ಬೀದರ್‌: ಜಾಂಬೊರೇಟ್‌ನಲ್ಲಿ ಅಗ್ನಿ ಅನಾಹುತ, ಯೋಗ ಪ್ರಾತ್ಯಕ್ಷಿಕೆ

| Published : Feb 12 2024, 01:34 AM IST

ಸಾರಾಂಶ

ಬೀದರ್‌ನ ಶಾಹೀನ್‌ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಜಾಂಬೊರೇಟ್‌ನಲ್ಲಿ ಅಗ್ನಿ ಅನಾಹುತ ತಡೆಯುವ ಕುರಿತು ಮಕ್ಕಳಿಗೆ ತೋರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ಇಲ್ಲಿಯ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಕಲ್ಯಾಣ ಕರ್ನಾಟಕ ಪ್ರಥಮ ಜಾಂಬೊರೇಟ್‌ನಲ್ಲಿ ಅಗ್ನಿ ಅನಾಹುತ ತಡೆ ಹಾಗೂ ಯೋಗ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರವೀಂದ್ರ ಅಶೋಕ ಘಾಟಗೆ ಅವರ ನೇತೃತ್ವದಲ್ಲಿ ಅಗ್ನಿಶಾಮಕ ಠಾಣೆಯ 15 ಸಿಬ್ಬಂದಿ ಅಗ್ನಿ ಅನಾಹುತ ತಡೆ ಅಣಕು ಪ್ರದರ್ಶನ ನೀಡಿದರು. ಅಗ್ನಿಶಾಮಕ ಠಾಣೆಯ ಮೂರು ವಾಹನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಯೋಗ ಸಾಧಕರಾದ ಆನಂದ ಮೋಳಕೇರಾ ಹಾಗೂ ಯೋಗೇಂದ್ರ ಯದಲಾಪುರೆ ಅವರು ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಜಿಲ್ಲಾವಾರು ಜಾತ್ರಾ ಉತ್ಸವ, ದೇಶಭಕ್ತಿ ಗೀತೆ ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ಜಾಂಬೊರೇಟ್ ಮುಖ್ಯಸ್ಥ ಡಾ. ಅಬ್ದುಲ್ ಖದೀರ್, ಹೆಚ್ಚುವರಿ ಮುಖ್ಯಸ್ಥೆ ಗುರಮ್ಮ ಸಿದ್ಧಾರೆಡ್ಡಿ, ಸಂಯೋಜಕಿ ಮಲ್ಲೇಶ್ವರಿ ಜುಜಾರೆ, ಕಾರ್ಯದರ್ಶಿ ಡಾ. ಎಚ್.ಬಿ. ಭರಶೆಟ್ಟಿ, ಖಜಾಂಚಿ ತೌಸಿಫ್, ಸಿ.ಬಿ. ಪಾಟೀಲ ಓಕಳಿ, ಡಾ. ವಿಕ್ರಮ ಸಿದ್ಧಾರೆಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗೌತಮ ಅರಳಿ, ಗುಂಡಪ್ಪ ಹುಡಗಿ, ಅಬ್ದುಲ್ ಮುಖಿತ್, ಅಬ್ದುಲ್ ಹಸೀಬ್, ಸುಜಾತಾ ಪೂಜಾರಿ, ಶಂಭುಲಿಂಗ ವಾಲ್ದೊಡ್ಡಿ ಮೊದಲಾದವರು ಇದ್ದರು.