ಸಾರಾಂಶ
ಹೆಣ್ಣಿಗೆ ಭಾರತದಲ್ಲಿ ಅಪಾರ ಗೌರವ: ಶಾಸಕ ವಿಜಯಾನಂದ ಕಾಶಪ್ಪನವರ
ಕನ್ನಡಪ್ರಭ ವಾರ್ತೆ ಇಳಕಲ್ಲ
ಹೆಣ್ಣು ಹುಟ್ಟಿದರೇ ಒಂದು ಕಾಲದಲ್ಲಿ ಅಪಸ್ವರವಿತ್ತು. ಆದರೆ, ಆ ಹೆಣ್ಣು ನಮ್ಮ ಮನೆಯ ಕಣ್ಣು ಎಂಬುವುದು ಸತ್ಯ. ಕಾರಣ ಭಾರತದಲ್ಲಿ ಹೆಣ್ಣಿಗೆ ಇರುವ ಗೌರವ ಯಾವ ದೇಶದಲ್ಲೂ ಇಲ್ಲ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಅವರು ಇಳಕಲ್ಲ ನಗರದ ಸುವರ್ಣ ಮಂದಿರದಲ್ಲಿ ಕರ್ನಾಟಕ ಬೀದಿ ನಾಟಕ ಅಕಾಡೆಮಿ ಬೆಂಗಳೂರ ಜಿಲ್ಲಾಘಟಕ ಬಾಗಲಕೋಟೆ ಸಿಜಿಕೆ ನೆನಪಿನ ಯುವ ರಂಗ ತರಬೇತಿ ಶಿಬಿರ ಸಮಾರೋಪ ಸಮಾರಂಭದ ಅಂಗವಾಡಿ ಏರ್ಪಡಿಸಿದ್ದ ಗರ್ದಿಗಮ್ಮತ ಅಥಾರ್ತ ಸೂತ್ರದ ಗೊಂಬೆ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿ, ಹೆಣ್ಣು ಜೀವನದ ಕಣ್ಣು ಎಂದು ಹೇಳುವ ನಾವುಗಳು ಹೆಣ್ಣಿನ ಶೋಷಣೆ ಇನ್ನೂಕಡಿಮೆಯಾಗಿಲ್ಲ. ಕಾರಣ ಪ್ರತಿಯೊಬ್ಬರು ಹೆಣ್ಣಿನ ಬಗ್ಗೆ ಇರುವ ಈ ನಾಟಕ ನೋಡಲೇಬೇಕು ಎಂದು ತಿಳಿಸಿ, ಇಂತಹ ಸಮಾಜ ಸುಧಾರಣೆಯ ನಾಟಕಗಳು ರಾಜ್ಯಾದ್ಯಂತ ಪ್ರದರ್ಶನಗೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾದ ಭೂಸೇನಾ ನಿಗಮದ ವಿಶ್ರಾಂತ ಅಧಿಕಾರ ಕಿರಣ ಬಿಜ್ಜಲ ಮಾತನಾಡಿ, ನಾಟಕವನ್ನು ರಂಗದ ಮೇಲೆ ತರುವುದು ಕಷ್ಟದ ಕೆಲಸ. ಕಾರಣ ಇಂತಹ ಕಷ್ಟದ ಕೆಲಸವನ್ನು ನಿರ್ದೇಶಕ ಮಹಾಂತೇಶ ಗಜೇಂದ್ರಗಡ ಚೆನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು.ಸಮಾರಂಭದಲ್ಲಿ ಅಕ್ಕನ ಬಳಗದ ಅಧ್ಯೆಕ್ಷೆ ಸುವರ್ಣಗೊಂಗಡಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ನಿರ್ದೇಶಕ ಮಹಾಂತೇಶ ಗಜೇಂದ್ರಗಡ ಸ್ವಾಗತಿಸಿದರು. ಬಸವರಾಜ ಗವಿಮಠ ನಿರೂಪಿಸಿದರು. ನಾಟಕದಲ್ಲಿ ನಟರಾಗಿ ಸುನಂದ ಕಂದಗಲ್ಲ, ಉಮೇಶ ಟೆಂಕಸಾಲಿ ಹಾಗೂ ಮಗಳ ಪಾತ್ರದಲ್ಲಿ ನಟಿಸಿದ ಕುಂಬಾರ ವಿದ್ಯಾರ್ಥಿನಿಯ ಪಾತ್ರ ಜನರ ಮನ ಗೆದ್ದಿತು.