ಕನ್ನಡಪ್ರಭ ವಾರ್ತೆ ಶಿರಾ ಸಮಾಜದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಹಬ್ಬಗಳು ಮಹತ್ವದ ಪಾತ್ರ ವಹಿಸುತ್ತವೆ. ಸ್ನೇಹ ಪ್ರೀತಿ ವಿಶ್ವಾಸದಿಂದ ಜೀವನ ಕಟ್ಟಿಕೊಂಡು ಮೌಲ್ಯಯುತ ಜೀವನ ಕಟ್ಟಿಕೊಂಡಾಗ ಗ್ರಾಮಗಳಲ್ಲಿ ನೆಮ್ಮದಿ ಮೂಡಲು ಸಾಧ್ಯ ಎಂದು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಪಿಎಸ್ಐ ಹರೀಶ್ ಹೇಳಿದರು.ಅವರು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಆವರಣದಲ್ಲಿ ಪಿಎಸ್ಐ ಹರೀಶ್ ನೇತೃತ್ವದಲ್ಲಿ ಮುಸ್ಲಿಂರ ಬಕ್ರೀದ್ ಹಬ್ಬದ ಅಂಗವಾಗಿ ಶುಕ್ರವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು. ಎಲ್ಲರ ಭಾವನೆಗೆ ಗೌರವ ಕೊಡುವ ರೀತಿ ಹಬ್ಬಗಳನ್ನು ಆಚರಿಸಿ. ಸಮಾಜದಲ್ಲಿ ನೆಮ್ಮದಿ ಮೂಡಿಸಬೇಕು, ಬಕ್ರೀದ್ ಹಬ್ಬ ಸಡಗರ ಸಂಭ್ರಮದಿಂದ ಆಚರಿಸಿ ಎಂದು ಮುಸ್ಲಿಂರಿಗೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ನೂರಾನಿ ಮಸೀದಿ ಅಧ್ಯಕ್ಷ ಬಾಬಾಜಾನ್, ಉಪಾಧ್ಯಕ್ಷ ಫಕ್ರುದ್ದೀನ್ ಬಾಬು, ಮಾಜಿ ಅಧ್ಯಕ್ಷ ವಜೀರ್ ಖಾನ್, ನಿಸಾರ್ ಅಹಮದ್, ಅಲ್ತಾಫ್, ಬರಗೂರು ಲತೀಫ್, ಗಂಡಿಹಳ್ಳಿ ಬುಡೇ ನ್ ಸಾಬ್, ಮುಖ್ಯಪೇದೆ ಹನುಮಂತಚಾರ್ ಸೇರಿದಂತೆ ಬ್ರಹ್ಮಸಂದ್ರ ಬರಗೂರು, ಗಂಡಿಹಳ್ಳಿ , ಪಟ್ಟನಾಯಕನಹಳ್ಳಿ ಗ್ರಾಮಗಳ ಮುಸ್ಲಿಂ ಬಾಂಧವರು ಸಭೆಯಲ್ಲಿ ಹಾಜರಿದ್ದರು.
ಸಾಮರಸ್ಯ ಮೂಡಿಸುವಲ್ಲಿ ಹಬ್ಬಗಳ ಪಾತ್ರ ಮಹತ್ವದ್ದು
ಸಮಾಜದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಹಬ್ಬಗಳು ಮಹತ್ವದ ಪಾತ್ರ ವಹಿಸುತ್ತವೆ. ಸ್ನೇಹ ಪ್ರೀತಿ ವಿಶ್ವಾಸದಿಂದ ಜೀವನ ಕಟ್ಟಿಕೊಂಡು ಮೌಲ್ಯಯುತ ಜೀವನ ಕಟ್ಟಿಕೊಂಡಾಗ ಗ್ರಾಮಗಳಲ್ಲಿ ನೆಮ್ಮದಿ ಮೂಡಲು ಸಾಧ್ಯ ಎಂದು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಪಿಎಸ್ಐ ಹರೀಶ್ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.