ಕನ್ನಡ ಬಳಸುವುದರಿಂದ ಮಾತ್ರ ಉಳಿಸಲು ಸಾಧ್ಯ-ತಹಸೀಲ್ದಾರ್‌ ರೇಣುಕಮ್ಮ

| Published : Nov 02 2024, 01:17 AM IST / Updated: Nov 02 2024, 01:18 AM IST

ಕನ್ನಡ ಬಳಸುವುದರಿಂದ ಮಾತ್ರ ಉಳಿಸಲು ಸಾಧ್ಯ-ತಹಸೀಲ್ದಾರ್‌ ರೇಣುಕಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಬಳಸುವುದರಿಂದ ಮಾತ್ರ ಉಳಿಸಲು ಸಾಧ್ಯ, ಭಾಷೆ ನಮ್ಮ ಸಂಸ್ಕೃತಿ ಇತಿಹಾಸದ ಅಭಿವ್ಯಕ್ತಿ. ಕನ್ನಡ ನಾಡಿಗಾಗಿ ಶ್ರಮಿಸಿದವರನ್ನು ಸ್ಮರಿಸಿ, ಸಾಹಿತ್ಯದ ಮೂಲಕ ಕನ್ನಡ ಕಟ್ಟಿದವರನ್ನು ಗೌರವಿಸೋಣ ಎಂದು ಹಾನಗಲ್ಲ ತಹಸೀಲ್ದಾರ್ ಎಸ್. ರೇಣುಕಮ್ಮ ತಿಳಿಸಿದರು.

ಹಾನಗಲ್ಲ: ಕನ್ನಡ ಬಳಸುವುದರಿಂದ ಮಾತ್ರ ಉಳಿಸಲು ಸಾಧ್ಯ, ಭಾಷೆ ನಮ್ಮ ಸಂಸ್ಕೃತಿ ಇತಿಹಾಸದ ಅಭಿವ್ಯಕ್ತಿ. ಕನ್ನಡ ನಾಡಿಗಾಗಿ ಶ್ರಮಿಸಿದವರನ್ನು ಸ್ಮರಿಸಿ, ಸಾಹಿತ್ಯದ ಮೂಲಕ ಕನ್ನಡ ಕಟ್ಟಿದವರನ್ನು ಗೌರವಿಸೋಣ ಎಂದು ಹಾನಗಲ್ಲ ತಹಸೀಲ್ದಾರ್ ಎಸ್. ರೇಣುಕಮ್ಮ ತಿಳಿಸಿದರು.

ಶುಕ್ರವಾರ ಹಾನಗಲ್ಲಿನ ಮಹಾತ್ಮಾಗಾಂಧಿ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಹರಿದು ಹಂಚಿದ ಕನ್ನಡವನ್ನು ಒಟ್ಟುಗೂಡಿಸಿದ ಪರಿಣಾಮವಾಗಿ ಈಗ ಕನ್ನಡದ ಭವ್ಯತೆಯ ಸಂಭ್ರಮ ಕಾಣುತ್ತಿದೆ. ಭಾಷಾವಾರು ಪ್ರಾಂತ್ಯಗಳ ಮೂಲಕ ಭಾರತದ ಭಾಷೆಗಳಿಗೆ ಸ್ವತಂತ್ರ, ಮುಕ್ತ ಅವಕಾಶ ಕಲ್ಪಿಸಿದ್ದನ್ನು ನೆನೆಯಬೇಕು. ಇಷ್ಟೆಲ್ಲದರ ನಡುವೆ ಕನ್ನಡಕ್ಕೆ ಹತ್ತು ಹಲವು ಸವಾಲುಗಳಿವೆ. ಎಲ್ಲವನ್ನು ಎದುರಿಸಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸುವ ಶಕ್ತಿ ಕನ್ನಡಿಗರಿಗಿದೆ. ಕನ್ನಡ ಅನ್ನದ ಭಾಷೆಯಾಗಬೇಕು. ಯಾವುದೇ ಭಾಷೆ ಕಲಿಯಲು ಯಾರೂ ತಕರಾರು ಮಾಡಲಾರರು. ಆದರೆ, ಕನ್ನಡಿಗರಿಗೆ ಕನ್ನಡ ಮೊದಲ ಆದ್ಯತೆಯಾಗಲಿ ಎಂದರು.

ಮೆರವಣಿಗೆ ಚಾಲನೆ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಸದಸ್ಯೆ ಶಂಶಿಯಾಬಾನು ಬಾಳೂರ, ಪರಶುರಾಮ ಖಂಡೂನವರ, ಗ್ರೇಡ್-2 ತಹಸೀಲ್ದಾರ್ ರವಿಕುಮಾರ ಕೊರವರ, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಮಾರುತಿ ಶಿಡ್ಲಾಪೂರ, ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಗಂಗಾ ಹಿರೇಮಠ, ವೈ.ಕೆ. ಜಗದೀಶ, ಪರಶುರಾಮ ಪೂಜಾರ, ವಿ.ವಿ. ಸಾಲಿಮಠ, ಸೋಮಶೇಖರ ಕೋತಂಬರಿ, ವಿನಾಯಕ ಕುರುಬರ, ರಾಘವೇಂದ್ರ ಮಾಡಳಲ್ಲಿ, ಬಿ.ಎಸ್. ರುದ್ರೇಶ, ಸಿ.ಎಸ್. ಲಂಗಟಿ, ರಾಕೇಶ ಜಿಗಳಿ, ನಿರಂಜನ ಗುಡಿ, ಸಂತೋಷ ವಡ್ಡರ, ಪ್ರಾಚಾರ್ಯ ನಾಸಿಪುಡಿ, ಎಸ್.ಎಫ್. ಕಮ್ಮಾರ, ಗಣೇಶ ವಡ್ಡರ, ಆರ್.ಬಿ. ರೆಡ್ಡಿ, ಎಚ್.ಟಿ. ಕೋಣನಕೊಪ್ಪ, ಅರವಿಂದ ಸುಗಂಧಿ, ಶ್ರೀನಿವಾಸ ದೀಕ್ಷಿತ್, ನಾಗರಾಜ ಮಲ್ಲಮ್ಮನವರ ಮೊದಲಾದವರಿದ್ದರು.