒಪ್ಪಲಿಕ್ಕೆ ಆಗುತ್ತಾ. ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದರು.