ಕನ್ನಡಪ್ರಭ ವಾರ್ತೆ ಕೋಲಾರಶೈಕ್ಷಣಿಕ ಮಾರ್ಗಸೂಚಿ ಪಾಲಿಸಿ, ಕಡ್ಡಾಯವಾಗಿ ದಾಖಲಾತಿ ಆಂದೋಲನ ನಡೆಸಿ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಿ. ಸರ್ಕಾರಿ ಶಾಲೆಗಳ ಬಲವರ್ಧನೆಗೆ ಬದ್ಧತೆಯಿಂದ ಕೆಲಸ ಮಾಡಿ ಎಂದು ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ಶಿಕ್ಷಕರಿಗೆ ಕರೆ ನೀಡಿದರು.ತಾಲೂಕಿನ ನರಸಾಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ದಾಖಲಾತಿ ಆಂದೋಲನ ಉದ್ಘಾಟಿಸಿ, ನರಸಾಪುರ ಕ್ಲಸ್ಟರ್ ಹಂತದ ಶಾಲೆಗಳ ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿದರು.ಶಾಲೆಯಲ್ಲಿ ಇರಬೇಕಾದ ದಾಖಲೆಗಳ ನಿರ್ವಹಣೆ ಕುರಿತು ಸಲಹೆ ನೀಡಿದ ಅವರು, ಈ ಬಾರಿ ದ್ವಿಭಾಷಾ ಪದ್ಧತಿಯಲ್ಲಿ ಶಿಕ್ಷಣ ನೀಡಲಿದ್ದು, ಮಕ್ಕಳು, ಪೋಷಕರಿಗೆ ಅಗತ್ಯ ಮಾರ್ಗದರ್ಶನ ನೀಡಿ ಎಂದು ಅವರು ಸಲಹೆ ನೀಡಿದರು.ಜಿಲ್ಲೆಯಾದ್ಯಂತ ಯಾವುದೇ ವಿದ್ಯಾರ್ಥಿ ಶಾಲೆಯಿಂದ ಹೊರಗೆ ಉಳಿಯಬಾರದು ಪ್ರತಿಯೊಬ್ಬ ವಿದ್ಯಾರ್ಥಿಯು ಶಾಲೆಗೆ ದಾಖಲಾಗಬೇಕು, ಹಾಜರಾಗಬೇಕು, ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಡಿಡಿಪಿಐ ತಿಳಿಸಿದರು.

ಅರ್ಹ ವಯಸ್ಸಿನ ಪ್ರತಿಯೊಬ್ಬ ಮಗುವು ಶಾಲೆಗೆ ಹಾಜರಾಗಬೇಕು. ನಿಯಮಿತವಾಗಿ ದಾಖಲಾಗಬೇಕು. ಈ ನಿಟ್ಟಿನಲ್ಲಿ ಕೇವಲ ಶಿಕ್ಷಕರೇ ಅಲ್ಲದೆ ಪೋಷಕರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದು ತಿಳಿಸಿದರು.ಈಗಾಗಲೇ ವಿದ್ಯಾರ್ಥಿಯ ಸರ್ವತೋಮುಖ ಪ್ರಗತಿಗೆ ಪೂರಕವಾಗಿ ಕಲಿಕಾ ವಾತಾವರಣ ಪ್ರತಿ ಶಾಲೆಯಲ್ಲಿ ನಿರ್ಮಿಸಿದ್ದು ಅಗತ್ಯ ಪೀಠೋಪಕರಣ ಶಿಕ್ಷಕರನ್ನು ಒದಗಿಸಿ, ವಿದ್ಯಾರ್ಥಿಗಳನ್ನು ಪ್ರಭುತ್ವ ನಾಗರಿಕರನ್ನಾಗಿ ತಯಾರು ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರಗತಿಗೆ ಕೇವಲ ಶಿಕ್ಷಕರಷ್ಟೇ ಜವಾಬ್ದಾರರಲ್ಲದೆ ಅವರನ್ನು ಪೋಷಣೆ ಮಾಡುತ್ತಿರುವ ಪೋಷಕರು ಈ ಜವಾಬ್ದಾರಿ ಹೊರಬೇಕು. ಈ ದಿಸೆಯಲ್ಲಿ ತಮ್ಮ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ತಯಾರು ಮಾಡುವ ಹೊಣೆಗಾರಿಕೆ ಹೊರಬೇಕು ಎಂದರು. ಆಂದೋಲನದಲ್ಲಿ ಸರ್ವ ಶಿಕ್ಷಣ ಅಭಿಯಾನ ತಾಲೂಕು ಸಮನ್ವಯಾಧಿಕಾರಿ ರಾಧಮ್ಮ, ತಾಲೂಕು ಸಮನ್ವಯಾಧಿಕಾರಿ ರಾಧಮ್ಮ, ಇಸಿಒ ಶ್ರೀನಿವಾಸ್, ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಮುಖ್ಯೋಪಾಧ್ಯಾಯ ಜಗನ್ನಾಥ್, ಕೆಪಿಎಸ್ ಕಾಲೇಜಿನ ಪ್ರಾಂಶುಪಾಲರಾದ ಮಂಜುಳ, ಬಿಆರ್‌ಪಿ ಮಲ್ಲಿಕಾರ್ಜುನ್, ಹನುಮಾನ್ ಸಿಂಗ್, ಶ್ರೀರಾಮಯ್ಯ, ವೆಂಕಟರವಣ, ಶೈಲಜಾ, ಹಂಸವೇಣಿ, ಭಾರತಿ, ಸೌಮ್ಯಾ, ಕೋಮಲ, ನಾರಾಯಣಮ್ಮ, ಮನುಜ, ರೇಣುಕಾ, ಅರ್ಚನಾ ಇದ್ದರು.

೨೨ಕೆಎಲ್‌ಆರ್-೧

ಕೋಲಾರ ತಾಲೂಕಿನ ನರಸಾಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ದಾಖಲಾತಿ ಆಂದೋಲನವನ್ನು ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ಉದ್ಘಾಟಿಸಿದರು.