ಸಾರಾಂಶ
ಖ್ಯಾತ ತಬಲಾ ಮಾಂತ್ರಿಕ ಉಸ್ತಾದ ಝಾಕಿರ್ ಹುಸೇನ್ ಸಂಗೀತಗಾರರಿಗೆ ಎಲ್ಲ ಕಾಲಕ್ಕೂ ಮಾದರಿಯಾಗಿ ನಿಲ್ಲಬಹುದಾದ ಸಂಗೀತಗಾರ. ಸಂಗೀತವು ಸಂತೃಪ್ತ ಜೀವನಕ್ಕೆ ಸಂಜೀವಿನಿ ಎಂದು ನಂಬಿ ಬದುಕಿದ ಮಹಾನ್ ಕಲಾವಿದ ಎಂದು ಡಾ. ಸುದೀಪ ಪಂಡಿತ ಹೇಳಿದರು.
ಹಾವೇರಿ: ಖ್ಯಾತ ತಬಲಾ ಮಾಂತ್ರಿಕ ಉಸ್ತಾದ ಝಾಕಿರ್ ಹುಸೇನ್ ಸಂಗೀತಗಾರರಿಗೆ ಎಲ್ಲ ಕಾಲಕ್ಕೂ ಮಾದರಿಯಾಗಿ ನಿಲ್ಲಬಹುದಾದ ಸಂಗೀತಗಾರ. ಸಂಗೀತವು ಸಂತೃಪ್ತ ಜೀವನಕ್ಕೆ ಸಂಜೀವಿನಿ ಎಂದು ನಂಬಿ ಬದುಕಿದ ಮಹಾನ್ ಕಲಾವಿದ ಎಂದು ಡಾ. ಸುದೀಪ ಪಂಡಿತ ಹೇಳಿದರು.
ನಗರದ ಗೆಳೆಯರ ಬಳಗದ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಗುರುಕೃಪಾ ಗಾನಮಂದಿರ, ಸುಸ್ವರ ಸಂಗೀತ ವಿದ್ಯಾಲಯ, ಸಂಸ್ಕೃತಿ ಅಸೋಸಿಯೇಶನ್, ಬೆಂಗಳೂರಿನ ಗಾಂಧಾರ ಸಂಗೀತ ಸಭಾ ಸಹಯೋಗದಲ್ಲಿ ಜರುಗಿದ ಝಾಕಿರ್ ಹುಸೇನ್ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ತಬಲಾ ವಾದಕ ಪಂ. ನೀಲಕಂಠಪ್ಪ ಬಡಿಗೇರ ಮತ್ತು ಉಸ್ತಾದ ಹುಮಾಯೂನ್ ಹರ್ಲಾಪುರ ಅವರನ್ನು ಸನ್ಮಾನಿಸಲಾಯಿತು.ನಾಡಿನ ಬೇರೆ ಬೇರೆ ಭಾಗದಿಂದ ಬಂದಿದ್ದ ಶಾಸ್ತ್ರೀಯ ಸಂಗೀತ ಕಲಾವಿದರು ನಾಲ್ಕು ಗಂಟೆಗಳ ಕಾಲ ನಗರದ ಸಂಗೀತ ಪ್ರೇಮಿಗಳನ್ನು ತಮ್ಮ ಮನಮೋಹಕ ಹಾಡುಗಾರಿಕೆಯಿಂದ ತಣಿಸಿದರು. ವಿಶೇಷವಾಗಿ ನೌಶಾದ ಹರ್ಲಾಪುರ ಮತ್ತು ನಿಶಾದ್ ಹರ್ಲಾಪುರ, ಯುವ ಪ್ರತಿಭಾವಂತ ಗಾಯಕ ತುಷಾರ ಮಳಗಿ, ವಿದುಷಿ ವಾಣಿ ಕಣೇಕಲ್, ಗಿರಿಜಾ ಮಳಗಿ, ಸಹ ವಾದ್ಯಗಾರರಾದ ಶ್ರವಣ ಕುಲಕರ್ಣಿ, ಕರಬಸಪ್ಪ ಮಾವಿನತೋಪ, ವಿಕ್ರಮ ಮನ್ನಾರಿ ಮುಂತಾದವರು ಪ್ರೇಕ್ಷಕರ ಮನಗೆದ್ದರು.
ಸಂಗೀತ ಪ್ರೇಮಿಗಳಾದ ಡಾ. ಅಂಜು ಪಂಡಿತ, ಶೀಲಾ ಪಾಟೀಲ, ಡಾ. ಸಿದ್ದಲಿಂಗೇಶ ಬೆನ್ನೂರ, ರಾಜೇಶ್ವರಿ ಬೆನ್ನೂರ, ಮೃತ್ಯುಂಜಯ ಶೀಲವಂತರ, ಭಾರತಿ ಯಾವಗಲ್, ಅನಿತಾ ಉಗರಗೋಳ, ಪ್ರಕಾಶಗೌಡ ಪಾಟೀಲ, ಬಾಬುರಾವ್ ಹುದ್ದಾರ, ಆರ್.ಸಿ. ನಂದೀಹಳ್ಳಿ, ಶಂಕರ ತುಮ್ಮಣ್ಣನವರ, ರಾಘವೇಂದ್ರ ಕಬಾಡಿ, ಶಿವಣ್ಣ ಬಣಕಾರ, ಭರತರಾಜ ಹಜಾರೆ ಮುಂತಾದವರು ಪಾಲ್ಗೊಂಡಿದ್ದರು.ಕಾರ್ಯಕ್ರಮವನ್ನು ಸುರೇಶ ಕಣೇಕಲ್ ನಿರ್ವಹಿಸಿದರು. ರವೀಂದ್ರ ಮಳಗಿ ಸಂಗೀತ ಸಭೆಯನ್ನು ಸಂಯೋಜಿಸಿದ್ದರು.