ಸಾರಾಂಶ
ಗಣಿಗಾರಿಕೆಯಿಂದ ಮನೆ ಬಿರುಕು, ಶಾಲಾ ಕಟ್ಟಡಗಳು ಮತ್ತು ಚಾವಣಿಗಳ ಕುಸಿತ, ಅಂತರ್ಜಲ ಮಟ್ಟದ ಭಾರಿ ಕುಸಿತ ಮತ್ತು ಬೋರೆವೆಲ್ ಒಣಗುತ್ತಾ ಹೋಗುತ್ತಿರುವ ಪರಿಸ್ಥಿತಿ ಇತ್ಯಾದಿಗಳಿಂದ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಗ್ರಾಮಸ್ಥರು ದೂರಿದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಉಪತಹಸೀಲ್ದಾರರಿಗೆ ಸಾಮೂಹಿಕ ಮನವಿ ಸಲ್ಲಿಸಿ, ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಬೇಕು ಎಂಬ ಒತ್ತಾಯವನ್ನು ಮುಂದಿಟ್ಟರು. ಸರ್ಕಾರ ಈ ಗಣಿಗಾರಿಕೆಯನ್ನು ನಿಲ್ಲಿಸದೆ ಮುಂದುವರೆಸಿದರೆ, ಗ್ರಾಮದಿಂದ ಗ್ರಾಮಕ್ಕೆ ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸುವುದಾಗಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಕಣಕಟ್ಟೆ ಹೋಬಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜನವಿರೋಧಿ ಗಣಿಗಾರಿಕೆ ವಿರುದ್ಧ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗಣಿಗಾರಿಕೆಯಿಂದ ಮನೆ ಬಿರುಕು, ಶಾಲಾ ಕಟ್ಟಡಗಳು ಮತ್ತು ಚಾವಣಿಗಳ ಕುಸಿತ, ಅಂತರ್ಜಲ ಮಟ್ಟದ ಭಾರಿ ಕುಸಿತ ಮತ್ತು ಬೋರೆವೆಲ್ ಒಣಗುತ್ತಾ ಹೋಗುತ್ತಿರುವ ಪರಿಸ್ಥಿತಿ ಇತ್ಯಾದಿಗಳಿಂದ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಗ್ರಾಮಸ್ಥರು ದೂರಿದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಉಪತಹಸೀಲ್ದಾರರಿಗೆ ಸಾಮೂಹಿಕ ಮನವಿ ಸಲ್ಲಿಸಿ, ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸಬೇಕು ಎಂಬ ಒತ್ತಾಯವನ್ನು ಮುಂದಿಟ್ಟರು.ಸರ್ಕಾರ ಈ ಗಣಿಗಾರಿಕೆಯನ್ನು ನಿಲ್ಲಿಸದೆ ಮುಂದುವರೆಸಿದರೆ, ಗ್ರಾಮದಿಂದ ಗ್ರಾಮಕ್ಕೆ ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಿ, ನೇರವಾಗಿ ಗಣಿಗಾರಿಕೆ ನಡೆಯುವ ಪ್ರದೇಶಕ್ಕೆ ತೆರಳಿ ಆಂದೋಲನ ನಡೆಸುವ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಕಸುವನಹಳ್ಳಿಯ ಮಧು, ಹರಿಪ್ರಸಾದ್,ಶಿವಣ್ಣ ಸೋಮಶೆಟ್ಟಿಹಳ್ಳಿಯ ವಿಜಯ ಕುಮಾರ್ , ಅಪ್ಪು,ಕಲ್ಗುಂಡಿಯ ವಸಂತ್ ಆಚಾರ್,ರಂಗನಾಥ್, ಗಿರಿಬೊಮ್ಮನಹಳ್ಳಿ ಹರೀಶ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.