ಕನ್ನಡ ನಾಡು-ನುಡಿ, ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಿ: ಎಂ.ಆರ್‌. ಪಾಟೀಲ

| Published : Oct 02 2024, 01:16 AM IST

ಕನ್ನಡ ನಾಡು-ನುಡಿ, ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಿ: ಎಂ.ಆರ್‌. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯು ಕುಂದಗೋಳಕ್ಕೆ ಆಗಮಿಸಿದ್ದು, ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಕುಂದಗೋಳ: ಕನ್ನಡ ನಾಡು- ನುಡಿ, ಭಾಷೆ, ಸಂಸ್ಕೃತಿ ಉಳಿಸಲು ನಾವೆಲ್ಲರೂ ಶ್ರಮಿಸುವ ಕಾರ್ಯವಾಗಬೇಕಿದೆ. ಕನ್ನಡ ಜ್ಯೋತಿ ರಥಯಾತ್ರೆಯಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವಂತಾಗಲಿ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.

ಮಂಡ್ಯದಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯು ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸ್ವಾಗತಿಸಿ ಮಾತನಾಡಿದರು.

ರತಯಾತ್ರೆಯು 175 ತಾಲೂಕುಗಳಲ್ಲಿ ಸಂಚರಿಸುತ್ತಿದ್ದು. ಕನ್ನಡದ ಮಹತ್ವವನ್ನು ಇಡಿ ರಾಜ್ಯಕ್ಕೆ ಪಸರಿಸುವಂತಹ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ. ಇದೇ ಸಮಯದಲ್ಲಿ 87ನೇ ಅಖೀಲ ಭಾರತ ಸಮ್ಮೇಳನಕ್ಕೆ ಶುಭ ಕೋರಿ ರಥಯಾತ್ರೆಗೆ ವಿಶೇಷ ಪೂಜೆ ಸಲ್ಲಿಸಿದರು.

ರಥಕ್ಕೆ ಅದ್ಧೂರಿ ಸ್ವಾಗತ

ರಥಯಾತ್ರೆಯು ತಾಲೂಕಿನ ಯರಗುಪ್ಪಿ ಗ್ರಾಮಕ್ಕೆ ಆಗಮಿಸಿದ ವೇಳೆ ತಾಲೂಕು ಆಡಳಿತ, ತಾಪಂ, ತಾಲೂಕು ಕಸಾಪ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳಿಂದ ಬರಮಾಡಿಕೊ‍ಳ್ಳಲಾಯಿತು.

ಗ್ರಾಪಂ ಅಧ್ಯಕ್ಷ ಭೀಮಣ್ಣ ಮಾಯಣ್ಣವರ, ಕಸಾಪ ತಾಲೂಕು ಅಧ್ಯಕ್ಷ ಪ್ರಭುಗೌಡ ಸಂಕ್ಯಾಗೌಡಶ್ಯಾನಿ, ತಹಸೀಲ್ದಾರ್‌ ರಾಜು ಮಾವರಕರ ಅವರು ರಥಯಾತ್ರೆಯನ್ನು ಬರಮಾಡಿಕೊಂಡರು.

ಮಾಜಿ ಶಾಸಕ ಎಂ.ಎಸ್. ಅಕ್ಕಿ, ಮುಖಂಡ ಶಿವಾನಂದ ಬೆಂತೂರ, ಅರವಿಂದ ಕಟಗಿ, ಎ.ಬಿ. ಉಪ್ಪಿನ, ಶಂಕರಗೌಡ ದೊಡ್ಡಮನಿ, ಕೃಷಿಕ ಸಮಾಜದ ರಾಜ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರ, ಕರವೇ ಅಧ್ಯಕ್ಷ ಕಲ್ಲಪ್ಪ ಹರಕುಣಿ, ಜಯಕರ್ನಾಟಕ ಸಂಘಟನ ತಾಲೂಕು ಅಧ್ಯಕ್ಷ ಪ್ರವೀಣ ಮುದೆಣ್ಣವರ, ಚುಟುಕು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವೈ.ಡಿ. ಹೊಸೂರ ಸೇರಿದಂತೆ ಹಲವರಿದ್ದರು,

ಕನ್ನಡ ರಥಯಾತ್ರೆಗೆ ಅದ್ಧೂರಿ ಸ್ವಾಗತ

ಹುಬ್ಬಳ್ಳಿ:

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಗಳವಾರ ನಗರದ ಸಿದ್ಧಾರೂಢ ಮಠಕ್ಕೆ ಆಗಮಿಸಿದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಗೆ ಸಕಲ ವಾದ್ಯ ಮೇಳಗಳೊಂದಿಗೆ ಭವ್ಯ ಸ್ವಾಗತ ಕೋರಲಾಯಿತು.

ಮೇಯರ್‌ ರಾಮಣ್ಣ ಬಡಿಗೇರ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಪೂಜೆ ಸಲ್ಲಿಸಿದರು. ನಂತರ ಕನ್ನಡ ಧ್ವಜ ಹಿಡಿದು ಮೆರವಣಿಗೆಗೆ ಚಾಲನೆ ನೀಡಿದರು. ಸಿದ್ಧಾರೂಢ ಮಠದ ಎದುರು ವಿವಿಧ ಕಲಾತಂಡ ಹಾಗೂ ವಾದ್ಯಮೇಳಗಳು ರಥಯಾತ್ರೆಗೆ ಮೆರಗು ನೀಡಿದವು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಧಾರವಾಡದತ್ತ ಪ್ರಯಾಣ ಬೆಳೆಸಿತು.

ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕಸಾಪ ಪದಾಧಿಕಾರಿಗಳು, ಆಟೋ ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ವಿದ್ಯಾ ವಂಟಮುರಿ, ಪ್ರೊ. ಕೆ.ಎಸ್‌. ಕೌಜಲಗಿ, ಎಸ್‌.ಕೆ. ಆದೆಪ್ಪನವರ, ಸಂಧ್ಯಾ ದೀಕ್ಷಿತ, ಗಿರಿಜಾ ಚಿಕ್ಕಮಠ, ಸಿದ್ದಮ್ಮ ಅಡವೆನ್ನವರ, ವೆಂಕಟೇಶ್‌ ಮರೆಗುದ್ದಿ, ಪ್ರೊ. ಶಂಕರಗೌಡ ಸಾತ್ಮಾರ, ಡಾ. ರಮೇಶ ಅಂಗಡಿ, ಗದಿಗೆಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಪದ್ಮಜಾ ಉಮರ್ಜಿ, ಮಂಜುಳಾ ಕುಲಕರ್ಣಿ, ಸಿದ್ಧಾರೂಢ ಟ್ರಸ್ವ್‌ ಅಧ್ಯಕ್ಷ ಜಗದೀಶ್‌ ಕಲ್ಯಾಣಶೆಟ್ಟರ್‌, ಡಾ.ಗೋವಿಂದ ಮಣ್ಣೂರ, ಬಾಳು ಮಗಜಿಕೊಂಡಿ, ಕಲ್ಬುರ್ಗಿ, ಈರಣ್ಣ ತುಪ್ಪದ, ಅಕ್ಷತಾ ರೂಗಿ, ಅನಸೂಯಾ ಪಾಟೀಲ ಸೇರಿದಂತೆ ಅನೇಕರು ಇದ್ದರು.