ಮಹಿಳಾ ಸ್ವಯಂಸೇವಕರಿಂದ ಕಸ ವಿಂಗಡಣೆ ಜಾಗೃತಿ

| Published : Sep 09 2025, 01:00 AM IST

ಸಾರಾಂಶ

ಅರಸೀಕೆರೆ ನಗರಸಭೆ ವತಿಯಿಂದ ಸ್ವಚ್ಛ ಭಾರತ ಮಿಷನ್ (ದ್ವಿತೀಯ ಹಂತ)ದ ಅಡಿಯಲ್ಲಿ, ನಗರದ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ತೆರಳುವ ಮಹಿಳಾ ಸ್ವಯಂಸೇವಕರ ತಂಡವನ್ನು ನಿಯೋಜಿಸಲಾಗಿದೆ. ಇವರು ಕಸ ವಿಂಗಡನೆ ಹಾಗೂ ಕಸದ ಪ್ರಬಂಧನದ ಮಹತ್ವದ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಕಾರ್ಯನಿರತವಾಗಿದ್ದಾರೆ. ಪ್ರತಿ ಐದು ವಾರ್ಡ್‌ಗಳಿಗೆ ಒಬ್ಬರಂತೆ ಜವಾಬ್ದಾರಿ ವಹಿಸಲಾಗಿದೆ. ಈ ಸ್ವಯಂಸೇವಕರು ಕಸ ಸಂಗ್ರಹ ವಾಹನಗಳೊಂದಿಗೆ ಪ್ರತಿದಿನ ಮನೆ ಮನೆಗೆ ತೆರಳಿ ನಾಗರಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರಸಭೆ ವತಿಯಿಂದ ಸ್ವಚ್ಛ ಭಾರತ ಮಿಷನ್ (ದ್ವಿತೀಯ ಹಂತ)ದ ಅಡಿಯಲ್ಲಿ, ನಗರದ ವಿವಿಧ ಬಡಾವಣೆಗಳಲ್ಲಿ ಮನೆಮನೆಗೆ ತೆರಳುವ ಮಹಿಳಾ ಸ್ವಯಂಸೇವಕರ ತಂಡವನ್ನು ನಿಯೋಜಿಸಲಾಗಿದೆ. ಇವರು ಕಸ ವಿಂಗಡನೆ ಹಾಗೂ ಕಸದ ಪ್ರಬಂಧನದ ಮಹತ್ವದ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಕಾರ್ಯನಿರತವಾಗಿದ್ದಾರೆ.ಪ್ರತಿ ಐದು ವಾರ್ಡ್‌ಗಳಿಗೆ ಒಬ್ಬರಂತೆ ಜವಾಬ್ದಾರಿ ವಹಿಸಲಾಗಿದೆ. ಈ ಸ್ವಯಂಸೇವಕರು ಕಸ ಸಂಗ್ರಹ ವಾಹನಗಳೊಂದಿಗೆ ಪ್ರತಿದಿನ ಮನೆ ಮನೆಗೆ ತೆರಳಿ ನಾಗರಿಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವರ ಸೇವಾ ಅವಧಿ ಒಂದು ವರ್ಷವಾಗಿದ್ದು, ಈ ಅವಧಿಯಲ್ಲಿ ಸಾರ್ವಜನಿಕ ಪ್ರತಿಸ್ಪಂದನೆ ಹೇಗಿರುತ್ತದೆ ಎಂಬುದು ಪ್ರಮುಖವಾಗಲಿದೆ.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲ ಮಾತನಾಡಿ ಹಸಿಕಸ, ಒಣಕಸ ಹಾಗೂ ವೈದ್ಯಕೀಯ ಅಥವಾ ಅಪಾಯಕಾರಿ ವಸ್ತುಗಳನ್ನು ಪ್ರತ್ಯೇಕವಾಗಿ ವಿಂಗಡಿಸುವುದು ಒಂದು ನಿತ್ಯದ ಹೊಣೆಗಾರಿಕೆ ಎಂದು ಹೇಳಿದರು. ಈ ಸ್ವಯಂಸೇವಕರ ಮಾರ್ಗದರ್ಶನದ ಪ್ರಕಾರ ನಡೆಯುವುದು ನಗರದ ಸ್ವಚ್ಛತೆಗೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಬಹುಮುಖ್ಯ ಎಂದರು.

ಈ ಸಂದರ್ಭದಲ್ಲಿ ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯೆಯರು ಈ ಜಾಗೃತಿ ಅಭಿಯಾನದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಹಂತದ ಕಾರ್ಯಕ್ರಮವನ್ನು ಬಲವಾಗಿ ಬೆಂಬಲಿಸುತ್ತಿವೆ. ಆದರೆ ಅಧಿಕಾರಿಗಳ ಪ್ರಕಾರ, ನಾಗರಿಕ ಸಮುದಾಯದ ಸಹಕಾರದ ಕೊರತೆ ಕೆಲವೊಮ್ಮೆ ಹಿನ್ನಡೆಗೊಳಿಸುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷ ಮೆಸ್ತ್ರಿ ಮನೋಹರ್, ಪರಿಸರ ಅಭಿಯಂತರ ರವಿ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕರಾದ ಲಿಂಗರಾಜು, ರೇವಣಸಿದ್ದಪ್ಪ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.