ದುಶ್ವಟಗಳಿಗೆ ಯುವಕರು ಬಲಿ

| Published : Sep 10 2025, 01:04 AM IST

ಸಾರಾಂಶ

ಬದುಕಿನ ಬವಣೆಯಿಂದ ದೂರವಾಗಬೇಕಾದರೆ ಶರಣರು, ಸಂತರು ಹಾಗೂ ದಾರ್ಶನಿಕರ ಆದರ್ಶಗಳೇ ಔಷಧಿಯಾಗಿವೆ. ಪ್ರತಿಯೊಬ್ಬರೂ ಸಜ್ಜನರ ಸಂಘದ ಜತೆ ಬದುಕಬೇಕು. ೧೨ನೇ ಶತಮಾನದಲ್ಲಿ ಹೂಗಾರ ಮಾದಯ್ಯನವರು ನಿತ್ಯ ಕಾಯಕ ನಿಷ್ಠರಾಗಿದ್ದರು.

ಯಲಬುರ್ಗಾ:

ಯುವ ಜನಾಂಗ ಸಂಸ್ಕೃತಿ, ಸಂಸ್ಕಾರ ಬಿಟ್ಟು, ದುಶ್ಚಟಗಳ ದಾಸರಾಗಿ ಸುಂದರ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ದುರ್ದೈವ ಸಂಗತಿ ಎಂದು ರಾಷ್ಟ್ರೀಯ ಬಸವ ದಳ ಕಾರ್ಯದರ್ಶಿ ಬಸವರಾಜ ಹೂಗಾರ ಹೇಳಿದರು.

ತಾಲೂಕಿನ ಗುಳೆ ಗ್ರಾಮದ ವಿಶ್ವಗುರು ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ, ಯುವ ಘಟಕ ಹಾಗೂ ಅಕ್ಕನಾಗಲಾಂಬಿಕೆ ಮಹಿಳಾ ಗಣದಿಂದ ೧೧೫ನೇ ಮಾಸಿಕ ಹುಣ್ಣುಮೆಯ ಬಸವಾನುಭವ ಗೋಷ್ಠಿ ಹಾಗೂ ಹೂಗಾರ ಮಾದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬದುಕಿನ ಬವಣೆಯಿಂದ ದೂರವಾಗಬೇಕಾದರೆ ಶರಣರು, ಸಂತರು ಹಾಗೂ ದಾರ್ಶನಿಕರ ಆದರ್ಶಗಳೇ ಔಷಧಿಯಾಗಿವೆ. ಪ್ರತಿಯೊಬ್ಬರೂ ಸಜ್ಜನರ ಸಂಘದ ಜತೆ ಬದುಕಬೇಕು. ೧೨ನೇ ಶತಮಾನದಲ್ಲಿ ಹೂಗಾರ ಮಾದಯ್ಯನವರು ನಿತ್ಯ ಕಾಯಕ ನಿಷ್ಠರಾಗಿದ್ದರು. ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಮುನ್ನಡೆಯಬೇಕು ಎಂದರು.

ಶರಣ ಬಸಣ್ಣ ಹೊಸಳ್ಳಿ ಮಾತನಾಡಿ, ಬಸವಣ್ಣನವರು ಎಲ್ಲ ಶರಣರಿಗೆ ಒಂದೊಂದು ಕಾಯಕದ ಗುರುತು ಕೊಟ್ಟು, ಕಾಯಕದಲ್ಲೇ ಕೈಲಾಸ ಕಾಣುವ ಶಕ್ತಿ ಇದೆ ಎಂಬುದನ್ನು ತಮ್ಮ ವಚನಗಳ ಮೂಲಕ ತಿಳಿಯಪಡಿಸಿದ್ದಾರೆ. ಶರಣರ ಚಿಂತನೆಗಳನ್ನು ಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂದರು.

ಈ ವೇಳೆ ಗಣ್ಯರಾದ ದೇವಪ್ಪ ಕೋಳೂರು, ರೇವಣಪ್ಪ ಫಕೀರಪ್ಪ ಮಂತ್ರಿ, ಲಿಂಗನಗೌಡ ದಳಪತಿ, ಗಿರಿಮಲ್ಲಪ್ಪ ಪರಂಗಿ, ಪಂಪಾಪತಿ ಹೊಸಳ್ಳಿ, ಜಗದೀಶ ಮೇಟಿ, ದೇವೇಂದ್ರಪ್ಪ ಆವಾರಿ, ಬಸವಣ್ಣ ಹೊಸಳ್ಳಿ, ಯಮನೂರಪ್ಪ ಕೋಳೂರು ನಿಜಲಿಂಗಪ್ಪ, ಮಲ್ಲಿಕಾರ್ಜುನ ಮಂತ್ರಿ, ನಿಂಗಪ್ಪ, ಚನ್ನಬಸವಣ್ಣ ಮಂತ್ರಿ, ಹನುಮೇಶ ಹೊಸಳ್ಳಿ, ನಾಗಮ್ಮ ಜಾಲಿಹಾಳ, ಬಸಮ್ಮ ಹೂಗಾರ, ಶಂಕ್ರಮ್ಮ ಹೊಸಳ್ಳಿ, ಸಾವಿತ್ರಮ್ಮ ಆವಾರಿ, ನಿಂಗಮ್ಮ ಕೋಳೂರು, ವಿಶಾಲಾಕ್ಷಮ್ಮ ಗುರುಲಿಂಗಮ್ಮ ಸೇರಿದಂತೆ ಮತ್ತಿತರರು ಇದ್ದರು.